ಪರಿಸರ ಸಂರಕ್ಷಿಸುವ ಜವಾಬ್ದಾರಿ ನಿಭಾಯಿಸಿ: ಸೋಮಶೇಖರ ಹರ್ತಿ

KannadaprabhaNewsNetwork | Published : Jun 9, 2024 1:43 AM

ಸಾರಾಂಶ

ಪ್ರತಿಯೊಬ್ಬರು ಸಹ ಒಂದಿಲ್ಲೊಂದು ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ ಎಂದು ಭಾರತ ಸೇವಾ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಏರುತ್ತಿರುವ ತಾಪಮಾನ ತಗ್ಗಿಸಲು ಪರಿಸರ ಸಂರಕ್ಷಣೆ ಮತ್ತು ಗಿಡಮರಗಳನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಭಾರತ ಸೇವಾ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹರ್ತಿ ಹೇಳಿದರು.

ಭಾರತ ಸೇವಾದಳ ಜಿಲ್ಲಾ ಸಮಿತಿ, ಶಾಲಾ ಶಿಕ್ಷಣ ಇಲಾಖೆ , ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ, ನೆಹರು ಯುವ ಕೇಂದ್ರ, ಮಹಿಳಾ ಧ್ವನಿ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಲಿಗೇರಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬರು ಸಹ ಒಂದಿಲ್ಲೊಂದು ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವ ಅನಿವಾರ್ಯತೆ ಎದುರಾಗಿದೆ. ಅದನ್ನು ಅರ್ಥ ಮಾಡಿಕೊಂಡು ತಮ್ಮ ಜವಾಬ್ದಾರಿ ನಿಭಾಯಿಸುವಂತೆ ಕರೆ ನೀಡಿದರು.

ಉಪಾಧ್ಯಕ್ಷ ತೋಟಪ್ಪ ಕಾಮನೂರ, ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಈರಣ್ಣ ಕಂಬಳಿ ಮಾತನಾಡಿದರು.

ಪ್ರಿಯದರ್ಶಿನಿ, ಗವಿಸಿದ್ದೇಶ ಹುಡೇಜಾಲಿ, ಕಾರ್ತಿಕ, ಶಾಲಾ ಮಕ್ಕಳು ಮತ್ತು ಇತರರು ಪಾಲ್ಗೊಂಡಿದ್ದರು.

ಜಿಲ್ಲಾ ಸಂಘಟಕ ಬಸವಣ್ಣೆಪ್ಪ ಪತ್ರಿ ಸ್ವಾಗತಿಸಿದರು.ನಗರಸಭೆ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಕನ್ನಡಪ್ರಭ ವಾರ್ತೆ ಕೊಪ್ಪಳಭಗತ್ ಸಿಂಗ್ ಸ್ಕೌಟ್ ಘಟಕ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಹಾಗೂ ನಗರಸಭೆ, ಕೊಪ್ಪಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗವಿಶ್ರೀ ನಗರದ ಒಂದನೇ ಕ್ರಾಸ್‌ನಲ್ಲಿರುವ ಗವಿಶ್ರೀ ಉದ್ಯಾನವನದಲ್ಲಿ ನೂರಾರು ಸಸಿ ನೆಡುವು ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.

ನಗರಸಭೆಯ ಮಾಜಿ ಅಧ್ಯಕ್ಷರು ಹಾಗೂ ವಾರ್ಡಿನ ಸದಸ್ಯರಾದ ಶಿವಗಂಗಾ ಭೂಮಕ್ಕನವರ್ ಕಾರ್ಯಕ್ರಮ ಉದ್ಘಾಟಿಸಿದರು. ನಗರ ಸಭೆಯ ಎಇಇ ಮಧುರ, ಹಿರಿಯ ಕವಿಗಳಾದ ಮಹಾಂತೇಶ್ ಮಲ್ಲನಗೌಡ, ಶಿವಣ್ಣ ಗುಳಗಣ್ಣವರ್, ಸಂಗಪ್ಪ ಗಾಳಿ, ಶಿವ ರೆಡ್ಡಿ ಭೂಮಕ್ಕನವರ್, ಶಂಕರಗೌಡ ಹಿರೇಗೌಡ, ನಗರಸಭೆಯ ಸದಸ್ಯರಾದ ಗುರುರಾಜ ಹಲಗೇರಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಾದ ಜಗದೀಶ್, ಸಾವಿತ್ರಿ ಮಂಜುನಾಥ್ ಗೌಡ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೆ ಭಗತ್ ಸಿಂಗ್ ಸ್ಕೌಟ್ ಘಟಕದ ಲೀಡರ್, ಟ್ರೇನರ್ ಜಯರಾಜ್ ಬೂಸದ್ ಧನ್ಯವಾದ ತಿಳಿಸಿದರು.

Share this article