ಧರ್ಮ, ಜಾತಿ ನೋಡದೆ ಬಿಜೆಪಿ ಬೆಂಬಲಿಸಿ

KannadaprabhaNewsNetwork |  
Published : May 05, 2024, 02:13 AM IST
ಅಳ್ನಾವರದಲ್ಲಿ ಜರುಗಿದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾಜಿ ವಿ.ಪ ವಿರೋದ ಪಕ್ಷದ ನಾಯಕ ರಘುನಾಥ ಮಲಕಾಪೂರೆ ಅವರು ಪ್ರಲ್ಹಾದ ಜೋಶಿಯವರ ಪರವಾಗಿ ಮತಯಾಚನೆ ಮಾಡಿದರು. | Kannada Prabha

ಸಾರಾಂಶ

ಮರಠಾ ಸಮಾಜಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯವಾಗಿದ್ದು ಕೇವಲ ಮತಕ್ಕಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೆಲ್ಲ ಅರಿತುಕೊಳ್ಳುವ ಶಕ್ತಿ ನಮಗಿದೆ.

ಅಳ್ನಾವರ:

ಬಿಜೆಪಿ ಸರ್ಕಾರ ಕುರುಬ ಸಮಾಜಕ್ಕೆ ಅನೇಕ ಸೌಲಭ್ಯಗಳನ್ನು ನೀಡಿದೆ. ಹಿಂದುಳಿದ ವರ್ಗದವರಿಗಾಗಿ ಹಲವು ಯೋಜನೆ ಕಾರ್ಯಗತಗೊಳಿಸುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ಮಾಡಿದ್ದು ಲೋಕಸಭಾ ಚುಣಾವಣೆಯಲ್ಲಿ ಯಾವುದೇ ಧರ್ಮ, ಜಾತಿ ನೋಡದೆ ಬಿಜೆಪಿ ಬೆಂಬಲಿಸುವುದಾಗಿ ಮಾಜಿ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ರಘುನಾಥ ಮಲಕಾಪುರೆ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ಜರುಗಿದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮರಠಾ ಸಮಾಜಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯವಾಗಿದ್ದು ಕೇವಲ ಮತಕ್ಕಾಗಿ ನಮ್ಮನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದನ್ನೆಲ್ಲ ಅರಿತುಕೊಳ್ಳುವ ಶಕ್ತಿ ನಮಗಿದೆ. ಜಾತಿ, ಧರ್ಮಕ್ಕಿಂತ ದೇಶ ಮುಖ್ಯವಾಗಿದ್ದು ದೇಶ ಕಾಪಾಡುವ ಮೋದಿ ಕೈ ಬಲಪಡಿಸಲು ಪ್ರಹ್ಲಾದ ಜೋಶಿ ಅವರಿಗೆ ಬೆಂಬಲಿಸಲು ನಿರ್ಧರಿಸಲಾಗಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಿ.ಎನ್. ಶಾಗೋಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ರಾಜೇಶ್ವರಿ ಸಾಲಗಟ್ಟಿ, ಬಸವರಾಜ ಕರಡಿಕೊಪ್ಪ, ಶಿವು ಬೆಳಾರದ, ಪಪಂ ಸದಸ್ಯೆ ನೇತ್ರಾವತಿ ಕಡಕೋಳ, ಮುಖಂಡರಾದ ಶಿವಾಜಿ ಡೊಳ್ಳಿನ, ಗೌಳಿ ಸಮಾಜದ ಪ್ರದೀಪ ಗಾವಡೆ, ನಾರಾಯಣ ಮೋರೆ, ಪ್ರವೀಣ ಪವಾರ, ತಾಲೂಕಿನ ಕುರುಬ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.ಛಬ್ಬಿ ಪ್ರಚಾರ:

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಜೋಶಿ ಪರವಾಗಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ಹೊನ್ನಾಪೂರ, ಅರವಟಗಿ, ಅಂಬೋಳ್ಳಿ, ಡೋರಿ, ಬೆನಚಿ ಗ್ರಾಮಗಳಲ್ಲಿ ಕಾರ್ಯಕರ್ತರ ಜತೆಗೆ ಪ್ರಚಾರ ಕೈಕೊಂಡು ಕೇಂದ್ರ ಸರ್ಕಾರದ ಯೋಜನೆಗಳು ಮತ್ತು ಜಿಲ್ಲೆಯಲ್ಲಿ ಜೋಶಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ ಮಂಡಳ ಅಧ್ಯಕ್ಷ ಕಲಮೇಶ ಬೇಲೂರ, ಮಲ್ಲಪ್ಪ ಗಾಣಿಗೇರ, ಮದನ ಕುಲಕರ್ಣಿ, ನಿಂಗಪ್ಪ ಮಾಧನಭಾವಿ, ಮಂಜು ಕುಲಕರ್ಣಿ, ಸಿದ್ದಯ್ಯ ಹಿರೇಮಠ ಅನೇಕರಿದ್ದರು. ಅಳ್ನಾವರದಲ್ಲಿ ಬಿಜೆಪಿ ಮುಖಂಡ ನಾರಾಯಣ ಮೋರೆ ವಾಯುವಿಹಾರಿಗಳನ್ನು ಭೇಟಿಯಾಗಿ ಪ್ರಹ್ಲಾದ ಜೋಶಿ ಪರವಾಗಿ ಮತಯಾಚಿಸಿದರು.

ಬಿಜೆಪಿಗೆ ನಮ್ಮ ಬೆಂಬಲ:ಕಾಂಗ್ರೆಸ್‌ ಮರಾಠಾ ಸಮಾಜದ ಪರವಾಗಿ ಕರಪತ್ರ ಹಂಚುತ್ತಿದ್ದು ಸಮಾಜದ ಮತ ತಮಗೆ ಎಂದು ಹೇಳುತ್ತಿದ್ದಾರೆ. ಆದರೆ ಇದಕ್ಕೆ ನಮ್ಮ ಬೆಂಬಲವಿಲ್ಲ ಎಂದು ಮರಾಠಾ ಸಮಾಜದ ಮುಖಂಡ ಸಂದೀಪ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಕಳೆದ 60 ವರ್ಷದಿಂದ ಇಲ್ಲದ ಮರಾಠಾ ಅಭಿಮಾನ ಈಗ ಉಕ್ಕಿದೆ. ನಮ್ಮ ಬೆಂಬಲವೆನಿದ್ದರೂ ದೇಶ ರಕ್ಷಣೆ, ದೇಶವನ್ನು ಭದ್ರತೆ ಮತ್ತು ಆರ್ಥಿಕತೆಯಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನರೇಂದ್ರ ಮೋದಿಗೆ. ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಬಯಕೆಯಿಂದ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ. ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಪ್ರಥಮ ಬಾರಿಗೆ ಮರಾಠಾ ಅಭಿವೃದ್ಧಿ ನಿಗಮ ರಚಿಸಿ ₹ 100 ಕೋಟಿ ಅನುದಾನ ನೀಡಿದ್ದಾರೆ. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ ಮರಾಠರಿಗಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದರು. ಸುದ್ದಿಗೋಷ್ಠಿಯಲ್ಲಿ ಯಲ್ಲಾರಿ ಹುಬ್ಬಳ್ಳಿಕರ, ಪರಶುರಾಮ ಪಾಲಕರ ಮತ್ತಿತರರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ