ಸಕ್ಕೆರೆ ಕಾರ್ಖಾನೆ ನಿರ್ಮಾಣ ಸುಲಭ, ಬೆಳೆಸುವುದು ಕಷ್ಟ

KannadaprabhaNewsNetwork | Published : Nov 16, 2024 12:30 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಸಕ್ಕರೆ ಕಾರ್ಖಾನೆಯಂತ ಸಂಸ್ಥೆಗಳು ಕಟ್ಟುವುದು ಬಹಳ ಸುಲಭ. ಆದರೆ, ಅವುಗಳನ್ನು ಉಳಿಸಿ ಬೆಳೆಸುವುದು ಕಷ್ಟ. ಅದೇ ರೀತಿಯಲ್ಲಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 6 ವರ್ಷವಾಯಿತು ಮರಳಿ ಕಟ್ಟಿ ಕಬ್ಬು ನುರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಹಾಗೂ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಸಕ್ಕರೆ ಕಾರ್ಖಾನೆಯಂತ ಸಂಸ್ಥೆಗಳು ಕಟ್ಟುವುದು ಬಹಳ ಸುಲಭ. ಆದರೆ, ಅವುಗಳನ್ನು ಉಳಿಸಿ ಬೆಳೆಸುವುದು ಕಷ್ಟ. ಅದೇ ರೀತಿಯಲ್ಲಿ ಬಹಳ ದಿನಗಳಿಂದ ನೆನಗುದಿಗೆ ಬಿದ್ದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 6 ವರ್ಷವಾಯಿತು ಮರಳಿ ಕಟ್ಟಿ ಕಬ್ಬು ನುರಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಶಾಸಕ ಹಾಗೂ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.

ಮರಗೂರ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ 2024- 25 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭೋತ್ಸವದ ಮೋಳಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಈ ಸಂಸ್ಥೆ ಉಳಿಸಲು ಶ್ರಮಿಸಲಾಗಿದೆ. ಯೋಗ್ಯ ಗುಣಮಟ್ಟದ ಯಂತ್ರಗಳನ್ನು ಕಾರ್ಖಾನೆಯಲ್ಲಿ ಬಳಕೆ ಮಾಡಲಾಗಿದೆ. ಕಾರ್ಖಾನೆಯ ಸಾಲ ಮರು ಪಾವತಿಸಬೇಕಾದರೆ ರೈತರು ಕಾರ್ಖಾನೆಗೆ ಗುಣಮಟ್ಟದ, ಸ್ವಚ್ಚತೆಯ, ಅವಧಿ ಪೂರ್ಣಗೊಳಿಸಿದ ಕಬ್ಬು ನೀಡಿ ಸಹಕರಿಸುವಂತೆ ಮನವಿ ಮಾಡಿದರು.ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಇಂಡಿ, ಸಿಂದಗಿ, ಚಡಚಣ, ಆಲಮೇಲ, ದೇವರ ಹಿಪ್ಪರಗಿ ತಾಲೂಕಿನ ರೈತರ ಆಸ್ತಿಯನ್ನಾಗಿ ಮಾಡಲಾಗಿದೆ. ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಆಡಳಿತ ಮಂಡಳಿಯವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಕಾರ್ಖಾನೆ ಉಳಿಸಿ, ಬೆಳೆಸುವ ಜವಾಬ್ದಾರಿ ರೈತರ ಮೇಲಿದೆ ಎಂದು ಹೇಳಿದ ಅವರು, ರೈತರ ಸಹಕಾರದಿಂದ ಬೃಹತ್‌ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ಮಿಸಲು ಹೇಗೆ ಸಹಕಾರ ನೀಡಲಾಗಿತ್ತೊ, ಅದೇ ರೀತಿಯಲ್ಲಿ ಕಾರ್ಖಾನೆಗೆ ಅವಧಿ ಮುಗಿದ ಕಬ್ಬು ಕಳುಹಿಸಿ ಸಹಕಾರ ನೀಡಬೇಕು ಎಂದು ಹೇಳಿದರು.

ಮುಂದೇಯು ಈ ಸಂಸ್ಥೆ ಮೇಲೆ ನಿಮ್ಮ ಸಹಕಾರ ಒಳ್ಳೆಯ ಕಬ್ಬುಗಳನ್ನು ಕಾರ್ಖಾನೆಗೆ ನೀಡುವ ಮೂಲಕ ಇರಲಿ, ಇದರ ಲಾಭವು ನಿಮಗೆ ಇದರ ನಷ್ಟವು ನಿಮಗೆ. ಈ ಕಾರ್ಖಾನೆಗೆ ರೈತರೇ ಮಾಲಿಕರು, ಕಾರ್ಖಾನೆ ರಾಜ್ಯದಲ್ಲಿಯೇ ಇತಿಹಾಸ ಬರೆದಿಡುವ ಒಳ್ಳೆಯ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಲು ರೈತವರ್ಗದ ಸಹಕಾರ ಬಹಳ ಮುಖ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹತ್ತಳ್ಳಿಯ ಶ್ರೀ ಗುರುಪಾದೇಶ್ವರ ಶಿವಾಚಾರ್ಯರು, ಮಾಳಕೋಟ್‌ದ ಶ್ರೀ ಪಂಚಾಚಾರ್ಯ ಶಿವಾಚಾರ್ಯರು, ಆಲಮೇಲದ ಶ್ರೀಗಳು, ಗುರಲಿಂಗ ಶಿವಾಚಾರ್ಯರು, ಬಸವರಾಜೇಂದ್ರ ಮಾಹಾಸ್ವಾಮೀಜಿ, ಅಭಿನವ ಪುಂಡಲಿಂಗೇಶ್ವರ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಚಂದ್ರಶೇಖರ ಮಾಹಾಸ್ವಾಮೀಜಿ, ಸಂಗನಬಸವ ಶ್ರೀ, ರೇಣುಕಾ ಶಿವಾಚಾರ್ಯರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕರು, ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share this article