ಕನ್ನಡಪ್ರಭ ವಾರ್ತೆ ಚಾಮರಾಜನಗರ
ಚಾಮರಾಜನಗರ (ಮೀಸಲು) ಲೋಕಸಭೆ ಅಭ್ಯರ್ಥಿ ಸುನಿಲ್ ಬೋಸ್ ಅವರು ತಾಲೂಕಿನ ಚಂದಕವಾಡಿ ಗ್ರಾಮದ ಲಕ್ಷ್ಮೀದೇವಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಮತಯಾಚನೆಗೆ ಚಾಲನೆ ನೀಡಿದರು.ಇದೇ ವೇಳೆ ಸುನಿಲ್ ಬೋಸ್ ಚಂದಕವಾಡಿ, ನಾಗವಳ್ಳಿ, ಕಾಗಲವಾಡಿ, ಆಲೂರು, ದೊಡ್ಡರಾಯಪೇಟೆ, ಮಾದಾಪುರ, ಮಂಗಲ ಸೇರಿದಂತೆ ಇತರೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ೧೬ ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದೇನೆ. ಹಿಂದಿನ ಸಂಸದರಾಗಿದ್ದ ಮಾಜಿ ಸಂಸದ ದಿ.ಧ್ರುವನಾರಾಯಣ ಅವರಂತೆ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕೈಗೊಳ್ಳಲು ಕ್ಷೇತ್ರದ ಮತದಾರರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ೨೦೧೩ರಿಂದ ೨೦೧೮ ರವರಗೆ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಕಳೆದ ಬಾರಿ ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸಿದ ಹೆಚ್ಚಿನ ಬಿಜೆಪಿ ಸಂಸದರು ರಾಜ್ಯದ ಅಭಿವೃದ್ಧಿಯ ಕುರಿತು ಮೋದಿಯ ಮುಂದೆ ಮಾತನಾಡಲಿಲ್ಲ. ಇನ್ನು ದೇಶದ ಅಭಿವೃದ್ದಿ ಆಗುವುದಾದರೆ ಹೇಗೆ ಎಂದರು. ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಮಾತನಾಡಿ, ಚಾಮರಾಜನಗರ ಕಾಂಗ್ರೆಸ್ ಭದ್ರ ಕೋಟೆಯಾಗಿದ್ದು, ಇದನ್ನು ಹಾಗೇ ಉಳಿಸಿಕೊಳ್ಳಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಮತಯಾಚನೆ ವೇಳೆ ಆಲೂರು ಗ್ರಾಮದಲ್ಲಿ ಮಾಜಿ ಸಚಿವರು, ಮಾಜಿ ರಾಜ್ಯಪಾಲ ದಿ ಬಿ.ರಾಚಯ್ಯ ಅವರ ಸಮಾಧಿ ಬಳಿ ಅಭ್ಯರ್ಥಿ ಸುನಿಲ್ ಬೋಸ್ ತೆರಳಿ ನಮನ ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ,ಕೆ.ರವಿಕುಮಾರ್, ಜಿಪಂ ಮಾಜಿಸದಸ್ಯರಾದ ಆರ್.ಬಾಲರಾಜು, ಕೆ.ಪಿ.ಸದಾಶಿವಮೂರ್ತಿ, ಮಾಜಿ ಉಪಾಧ್ಯಕ್ಷ ಅಯ್ಯನಪುರಶಿವಕುಮಾರ್, ಪ್ರದಾನ ಕಾರ್ಯದರ್ಶಿಗಳಾದ ಚಿಕ್ಕಮಹದೇವ, ಆರ್,ಮಹದೇವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಅಸ್ಗರ್, ಎ.ಎಸ್.ಗುರುಸ್ವಾಮಿ, ಎಸ್ಸಿಮೋರ್ಚಾ ಜಿಲ್ಲಾಧ್ಯಕ್ಷ ನಲ್ಲೂರುಸೋಮೇಶ್ವರ್,ಕಾರ್ಮಿಕರ ಕನಿಷ್ಟ ವೇತನ ಮಾಜಿ ಅಧ್ಯಕ್ಷ ಆರ್,ಉಮೇಶ್, ಮುಖಂಡರಾದ ಬಸವರಾಜನಾಯ್ಕ, ನಾಗಯ್ಯ,ವೀರಭದ್ರಸ್ವಾಮಿ, ಆಲೂರುಪ್ರದೀಪ್, ಕೋಡಿಮೋಳೆ ಗೋವಿಂದಶೆಟ್ಟಿ, ಪ್ರಕಾಶ್, ಕಾಗಲವಾಡಿಚಂದ್ರು, ಶಿವಸ್ವಾಮಿ, ಮರಿಸ್ವಾಮಿ, ರವಿಗೌಡ, ಮೂರ್ತಿ, ಮಹೇಶ್ ಕುದರ್, ಶೇಖರಪ್ಪ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಆಯಾ ಗ್ರಾಮದ ಮುಖಂಡರು ಹಾಜರಿದ್ದರು.