ಕನ್ನಡಪ್ರಭ ವಾರ್ತೆ ಚೇಳೂರು ಮೂರು ದಶಕಗಳ ಕನಸು ಹಾಗೂ ಹೋರಾಟದ ಫಲವಾಗಿ ಐದು ವರ್ಷಗಳ ಹಿಂದೆ ಚೇಳೂರು ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಆದರೆ, ಇದುವರೆಗೂ ತಾಲೂಕು ಆಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ತಾಲೂಕು ಕೇಂದ್ರದ ಪಟ್ಟ ಘೋಷಣೆಗಷ್ಟೇ ಎಂಬಂತಾಗಿದೆ.ಬಾಗೇಪಲ್ಲಿ ತಾಲೂಕಿನಿಂದ ಬೇರ್ಪಡಿಸಿ ೨೦೧೯ರಲ್ಲಿ ಚೇಳೂರು ತಾಲೂಕು ಕೇಂದ್ರ ಮಾಡಲಾಗಿದೆ. ಇದಾಗಿ ವರ್ಷಗಳು ಕಳೆದರೂ ತಾಲೂಕು ಕೇಂದ್ರದಲ್ಲಿ ಇರಬೇಕಾದ ಕಚೇರಿಗಳು ಇನ್ನೂ ಪ್ರಾರಂಭವಾಗಿಲ್ಲ. ಕಾಟಾಚಾರಕ್ಕೆ ತಾಲೂಕು ಕೇಂದ್ರ ಎಂಬಂತಾಗಿದೆ.ಇನ್ನೂ ನಿಗದಿಯಾಗಿಲ್ಲ ಜಾಗ
ತಾಲೂಕು ಕೇಂದ್ರದ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಇರಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಪಟ್ಟಣ ಸಮೀಪದ ಜಾಗವನ್ನು ಗುರುತು ಮಾಡಲಾಗಿತ್ತು. ಆದರೆ, ಅದ್ಯಾವುದೂ ಈವರೆಗೂ ಅಂತಿಮವಾಗಿಲ್ಲ. ಚೇಳೂರು ತಾಲೂಕು ಕೇಂದ್ರವಾಗುವ ಸಂಧರ್ಭದಲ್ಲೇ ಮಂಚೆನಹಳ್ಳಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲಾಗಿತ್ತು. ಮಚೇನಹಳ್ಳಿ ತಾಲೂಕಿಗೆ ಸ್ವಂತ ತಾಲೂಕು ಕಚೇರಿ ಕಟ್ಟಡ ಬಾಗ್ಯವು ದೊರೆತಿದೆ. ಇತ್ತ ಚೇಳೂರಿನಲ್ಲಿ ಮಾತ್ರ ವರ್ಷಗಳು ಕಳೆದರೂ ಬಾಡಿಗೆ ಮಳಿಗೆಯಲ್ಲಿ ತಾಲೂಕು ಕಚೇರಿ ಕೆಲಸ ಮಾಡುತ್ತಿದೆ. ಬೆರಳೆಣಿಕೆಯಷ್ಟು ಅಧಿಕಾರಿಗಳೂ ಇದ್ದಾರೆ. ಇನ್ನೂ ಬಾರದ ಇಲಾಖೆಗಳುಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ರ‍್ಗಗಳ ಕಲ್ಯಾಣ, ಆರೋಗ್ಯಾಧಿಕಾರಿ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಇಒ, ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಕಚೇರಿ, ತಾಲೂಕು ಕೃಷಿ ಅಧಿಕಾರಿ ಆಹಾರ ಇಲಾಖೆ, ಅಲ್ಪಸಖ್ಯಾತರ ಕಲ್ಯಾಣ, ಪಿಆರ್‌ಇ, ತಾಲೂಕು ಖಜಾನಾಧಿಕಾರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಹಲವು ಕಚೇರಿಗಳು ಆರಂಭವಾದರೆ ಮಾತ್ರ ಇಲ್ಲಿನವರಿಗೆ ಅನುಕೂಲವಾಗಲಿದೆ. ಆದರೆ, ತಹಸೀಲ್ದಾರ್ ಕಚೇರಿಯೊಂದನ್ನು ಮಾತ್ರ ಆರಂಭಿಸಲಾಗಿದ್ದು ಉಳಿದೆಲ್ಲವಕ್ಕೂ ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲೂಕಿಗೆ ಅಲೆಯಬೇಕಿದೆ. ಚೇಳೂರು ತಾಲೂಕಿಗೆ ಎಲ್ಲವನ್ನೂ ಹೋರಾಟದ ಮೂಲಕವೇ ಪಡೆದುಕೊಳ್ಳುವುದು ಅನಿವರ‍್ಯವಾಗಿದೆ. ತಾಲೂಕು ಆಡಳಿತ ಸಮರ್ಕಕವಾಗಿ ಕಾರ್ಯ ನಿರ್ವಹಿಸದ ಕಾರಣ ಸರ್ವ ಪಕ್ಷಗಳು ಹಾಗೂ ಸಂಘಟನೆಗಳು ಹೋರಾಟಕ್ಕೆ ಮುಂದಾಗಬೇಕಿದೆ.ಕನಿಷ್ಟ ಹೋರಾಟಗಳು ಪ್ರತಿಭಟನೆಗಳು,ಧರಣಿ ಸತ್ಯಾಗ್ರಹಗಳು ನಡೆದರೆ ಮಾತ್ರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚರಗೊಂಡು ನೂತನ ಚೇಳೂರು ತಾಲೂಕಿನ ಅಭಿವೃದ್ಧಿಗೆ ಒತ್ತು ನೀಡಬಹುದು ಎಂಬ ಅನುಮಾನ ಕಾಡುತ್ತಿದೆ.ವರ್ಷದಲ್ಲಿ 4 ತಹಸೀಲ್ದಾರ್ಚೇಳೂರು ತಾಲೂಕಿನಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ಬರೋಬ್ಬರಿ ೪ ತಹಸೀಲ್ದಾರ್ ಕಾರ್ಯ ನಿರ್ವಹಿಸಿರುವುದೇ ದೊಡ್ಡ ಸಾಧನೆಯಾಗಿದೆ. ಬರುವ ತಹಸೀಲ್ದಾರ್ ಗಳಲ್ಲಿ ಯಾರೂ ಕೂಡ ಇಲ್ಲಿ ನಿಲ್ಲುತ್ತಿಲ್ಲ. ಜನಪ್ರತಿನಿಧಿಗಳು ಆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.