ಸಮೀಕ್ಷೆ: ಶಿಕ್ಷಕನ ಮೇಲೆ ಧಮ್ಕಿ ಹಾಕಿದ್ದ ವ್ಯಕ್ತಿ ಕ್ಷಮಾಪಣೆ

KannadaprabhaNewsNetwork |  
Published : Oct 04, 2025, 01:00 AM IST
ಪೋಟೋ 5 : ತ್ಯಾಮಗೊಂಡ್ಲು ಪಟ್ಟಣದ ಉಪತಹಸೀಲ್ದಾರ್ ಕಚೇರಿಯಲ್ಲಿ ತಜಾತಿಗಣತಿ ವೇಳೆ ನಡೆದಿದ್ದ ಗೊಂದಲವನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಸುಖಾಂತ್ಯಗೊಳಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ ಘಟನೆ ಸಂಬಂಧ ಘಟನಾ ಸ್ಥಳಕ್ಕೆ ತೆರಳಿದ್ದ ತಹಸೀಲ್ದಾರ್ ಸಮ್ಮುಖದಲ್ಲಿ ಆ ವ್ಯಕ್ತಿ ಶಿಕ್ಷಕರ ಬಳಿ ಕ್ಷಮೆ ಯಾಚಿಸಿದ್ದು, ತ್ಯಾಮಗೊಂಡ್ಲು ಉಪತಹಸೀಲ್ದಾರ್ ಕಚೇರಿಯಲ್ಲಿ ಸುಖಾಂತ್ಯ ಕಂಡಿದೆ.

ದಾಬಸ್‍ಪೇಟೆ: ಜಾತಿ ಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕರೊಬ್ಬರ ಮೇಲೆ ವ್ಯಕ್ತಿಯೊಬ್ಬ ಧಮ್ಕಿ ಹಾಕಿದ್ದ ಘಟನೆ ಸಂಬಂಧ ಘಟನಾ ಸ್ಥಳಕ್ಕೆ ತೆರಳಿದ್ದ ತಹಸೀಲ್ದಾರ್ ಸಮ್ಮುಖದಲ್ಲಿ ಆ ವ್ಯಕ್ತಿ ಶಿಕ್ಷಕರ ಬಳಿ ಕ್ಷಮೆ ಯಾಚಿಸಿದ್ದು, ತ್ಯಾಮಗೊಂಡ್ಲು ಉಪತಹಸೀಲ್ದಾರ್ ಕಚೇರಿಯಲ್ಲಿ ಸುಖಾಂತ್ಯ ಕಂಡಿದೆ.

ನಾಲ್ಕೈದು ದಿನಗಳ ಹಿಂದೆ ತ್ಯಾಮಗೊಂಡ್ಲು ಪಟ್ಟಣದ ಎಂ.ನೂರ್ ಖಾನ್ ಎಂಬಾತ ತನ್ನ ಫೇಸ್ಬುಕ್ ಜಾಲತಾಣದಲ್ಲಿ, ಜಾತಿ ಗಣತಿ ಸಮೀಕ್ಷೆ ಮಾಡುವಾಗ ಕರ್ತವ್ಯ ನಿರತ ಶಿಕ್ಷಕ ವೀರನಗೌಡರ್ ಮೇಲೆ ಧಮ್ಕಿ ಹಾಕುತ್ತಿರುವ ದೃಶ್ಯವನ್ನು ಲೈವ್ನಲ್ಲಿ ಹರಿಯ ಬಿಟ್ಟು ಶಿಕ್ಷಕರಲ್ಲಿ ಆತಂಕ ಸೃಷ್ಟಿಸಿದ್ದನು.

ಈ ಬಗ್ಗೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅ.3ರಂದು "ಗಣತಿ ಮಾಡಲು ತೆರಳಿದ್ದ ಶಿಕ್ಷಕನಿಗೆ ಧಮ್ಕಿ " ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಯನ್ನು ಗಮನಿಸಿದ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಬಿಇಒ ರಮೇಶ್ ಧಮ್ಕಿ ಹಾಕಿರುವ ವ್ಯಕ್ತಿಯನ್ನು ಪತ್ತೆ ಹಚ್ಚಿ ತ್ಯಾಮಗೊಂಡ್ಲು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆಗೊಳಿಸಿದಾಗ ಆತ ತಪ್ಪೊಪ್ಪಿಕೊಂಡು ಧಮ್ಕಿ ಹಾಕಿದ್ದ ಶಿಕ್ಷಕರ ಬಳಿ ಕ್ಷಮೆಯಾಚಿಸಿದ್ದಾನೆ.

ಘಟನಾ ಸಂಬಂಧ ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಪ್ರತಿಕ್ರಿಯಿಸಿ ಈ ಬಗ್ಗೆ ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿರುವುದನ್ನು ಕಂಡು ಶಿಕ್ಷಕರನ್ನು ವಿಚಾರಿಸಿ ಆ ವ್ಯಕ್ತಿಯನ್ನು ಠಾಣೆಗೆ ಕರೆಯಿಸಿ ಶಿಕ್ಷಕರ ಬಳಿ ಕ್ಷಮೆಯಾಚಿಸಿ, ನಮ್ಮ ಮನೆಗೆ ಶಿಕ್ಷಕರು ಜಾತಿಗಣತಿಗೆ ಬರುವಂತೆ ಅವರೇ ತಿಳಿಸಿದ್ದು, ಸರಿಯಾದ ಮಾಹಿತಿ ನೀಡಲಿದ್ದಾರೆ ಎಂದರು.

ಸಮೀಕ್ಷೆಯಲ್ಲಿ ಶಿಕ್ಷಕರು ನಿರ್ಭಿತಿಯಿಂದ ಭಾಗವಹಿಸಿ ಜನರ ಬಳಿ ಮಾಹಿತಿ ಪಡೆಯಿರಿ. ಗೊಂದಲ, ಸಮಸ್ಯೆಗಳು ಎದುರಾದರೆ ನನ್ನ ಗಮನಕ್ಕೆ ತರಬೇಕಾಗಿ ತಿಳಿಸಿದ್ದೇನೆ ಎಂದರು.

ಪೋಟೋ 5 : ತ್ಯಾಮಗೊಂಡ್ಲು ಪಟ್ಟಣದ ಉಪತಹಸೀಲ್ದಾರ್ ಕಚೇರಿಯಲ್ಲಿ ತಜಾತಿಗಣತಿ ವೇಳೆ ನಡೆದಿದ್ದ ಗೊಂದಲವನ್ನು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಸುಖಾಂತ್ಯಗೊಳಿಸಿದರು.

ಪೋಟೋ 6 : ಕನ್ನಡಪ್ರಭ ದಿನಪತ್ರಿಕೆಯಲ್ಲಿ ಅ.3ರಂದು "ಗಣತಿ ಮಾಡಲು ತೆರಳಿದ್ದ ಶಿಕ್ಷಕನಿಗೆ ಧಮಿ "್ಕ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿರುವುದು

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ