ಸ್ವರ್ಣಗೌರಿ ಹಬ್ಬ: ಶಾಂತಿ ಸುವ್ಯವಸ್ಥೆ ಕಾಪಾಡಿ

KannadaprabhaNewsNetwork |  
Published : Aug 24, 2025, 02:00 AM IST
ಕುದೇರಿನಲ್ಲಿ   ಸ್ವರ್ಣಗೌರಿ ಹಬ್ಬ | Kannada Prabha

ಸಾರಾಂಶ

ಕುದೇರು ಪೊಲೀಸ್‌ ಠಾಣೆಯ ವ್ಯಾಪ್ತಿಯ ಕುದೇರು ಹಾಗೂ ದೇಮಹಳ್ಳಿಯಲ್ಲಿ ಸ್ವರ್ಣಗೌರಿ ಮಹೋತ್ಸವ ಹಾಗೂ ಗಣೋತ್ಸವವು ಸಂಬಂಧ ಗ್ರಾಮದ ಎಲ್ಲಾ ಕೋಮುವಾರು ಯಜಮಾನರು ಮತ್ತು ಮುಖಂಡರೊಂದಿಗೆ ಶಾಂತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕುದೇರು ಪೊಲೀಸ್‌ ಠಾಣೆಯ ವ್ಯಾಪ್ತಿಯ ಕುದೇರು ಹಾಗೂ ದೇಮಹಳ್ಳಿಯಲ್ಲಿ ಸ್ವರ್ಣಗೌರಿ ಮಹೋತ್ಸವ ಹಾಗೂ ಗಣೋತ್ಸವವು ಸಂಬಂಧ ಗ್ರಾಮದ ಎಲ್ಲಾ ಕೋಮುವಾರು ಯಜಮಾನರು ಮತ್ತು ಮುಖಂಡರೊಂದಿಗೆ ಶಾಂತಿ ಸಭೆ ನಡೆಯಿತು.

ಡಿವೈಎಸ್ಪಿ ಲಕ್ಷ್ಯಯ್ಯ ಮಾತನಾಡಿ, ಕುದೇರು ಗ್ರಾಮದಲ್ಲಿ ಸ್ವರ್ಣಗೌರಿ ಮಹೋತ್ಸವವು ಬಹಳ ವಿಶೇಷವಾಗಿ ನಡೆಯಲಿದ್ದು, ರಾಜ್ಯದಲ್ಲಿ ಸ್ವರ್ಣಗೌರಿ ಮಂದಿರ ನಿರ್ಮಾಣ ಮಾಡಿ, ಪ್ರತಿ ವರ್ಷದ ಪೂಜೆ ಮಾಡುವುದು ವಿಶೇಷ. ಕುದೇರಿನಲ್ಲಿ ರಾಜ್ಯದಲ್ಲಿಯೇ ವಿಶೇಷವಾದ ಗೌರಿ ದೇಗುಲ ವಿದೆ. ಹೀಗಾಗಿ ಕುದೇರು ಹಾಗೂ ಜಿಲ್ಲೆಯ ಮತ್ತು ಹೊರ ಜಿಲ್ಲೆಗಳಿಂದ ೧೦ ಸಾವಿರ ಕ್ಕು ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಆ. ೨೬ ರ ಗೌರಿ ಹಬ್ಬದಂದು ಸ್ವರ್ಣಗೌರಿಯನ್ನು ಪ್ರತಿಷ್ಠಾಪನೆ ಮಾಡಿ, ೧೨ ದಿನಗಳ ಕಾಲ ವಿಶೇಷ ಪೂಜೆಗಳು ನಡೆದು ಗೌರಿ ವಿಸರ್ಜನೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು. ಮೈಕ್‌ಗಳನ್ನು ಒಂದೇ ಕಡೆ ಹಾಕಿಕೊಳ್ಳಬೇಕು. ಪ್ರತಿ ಬೀದಿಗಳಲ್ಲಿ ಮೈಕ್ ಆಳವಡಿಸಿ ಕರ್ಕಸ ಧ್ವನಿ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಬಾರದು. ಅಲ್ಲದೇ ಸಾವಿರಾರು ಜನರು ಸೇರುವ ಸ್ಥಳದಲ್ಲಿ ನುಗ್ಗುನುಗ್ಗಲು ಆಗದಂತೆ ಎಚ್ಚರಿಕೆ ವಹಿಸಿ, ವಾಹನಗಳಿಗೆ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿ, ಗ್ರಾಪಂಯವರು ನೈಮರ್ಲ್ಯತೆ ಮತ್ತು ಸ್ವಚ್ಛತೆಗೆ ಅದ್ಯತೆ ನೀಡಬೇಕು. ಕುಡಿಯುವ ನೀರು, ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯವಾಗಬಾರದು. ಅಲ್ಲದೇ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮುಖಂಡರು ಹಾಗೂ ಗ್ರಾ.ಪಂ. ಸದಸ್ಯರು ಸಹಕಾರ ನೀಡಬೇಕು ಎಂದರು.

ದೇಮಹಳ್ಳಿ ಗ್ರಾಮದಲ್ಲಿಯು ವಿದ್ಯಾ ಗಣಪತಿ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಆ. ೨೭ ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಸೆ. ೭ ರಂದು ವಿಸರ್ಜನೆ ಮೆರವಣಿಗೆ ನಡೆಯಲಿದ್ದು, ಗ್ರಾಮದಲ್ಲಿ ಶ್ರೀಮಂಟೇಸ್ವಾಮಿ ಮತ್ತು ಶ್ರೀ ಬಸವೇಶ್ವರರ ಮೆರವಣಿಗೆ ನಡೆಯಲಿದೆ. ಹೀಗಾಗಿ ಗ್ರಾಮಸ್ಥರು ಈ ದಿನಗಳಲ್ಲಿ ಶಾಂತಿ ಸೌರ್ಹದತೆಯಿಂದ ಹಬ್ಬವನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಮಾದಯ್ಯ, ಕುದೇರು ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕುಮುದ, ಕುದೇರು ಗ್ರಾಮದ ಗೌಡಿಕೆ ಬಸವರಾಜಪ್ಪ, ತಾ.ಪಂ. ಮಾಜಿ ಸದಸ್ಯ ಮಹದೇವಯ್ಯ, ಕೆ.ಎಂ. ರಾಜೇಂದ್ರಸ್ವಾಮಿ, ಕೆ.ಎಸ್. ರುದ್ರಸ್ವಾಮಿ, ಜಡೇಸ್ವಾಮಿ, ಆರ್ಚಕರಾದ ರವಿಶಂಕರ್, ದೇಮಹಳ್ಳಿ ಗ್ರಾಮದ ಮಾದಪ್ಪ, ಶಿವನಂಜಪ್ಪ, ಬಸವರಾಜಪ್ಪ, ಒಡೆಯರಮಾದಪ್ಪ, ನಂದೀಶ್, ರಾಜೇಂದ್ರ ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!