ಈಜುವುದರಿಂದ ದೈಹಿಕ ಆರೋಗ್ಯ ಸದೃಢ: ವಿಠ್ಠಲ ಜಾಬಗೌಡ

KannadaprabhaNewsNetwork |  
Published : May 24, 2024, 12:56 AM IST
22ಕೆಪಿಎಲ್28ಕೊಪ್ಪಳದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣ ನಿವ೯ಹಣಾ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಈಜು ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. | Kannada Prabha

ಸಾರಾಂಶ

ಈಜುವುದರಿಂದ ದೈಹಿಕ ಆರೋಗ್ಯ ಸದೃಢ ಆಗುತ್ತದೆ.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಸಹ ನಿರ್ದೇಶಕ ಅಭಿಮತಕನ್ನಡಪ್ರಭ ವಾರ್ತೆ ಕೊಪ್ಪಳ

ಈಜುವುದರಿಂದ ದೈಹಿಕ ಆರೋಗ್ಯ ಸದೃಢ ಆಗುತ್ತದೆ ಎಂದು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕ ವಿಠ್ಠಲ ಜಾಬಗೌಡರ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ವಹಣಾ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಸುಸಜ್ಜಿತವಾದ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿಗೆ ಮತ್ತು ವಿವಿಧ ಸೌಕರ್ಯಗಳನ್ನು ಒದಗಿಸಿಕೊಡುವದರ ಜೊತೆಗೆ ಈಜುಕೊಳಕ್ಕೆ ಸಹ ಇನ್ ಡೋರ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಶ್ರಮಿಸುತ್ತೇನೆ ಎಂದರು,

ಈಜು ನಮ್ಮ ದೇಹದ ಹೃದಯ ಬಡಿತವನ್ನು ಮತ್ತು ರಕ್ತದ ಹರಿವು ಹೆಚ್ಚಿಸಲು ಹಾಗೂ ದೇಹವನ್ನು ಆರೋಗ್ಯವಾಗಿ ಸುಸ್ಥಿತಿಯಲ್ಲಿ ಇಡಲು ಸಹಕಾರಿಯಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಈಜು ಕಲಿಯುವುದರಿಂದ ನಮ್ಮ ದೈನಂದಿಕ ಜೀವನದ ಒತ್ತಡವನ್ನು ನಿವಾರಿಸಿ ಮನಸ್ಸನ್ನು ನಿರಾಳವಾಗಿ ಇಡಲು ಸಾಧ್ಯ ಎಂದರು.

ಪ್ರತಿಯೊಬ್ಬರು ಈಜು ಕಲಿಯಬೇಕೆಂಬ ಆಶಯದೊಂದಿಗೆ ಈಜು ತರಬೇತಿ ಪಡೆಯಲು ಸಾರ್ವಜನಿಕರಿಗೆ ಹೊರೆಯಾಗಬಾರದು ಎನ್ನುವ ದೃಷ್ಟಿಯಲ್ಲಿ ಅಜೀವ ಸದಸ್ಯತ್ವ ನೊಂದಣಿಗೆ ₹2000 ಹಾಗೂ 12 ವರ್ಷ ಮೇಲ್ಪಟ್ಟವರಿಗೆ ₹1500 ರೂಪಾಯಿಗಳು ಹಾಗೂ 12 ವರ್ಷ ಕೆಳಗಿನವರಿಗೆ ಮಾಸಿಕ ₹750ರಂತೆ ಬಹಳ ಕಡಿಮೆ ದರದಲ್ಲಿ ಶುಲ್ಕ ನಿಗದಿಪಡಿಸಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನ್ಯೂ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಮಲ್ಲಿಕಾರ್ಜುನ ಚೌಕಿಮಠ ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರು ಈಜು ಕಲಿಯಲೇಬೇಕು. ಈಜು ನಮ್ಮ ಬದುಕಿಗೆ ಬಹಳ ಅವಶ್ಯವಾಗಿದೆ. ಈಜುವುದರಿಂದ ನಮ್ಮ ದೇಹವು ಮಾನಸಿಕವಾಗಿ, ನೆಮ್ಮದಿಯಾಗಿ, ಆರೋಗ್ಯವಾಗಿ ಇರಲು ಸಹಾಯವಾಗುತ್ತದೆ‌ ಎಂದರು.

ಕೊಪ್ಪಳ ತಾಲೂಕು ಘಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಶರಣು ಬಂಡಿಹಾಳ, ಕುಕನೂರ ತಾಲೂಕು ಪಂಚಾಯತ್ ವಿಭಾಗದ ಸಹ ನಿದೆ೯ಶಕ ಆನಂದ, ಲ್ಯಾಪ್ರೋಸ್ಕೋಪಿಕ ಸರ್ಜನ್ ಶ್ರೀಕಾಂತ ಸಿ., ಅರ್ಥೋಪೇಡಿಕ್ ಸರ್ಜನ್ ಡಾ. ಪ್ರಸಾದ ಪೋಲಿಸ್ ಪಾಟೀಲ್, ಪತ್ರಕರ್ತ ರಾಜೇಶ ಬಳ್ಳಾರಿ ಇತರರಿದ್ದರು.

35 ಸ್ಪರ್ಧಾಳುಗಳು ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈಜು ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಅಭಿನಂದಿಸಲಾಯಿತು. ದೈಹಿಕ ಶಿಕ್ಷಕ ಬಸವರಾಜ್ ಹನುಮಸಾಗರ ನಿರೂಪಿಸಿದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?