ನಿರಂತರ ಪರಿಶ್ರಮದಿಂದ ಯಶಸ್ಸು ಸಾಧ್ಯ

KannadaprabhaNewsNetwork |  
Published : Oct 17, 2025, 01:04 AM IST
ಚಿಕ್ಕೋಡಿ  | Kannada Prabha

ಸಾರಾಂಶ

ಸೋಲಿಗೆ ಎದೆಗುಂದದೆ ನಿರಂತರ ಪರಿಶ್ರಮ ವಹಿಸಿದರೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಹಾಗೂ ಸಿಟಿಯ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಶ್ವೇತಾ ಬೀಡಿಕರ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸೋಲಿಗೆ ಎದೆಗುಂದದೆ ನಿರಂತರ ಪರಿಶ್ರಮ ವಹಿಸಿದರೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಹಾಗೂ ಸಿಟಿಯ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ ಶ್ವೇತಾ ಬೀಡಿಕರ ಹೇಳಿದರು.

ಪಟ್ಟಣದ ಆರ್.ಡಿ.ಹೈಸ್ಕೂಲ್ ಮೈದಾನದಲ್ಲಿ ಸಿಟಿಇ ಸಂಸ್ಥೆಯ ಅಂಗಸಂಸ್ಥೆಯಾದ ಶ್ರೀಮತಿ ಅಹಲ್ಯಬಾಯಿ ಅಪ್ಪನಗೌಡ ಪಾಟೀಲ ಕಲಾ ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಅಂತರಮಹಾವಿದ್ಯಾಲಯ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಸೋಲಿಗೆ ಯಾವತ್ತೂ ಕುಗ್ಗದೇ ನಿರಂತರವಾಗಿ ಪರಿಶ್ರಮ ವಹಿಸಿದರೆ ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಲು ಸಾಧ್ಯ. ನಾನು ಕಲಿತ ಕಾಲೇಜಿಗೆ ಇವತ್ತು ಅತಿಥಿಯಾಗಿ ಬಂದಿರುವುದು ಅತ್ಯಂತ ಖುಷಿ ತಂದಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಹನುಂತಯ್ಯ ಪೂಜಾರಿ ಮಾತನಾಡಿ, ವಿದ್ಯಾರ್ಥಿನಿಯರು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು.ಈ ನಿಟ್ಟಿನಲ್ಲಿ ಅಕ್ಕಮಹಾದೇವಿ ಮಹಾವಿದ್ಯಾಲಯವು ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.ಇದಕ್ಕೆ ಮಾದರಿಯಾಗುವಂತೆ ಸಿಟಿಇ ಸಂಸ್ಥೆಯವರು ಅಂತರಾಷ್ಟ್ರೀಯ ಮಟ್ಟದ ಕಬ್ಬಡಿ ಪಂದ್ಯಾವಳಿಗಳನ್ನು ಆಯೋಜಿಸಿರುವುದು ಪ್ರಶಂಸನೀಯ ಎಂದರು.ಸಿಟಿಇ ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ,ಉಪಾಧ್ಯಕ್ಷ ವಿಜಯ ಮಾಂಜೇರೆಕರ,ಅರುಣ ಕುಲಕರ್ಣಿ,ಸತೀಶ ಕುಲಕರ್ಣಿ,ಸಂಜಯ ಅಡಕೆ,ವಿನಾಯಕ ಶೇಡಬಾಳೆ,ವಿಶ್ವಕಿರಣ ಕುಲಕರ್ಣಿ, ಆಡಳಿತಾಧಿಕಾರಿ ಶ್ರೀನಿವಾಸ ಜಹಗೀರದಾರ,ಜಂಟಿ ಕಾರ್ಯದರ್ಶಿ ಡಾ. ಮಿಥುನ ದೇಶಪಾಂಡೆ,ಎಂ.ಕೆ.ಶಿರಗುಪ್ಪಿ, ಎನ್.ವ್ಹಿ.ಶಿರಗಾಂವಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಡಾ.ಎಚ್.ಎ.ಭೋಗಳೆ ಸ್ವಾಗತಿಸಿದರು.ಅಶ್ವಿನಿ ಪಾಟೀಲ,ಎ.ಸಿ.ಬ್ಯಾಕೂಡೆ,ಶ್ರಾವಣಿ ಕುಲಕರ್ಣಿ ನಿರೂಪಸಿದರು. ದೈಹಿಕ ನಿರ್ದೇಶಕ ವಿ.ಟಿ.ಬಿಕ್ಕನ್ನವರ ವಂದಿಸಿದರು.ಇದೇ ಕಾಲೇಜಿನಲ್ಲಿ ಕಲಿತು ನಾನು ಉಪ ವಿಭಾಗಾಧಿಕಾರಿಯಾಗಿರುವುದು ಸಂತಸವನ್ನು ತಂದಿದೆ. ತವರು ಮನೆಗೆ ಬಂದಂತಹ ಅನುಭವವಾಗುತ್ತಿದೆ. ನನಗೆ ಕಲಿಸಿದಂತಹ ಶಿಕ್ಷಕರು ನೋಡಿ ಆನಂದವಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿನಿಯರು ಪ್ರತಿಯೊಂದು ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾರೆ. ಸದ್ಯ ನಮ್ಮ ಸಿಟಿ ಸಂಸ್ಥೆಯ ಸಂಸ್ಥೆಯವರು ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿ.

-ಶ್ವೇತಾ ಬೀಡಿಕರ, ಜಮಖಂಡಿ ಉಪವಿಭಾಗಾಧಿಕಾರಿ ಹಾಗೂ ಸಿಟಿಯ ಸಂಸ್ಥೆಯ ಹಳೆಯ ವಿದ್ಯಾರ್ಥಿನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌