ಮತದಾರರ ಸಮಸ್ಯೆಗೆ ಸ್ಪಂದಿಸುವ ರಾಜಕಾರಣಿಗಳಿಗೆ ಯಶಸ್ಸು

KannadaprabhaNewsNetwork |  
Published : Dec 16, 2024, 12:45 AM IST
ಚಿತ್ರ:ಸಿರಿಗೆರೆ ಸಮೀಪದ ಕೊಳಹಾಳ್‌ ಗ್ರಾಮದ ಬಳಿ ೫ ಕೋಟಿ ರೂ. ವೆಚ್ಚದ ಚೆಕ್‌ ಡ್ಯಾಂ ನಿರ್ಮಾಣಕ್ಕೆ ಶಾಸಕ ಎಂ. ಚಂದ್ರಪ್ಪ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಸಿರಿಗೆರೆ: ಮತದಾರರ ಸಂಕಷ್ಟಗಳಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಯಶಸ್ಸುಸಿಗುತ್ತದೆ. ಮತದಾರನ ಒಲವು ಬೇಕೆಂದರೆ ಅವರ ಸಂಕಷ್ಪಗಳ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಸಿರಿಗೆರೆ: ಮತದಾರರ ಸಂಕಷ್ಟಗಳಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಯಶಸ್ಸುಸಿಗುತ್ತದೆ. ಮತದಾರನ ಒಲವು ಬೇಕೆಂದರೆ ಅವರ ಸಂಕಷ್ಪಗಳ ಅರಿತು ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.ಸಿರಿಗೆರೆ ಸಮೀಪದ ಕೊಳಹಾಳ್ ಗ್ರಾಮದಲ್ಲಿ 5 ಕೋಟಿ ರು. ವೆಚ್ಚದಲ್ಲಿ ನೂತನ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಎಲ್ಲಿ ನೀರು ಹರಿಯುತ್ತದೆ ಅಂತಹ ಪ್ರದೇಶಗಳಲ್ಲಿ ಚಕ್ ಡ್ಯಾಂಗಳನ್ನು ನಿರ್ಮಾಣ ಮಾಡುವುದರಿಂದ ಅದು ಮುಂದೆ ಜೀವ ನದಿಯಾಗಲಿದೆ. ಚಕ್ ಡ್ಯಾಂ ನಿರ್ಮಾಣದಿಂದ ಈ ಭಾಗದ ಜಾನುವಾರುಗಳಿಗೆ ನೀರು ಸಿಗಲಿದೆ ಅಲ್ಲದೆ ಈ ಭಾಗದ ರೈತರಿಗೆ ನೀರಿನ ಅನುಕೂಲವಾಗಲಿದೆ. ಈ ದೃಷ್ಟಿಯಿಂದ ಇಲ್ಲಿ 5 ಕೋಟಿ ರು. ವೆಚ್ಚದಲ್ಲಿ ಚಕ್ ಡ್ಯಾಂನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

ವಿಧಾನಸೌಧ ನಿರ್ಮಾಣಕ್ಕೆ ವೆಚ್ಚವಾಗಿದ್ದು 85 ಲಕ್ಷ ಆದರೆ ನಾನು ನಿರ್ಮಾಣ ಮಾಡುತ್ತಿರುವುದು 5 ಕೋಟಿ ರು. ವೆಚ್ಚದಲ್ಲಿ ಚಕ್ ಡ್ಯಾಂ ಎಂದ ಅವರು, ಈ ಗ್ರಾಮದವರು ನನ್ನನ್ನು ಗೌರವದಿಂದ ಕಾಣುತ್ತಾರೆ, ಪ್ರಾಮಾಣೀಕತೆಯನ್ನು ರೂಢಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಋಣವನ್ನು ತೀರಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.

ಹಳ್ಳಿಗಳಲ್ಲಿ ನೀರಿದೆ ಆದರೆ ವಿದ್ಯುತ್ ಇಲ್ಲ. ಗ್ರಾಮಸ್ಥರು ವಿದ್ಯುತ್‍ಗಾಗಿ ಮನವಿ ಮಾಡಿದ್ದು, ಇದನ್ನು ಮನಗಂಡು ರೈತರ ಅನುಕೂಲಕ್ಕಾಗಿ 140 ಕೋಟಿ ರು. ವೆಚ್ಚದಲ್ಲಿ ವಿದ್ಯುತ್ ಘಟಕವನ್ನು ಪ್ರಾರಂಭ ಮಾಡಲಾಗುತ್ತಿದೆ. ಇದಕ್ಕೆ ಜೋಗ್‌ಪಾಲ್ಸ್‌ನಿಂದ ಅಜ್ಜಪ್ಪಹಳ್ಳಿಗೆ ವಿದ್ಯುತ್ ತರಲಾಗುತ್ತಿದೆ. ಮುಂದಿನ 1 ವರ್ಷದಲ್ಲಿ ಇದು ನಿರ್ಮಾಣವಾಗಲಿದೆ ಇದರಿಂದ ಮುಂದಿನ 40 ವರ್ಷ ವಿದ್ಯುತ್ ಸಮಸ್ಯೆ ಇರುವುದಿಲ್ಲ, ಈಗಾಗಲೇ 50-60 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ ಮಾಡಿದ ಕರೆಗಳು ತುಂಬಿವೆ. ಇನ್ನೂ 3-4 ತಿಂಗಳಲ್ಲಿ ಇನ್ನೂ ಹಲವಾರು ಕೆರೆಗಳಿಗೆ ನೀರನ್ನು ತುಂಬಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಭರಮಸಾಗರ ಬಿಜೆಪಿ ಮಂಡಲದ ಅಧ್ಯಕ್ಷ ಶೈಲೇಶ್, ಕೊಳಹಾಳ್ ರಾಜಣ್ಣ, ಚಿಕ್ಕಬೆನ್ನೂರು ರಾಜಣ್ಣ, ಪಿಡಿಒ ತಿಪ್ಪೇಸ್ವಾಮಿ, ಎಚ್.ಎಂ.ಬಸವರಾಜಪ್ಪ, ಕೆ.ಆರ್.ಹನುಮಂತಪ್ಪ, ಬಸವನಗೌಡ, ಜಿ.ಕೆ.ಬಸವನಗೌಡ, ಬಸವರಾಜಣ್ಣ , ಓಬಣ್ಣ, ಪ್ರಕಾಶ್, ನಾಗೇಂದ್ರಣ್ಣ, ಈಶಣ್ಣ ಮತ್ತಿತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ