ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ರಮ ವಹಿಸಿ: ಪಾಪು ಒತ್ತಾಯ

KannadaprabhaNewsNetwork |  
Published : Jul 04, 2024, 01:16 AM IST
3ಕೆಎಂಎನ್ ಡಿ16 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಪಂ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗ ತುಂಬಾ ವಿಶಾಲವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ಆಸುಪಾಸಿನಲ್ಲಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಕೃಷಿ ಇಲಾಖೆಗಳು, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಗಳು ಅಕ್ಕಪಕ್ಕದಲ್ಲೆ ಇದ್ದು, ಜನವಸತಿ ಪ್ರದೇಶದಲ್ಲಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜನ ಸಾಮಾನ್ಯರ, ರೈತರ ಅಲೆದಾಟವನ್ನು ತಪ್ಪಿಸಲು ತಾಲೂಕಿನಲ್ಲಿ ಬಾಡಿಗೆಯಲ್ಲಿ ನಡೆಯುತ್ತಿರುವ ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿಯಲ್ಲಿ ತರುವಂತೆ ರೈತಸಂಘದ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಟ್ಟಣದಲ್ಲಿರುವ ತಾಪಂ ಕಚೇರಿ ತುಂಬಾ ಹಳೆಯಸ ಇತಿಹಾಸ ಇರುವ ಕಟ್ಟಡವಾಗಿದೆ. ಶಿಥಿಲವಾಗಿರುವ ಈ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ಜಿಲ್ಲಾ ಮತ್ತು ತಾಲೂಕು ಆಡಳಿತ ಸರ್ಕಾರದಿಂದ ಹೆಚ್ಚಿನ ಅನುದಾನ ತರಿಸಿಕೊಂಡು ಹಿಂದುಳಿದ ವರ್ಗಗಳ ವಿಸ್ತರಣಾ ಇಲಾಖೆ, ಕಾರ್ಮಿಕ ಇಲಾಖೆ, ಅಬಕಾರಿ ಇಲಾಖೆ, ಎಪಿಎಂಸಿ ಕಚೇರಿ, ಕಿರಂಗೂರು ನಾಡಕಚೇರಿ ಇನ್ನಿತರ ಕಚೇರಿಗಳನ್ನು ತಾಪಂ ಆವರಣದ ಜಾಗದಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಪಂ ಕಟ್ಟಡ ನಿರ್ಮಾಣವಾಗುತ್ತಿರುವ ಜಾಗ ತುಂಬಾ ವಿಶಾಲವಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿಯ ಆಸುಪಾಸಿನಲ್ಲಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಕೃಷಿ ಇಲಾಖೆಗಳು, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಗಳು ಅಕ್ಕಪಕ್ಕದಲ್ಲೆ ಇದ್ದು, ಜನವಸತಿ ಪ್ರದೇಶದಲ್ಲಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಜನರಿಗೆ ಬಸ್ ಇಳಿದು ಪಕ್ಕದಲ್ಲೆ ಇರುವ ತಾಪಂ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿಗಳು ಹಲವು ವರ್ಷಗಳಿಂದ ಬಾಡಿಗೆಯಲ್ಲಿವೆ. ಬಾಡಿಗೆ ಕಟ್ಟಿ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಆದ್ದರಿಂದ ಇಷ್ಟೊಂದು ವಿಶಾಲವಾಗಿರುವ ತಾಪಂ ಕಟ್ಟಡದಲ್ಲಿರುವ ವಿಶಾಲ ಜಾಗದಲ್ಲಿ ಬಾಡಿಗೆಯಲ್ಲಿರುವ ಸರ್ಕಾರಿ ಎಲ್ಲ ಇಲಾಖೆಯ ಕಚೇರಿಗಳನ್ನು ಒಂದೇ ಸೂರಿನಡಿ ನಿರ್ಮಿಸಿದರೆ ಸರ್ಕಾರಕ್ಕೆ ಬಾಡಿಗೆ ಕಟ್ಟುವ ನಷ್ಟ ತಪ್ಪಿ, ಸರ್ಕಾರಕ್ಕೆ ಲಾಭ ಉಂಟಾಗುತ್ತದೆ ಎಂದು ಮನವಿ ಮಾಡಿದ್ದಾರೆ.

ರೈತರಿಗೆ, ಜನಸಾಮಾನ್ಯರಿಗೆ ಇಲಾಖೆಗಳಲ್ಲಿ ಕೆಲಸಕಾರ್ಯಗಳಿಗೆ ತುಂಬಾ ಹತ್ತಿರವಾಗುತ್ತದೆ. ಆದ್ದರಿಂದ ನೂತನ ಕೇಂದ್ರ ಸಚಿವರು, ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರು ಮನಸ್ಸು ಮಾಡಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಮಿನಿ ವಿಧಾನಸೌಧದ ತರಹ ಸುಂದರ ಕಟ್ಟಡವನ್ನು ನಿರ್ಮಾಣ ಮಾಡಿ ತಾಲೂಕಿನ ಜನರು, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಾಪು ಒತ್ತಾಯಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ