ಬೇಸಿಗೆ ಶಿಬಿರ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಲಿದೆ: ಬಿ.ಎಸ್.ಭಗವಾನ್

KannadaprabhaNewsNetwork | Published : Apr 14, 2024 1:52 AM

ಸಾರಾಂಶ

ಬೇಸಿಗೆ ಶಿಬಿರ ಮಕ್ಕಳಲ್ಲಿ ಆತ್ಮ ವಿಶ್ವಾಸ ಶ್ರದ್ಧೆ ಆಸಕ್ತಿ ಮೂಡಿಸುತ್ತದೆ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.

ಬೇಸಿಗೆ ಶಿಬಿರ 14 ಸಂಭ್ರಮ ಸಮಾರೋಪ ಸಮಾರಂಭಕನ್ನಡಪ್ರಭ ವಾರ್ತೆ, ತರೀಕೆರೆ

ಬೇಸಿಗೆ ಶಿಬಿರ ಮಕ್ಕಳಲ್ಲಿ ಆತ್ಮ ವಿಶ್ವಾಸ ಶ್ರದ್ಧೆ ಆಸಕ್ತಿ ಮೂಡಿಸುತ್ತದೆ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.ಪಟ್ಟಣದ ಪ್ರಕೃತಿಶ್ರೀ ಕಲಾ ಕುಟೀರದಿಂದ ವಿನಾಯಕ ನಗರದ ಶ್ರೀ ಗಣೇಶ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರ 14 ಸಂಭ್ರಮ- ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಪ್ರಕೃತಿಶ್ರೀ ಕಲಾ ಕುಟೀರದ ಸಂಸ್ಥಾಪಕ ಉಮಾಪ್ರಕಾಶ್ ಅವಿರತವಾಗಿ ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ತೊಡಗಿ ಇಂತಹ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಶಿಬಿರದಲ್ಲಿ ಯೋಗಾಸನ, ಧ್ಯಾನ, ಗೀತ ಗಾಯನ, ನೃತ್ಯ ಪುಣ್ಯಪುರುಷರ, ಇತಿಹಾಸಕಾರರ ಪರಿಚಯ, ದೇಶಭಕ್ತಿ, ನಾಟಕ ಅಭಿನಯ, ನಾಯಕತ್ವ ಮುಂತಾದ ವಿಷಯಗಳನ್ನು ಒಳಗೊಂಡಂತೆ ಪ್ರಕೃತಿ ಪ್ರಾಣಿ ಪಕ್ಷಿ ವೀಕ್ಷಣೆ ಮೂಲಕ ಎಳೆಯ ಮನಸ್ಸುಗಳಿಗೆ ಆಸಕ್ತಿ ಮೂಡಿಸಿ ರಜೆ ಸದ್ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಆಪ್ತ ಸಮಾಲೋಚಕರಾದ ನಿಖಿತಾ ಬೋರಾ ಮಾತನಾಡಿ ಇಂತಹ ಶಿಬಿರಗಳು ಎಳೆಯ ಮನಸ್ಸಿನ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಅನಾವರಣಗೊಳಿಸುವ ವೇದಿಕೆಯಾಗಿರುತ್ತದೆ, ಪೋಷಕರು ತಮ್ಮ ಮಕ್ಕಳನ್ನು ಇಂತಹ ಶಿಬಿರದಲ್ಲಿ ದಾಖಲಿಸಿ ಮಕ್ಕಳ ಸರ್ವಾಂಗೀಣ ಜ್ಞಾನ ಅಭಿವೃದ್ಧಿಗೆ ಪ್ರೇರೇಸಬೇಕು ಎಂದು ಹೇಳಿದರು.ಪ್ರಕೃತಿಶ್ರೀ ಕಲಾ ಕುಟೀರದ ಸಂಸ್ಥಾಪಕ ಉಮಾಪ್ರಕಾಶ್ ಅವರು ಶಿಬಿರದ ಅತ್ಯುತ್ತಮ ಶಿಬಿರಾರ್ಥಿಗಳನ್ನು ಘೋಷಿಸಿ ಬೇಸಿಗೆ ಸಂಭ್ರಮದಲ್ಲಿ ಮಕ್ಕಳಿಗೆ ನಾಟಕ ಕರ ಕುಶಲ ವಸ್ತುಗಳ ತಯಾರಿಗೆ, ಹಾಡುಗಳನ್ನು ಕಲಿಸುವ ಜೊತೆಗೆ ಮಕ್ಕಳಲ್ಲಿ ನೈಜ ನಾಯಕತ್ವದ ಗುಣ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.ಶಿಬಿರದ ಅನುಭವಗಳನ್ನು ಮಕ್ಕಳು ಹಂಚಿಕೊಂಡು ಹರ್ಷಿಸಿದರು. ಹಿರಿಯ ಶಿಕ್ಷಕಿ ಕಮಲಮ್ಮ , ಹಂಸ ಹಾಗೂ ನಿವೇದಿತಾ ಬಿ., ಎಂ.ಸಾನಿಧ್ಯ, ಮೇಘನ ಬಿ.ಎಚ್. ಮಧುರ , ವಿವೇಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

13ಕೆಟಿಆರ್.ಕೆ.06ಃ

ತರೀಕೆರೆಯಲ್ಲಿ ಪ್ರಕೃತಿಶ್ರೀ ಕಲಾ ಕುಟೀರದಿಂದ ಏರ್ಪಡಿಸಿದ್ದ ಬೇಸಿಗೆ ಶಿಬಿರ 14 ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಮಧುರ ಮಾತನಾಡಿದರು. ಪ್ರಕೃತಿಶ್ರೀ ಕಲಾ ಕುಟೀರದ ಸಂಸ್ಥಾಪಕಿ ಉಮಾ ಪ್ರಕಾಶ್, ಕನ್ನಡಶ್ರೀ ಬಿ.ಎಸ್.ಭಗವಾನ್, ಅಪ್ತಸಮಾಲೋಚಕರಾದ ನಿಖಿತಾ ಬೋರಾ ಇದ್ದರು.

Share this article