ರೋಟರಿಯಿಂದ ಸಮಾಜಕ್ಕೆ, ಜೀವಕುಲಕ್ಕೆ ಆಸರೆ

KannadaprabhaNewsNetwork |  
Published : Jul 16, 2024, 12:35 AM IST
15ಕೆಜಿಎಲ್87ಕೊಳ್ಳೇಗಾಲದಲ್ಲಿ ರೋಟರಿ ಮಿಟ್ ಟೌನ್ ಸಂಸ್ಥೆ ವತಿಯಿಂದ ನಡೆಯದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಗವನ೯ರ್ ರಾಮಕೃಷ್ಣ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು ಶಿವಾನಂದ್, ಗಿರೀಶ್, ಪ್ರಶಾಂತ್, ಪ್ರವೀಣ್ ಕುಮಾರ್ ಇನ್ನಿತರಿದ್ದರು. | Kannada Prabha

ಸಾರಾಂಶ

ಕೊಳ್ಳೇಗಾಲದಲ್ಲಿ ರೋಟರಿ ಮಿಟ್ ಟೌನ್ ಸಂಸ್ಥೆ ವತಿಯಿಂದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಗವರ್ನರ್ ರಾಮಕೃಷ್ಣ ಅವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಸೇವಾ ಮನೋಭಾವನೆಯ ಗುರಿಯಡಿ ರೋಟರಿ, ರೋಟರಿ ಮಿಡ್ ಟೌನ್ ಸಂಸ್ಥೆಗಳು ತನ್ನ ಸೇವೆಯನ್ನು ಪ್ರಪಂಚಾದ್ಯಂತ ವಿಸ್ತರಿಸಿಕೊಂಡಿದ್ದು, ಇಂದು ಪದಗ್ರಹಣ ಸ್ವೀಕರಿಸಿದ ನೂತನ ಪದಾಧಿಕಾರಿಗಳು ಸೇವೆಯನ್ನು ಹೆಚ್ಚು ವಿಸ್ತರಿಸುವ ಮೂಲಕ ಸಾಮಾಜಿಕ ಕಳಕಳಿಯಡಿ ಕಾರ್ಯನಿರ್ವಹಿಸಿ ಎಂದು ರೋಟರಿ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಹೇಳಿದರು.ರೋಟರಿ ಮಿಟ್ ಟೌನ್ ಸಂಸ್ಥೆ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷಕತೆ ವಹಿಸಿ ಮಾತನಾಡಿ, ಪೋಲಿಯೋ, ಅನಕ್ಷರತೆ, ಇತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳುವುದು, ಜೀವ ಸಂಕುಲಕ್ಕೆ ಅಗತ್ಯವಿರುವ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಕ್ಸಿನೇಷನ್, ವಿಶ್ವ ಶಾಂತಿಗಾಗಿ ಎಲ್ಲರನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ಮಾಡುವ ನಿಟ್ಟಿನಲ್ಲಿ ಜವಾಬ್ದಾರಿ ನಿಭಾಯಿಸುತ್ತಾ ಈ ಸಂಸ್ಥೆ ಕರ್ತವ್ಯ ನಿರ್ವಹಿಸುತ್ತಿದೆ. ಅದೇ ರೀತಿಯಲ್ಲಿ ವಿಶ್ವದ ಅತಿ ದೊಡ್ಡ ಸೇವಾ ಸಂಸ್ಥೆಯಾದ ರೋಟರಿ, ಸಮಾಜಕ್ಕೆ, ವಿಶ್ವಕ್ಕೆ, ಜೀವಕುಲಕ್ಕೆ ಆಸರೆಯಾಗಿ ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತಲೆ ಬಂದಿದೆ ಎಂದರು.ಈ ಸಂದರ್ಭದಲ್ಲಿ ಅದ್ಯಕ್ಷರಾಗಿ ಆಯ್ಕೆಯಾದ ರೋಟರಿಯನ್ ಲೋಕೇಶ್, ಕಾರ್ಯದರ್ಶಿ ಪ್ರಶಾಂತ್ ಎಂ, ಖಜಾಂಚಿ ಶಿವಾನಂದ್, ನಿರ್ದೇಶಕರಾಗಿ ಪ್ರವೀಣ್ ಕುಮಾರ್ ಜಿ ಹೆಚ್, ನಟರಾಜು, ಮಹೇಶ್ ಎಸ್, ಡಾ.ಆರ್. ಉಮಾಶಂಕರ, ಪ್ರದೀಪ್ ಡೇವಿಡ್ ಫರ್ನಾಂಡಿಸ್ ಸೇರಿದಂತೆ ಇನ್ನಿತರರು ನೂತನವಾಗಿ ಪದಗ್ರಹಣ ಸ್ವೀಕರಿಸಿದರು. ಜಿಲ್ಲಾ ಗವರ್ನರ್ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದರು.

ಈ ವೇಳೆ ಎಚ್‌.ಕೆ.ಟ್ರಸ್ಟ್‌ನ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಅವರು ಅಮೇರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಸೇವಾ ಕಾರ್ಯಗಳಿಗಾಗಿ ಸನ್ಮಾನಕ್ಕೆ ಭಾಜನವಾದ ಹಿನ್ನೆಲೆ ರೋಟರಿ ಮಿಡ್ ಟೌನ್ ವತಿಯಿಂದಲೂ ಗೌರವ ಸಲ್ಲಿಸಲಾಯಿತು. ಸಹಾಯಕ ಗವರ್ನರ್ ಗಿರೀಶ್ ರೋಟರಿಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವಲಯ ಸೇನಾನಿ ಜೋಸೆಫ್, ಮುತ್ತು ಕುಮಾರ್ ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ