ಬರ ನಿರ್ವಹಣೆಗೆ ತಾಲೂಕು ಆಡಳಿತ ಸನ್ನದ್ಧ

KannadaprabhaNewsNetwork |  
Published : Mar 19, 2024, 12:52 AM IST
ತಾಲ್ಲೂಕಿನಲ್ಲಿ ಬರ ನೀರು ನೈರ್ಮಲ್ಯ ಮತ್ತು ಮೇವು ನಿರ್ವಹಣೆ ಎಲ್ಲ ಸಿದ್ದತೆ ತಹಸೀಲ್ದಾ‌ರ್ ಮಹೇಶ್ ಪತ್ರಿ | Kannada Prabha

ಸಾರಾಂಶ

ಯಾವುದೇ ಗ್ರಾಮದಲ್ಲಿ ನೀರಿನ ಮತ್ತು ಇನ್ನಿತರೆ ಸಮಸ್ಯೆಗಳು ಇದ್ದಲ್ಲಿ ಸಹಾಯವಾಣಿ ಮೂಲಕ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆ ಹೆಚ್ಚು ಇದ್ದ ಕಡೆ ಖಾಸಗಿ ಬೋರ್‌ವೇಲ್ ಮಾಲೀಕರ ನೆರವು ಪಡೆಯಲಾಗುವುದು

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನಲ್ಲಿ ಬರ ನಿರ್ವಹಣೆಗೆ ತಾಲೂಕು ಆಡಳಿತದ ವತಿಯಿಂದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಮಹೇಶ್ ಪತ್ರಿ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅ‍ವರು, ಈಗಾಗಲೇ ರಾಜ್ಯ ಸರ್ಕಾರ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ ಎಂದರು.

ನೀರು, ಮೇವು ಪೂರೈಕೆಗೆ ಆದ್ಯತೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗ ಮಾದರಿ ನೀತಿ ಸಂಹಿತೆ ಸಹ ಜಾರಿ ಮಾಡಿದೆ. ಶಾಸಕರ ಅನುಪಸ್ಥಿತಿಯಲ್ಲಿ ನಾವು ಬರ ನಿರ್ವಹಣೆ ಸಿದ್ಧತೆ ಮಾಡಿಕೊಂಡಿದ್ದವೇ. ಈ ನಿಟ್ಟಿನಲ್ಲಿ ತಾಲೂಕು ಅಡಳಿತ ಬರವನ್ನು ನಿರ್ವಹಣೆ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆಂದು 65 ಲಕ್ಷಕ್ಕೂ ಹೆಚ್ಚು ಹಣ ನಮ್ಮಲ್ಲಿ ಇದೆ. ಇದನ್ನು ನೀರು, ಮೇವು ಪೂರೈಕೆ ಮತ್ತು ನೈರ್ಮಲ್ಯ ಸುಧಾರಣೆಗೆ ಬಳಕೆಗೆ ಮಾಡಿಕೊಳ್ಳುತ್ತವೆ ಎಂದರು.

ನಗರದಲ್ಲಿ ವಿನಾಯಕ ನಗರ ಮುನೇಶ್ವರ ಬಡಾವಣೆ ಗುಂಡಾಪುರ ವಾರ್ಡುಗಳಲ್ಲಿ ನೀರಿನ ಕೊರತೆ ಇದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇನ್ನು ಗ್ರಾಮಾಂತರ ಪ್ರದೇಶದ ಕಲ್ಲಿನಾಯಕನ ಹಳ್ಳಿಯ ಚಿಕ್ಕಹೊಸಹಳ್ಳಿ,ತೊಂಡೇಬಾವಿ ಗ್ರಾಮ, ಕೃಷ್ಣರಾಜಪುರ, ಸಾಗಾನಹಳ್ಳಿ,ಎಚ್, ಕಾಲೋನಿ,ಕೆ ಲವು ಗ್ರಾಮಗಳಲ್ಲಿ ನೀರಿನ ಬರ ಇದೆ ಜೊತೆಗೆ ಮೇವು ನಿರ್ವಹಣೆಗೆ ಗೋಶಾಲೆಗಳು ಸಹ ಪ್ರಾರಂಭ ಮಾಡಿದ್ದವೇ ಎಂದರು.

ನೀರಿನ ಸಮಸ್ಯೆ ಇದ್ದರೆ ತಿಳಿಸಿ

ಯಾವುದೇ ಗ್ರಾಮದಲ್ಲಿ ನೀರಿನ ಮತ್ತು ಇನ್ನಿತರೆ ಸಮಸ್ಯೆಗಳು ಇದ್ದಲ್ಲಿ ಸಹಾಯವಾಣಿ ಮೂಲಕ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆ ಹೆಚ್ಚು ಇದ್ದ ಕಡೆ ಖಾಸಗಿ ಬೋರ್‌ವೇಲ್ ಮಾಲೀಕರ ನೆರವು ಪಡೆಯಲಾಗುವುದು. ಇದಕ್ಕೆ ಅವರೂ ಸಕಾರಾತ್ಮಕವಾಗಿ ಸ್ಪಂದನೆ ಮಾಡಿದ್ದಾರೆ ಎಂದು ತಹಸೀಲ್ದಾರ್‌ ತಿಳಿಸಿದರು. ತಾಲೂಕಿನಲ್ಲಿ ನೀರಿನ ಸಮಸ್ಯೆಗೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಸಹಾಯ ವಾಣಿ ಸಂಖ್ಯೆ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಕುಡಿಯುವ ನೀರು ಮತ್ತು ನೈರ್ಮಲ್ಯ 8151956266, ತಾ.ಪಂ.9353866822. ನಗರಸಭೆ ಆಯುಕ್ತರು, 9964162493, 9591479251,9353816169, ತಹಸೀಲ್ದಾರ್ 6360184832 ಈ ಸಂಖ್ಯೆಗಳಿಗೆ ಕರೆ ಮಾಡಬಹುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರದ ಡಿ ಎಂ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಆರೋಗ್ಯ ಅಧಿಕಾರಿ ಚಂದ್ರಶೇಖರ್ ರೆಡ್ಡಿ ಮತ್ತು ಮುಂತಾದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ