ಟಿಡಿಎಲ್ ಎಫ್.ಸಿ, ವಾಲ್‌ಪರಿ ಎಫ್.ಸಿ, ಕ್ಯಾಲಿಕೆಟ್ ಎಫ್.ಸಿ., ಟ್ರೇಡಿಷನಲ್ ಟೂರಿಸಂ ಎಫ್.ಸಿ. ತಂಡಗಳಿಗೆ ಮುನ್ನಡೆ

KannadaprabhaNewsNetwork | Published : May 23, 2025 12:55 AM
ಟಿಡಿಎಲ್‌ ಎಫ್‌ಸಿ ಬೈಲುಕೊಪ್ಪ, ವಾಲ್‌ಪರಿ ಎಫ್‌ಸಿ ತಮಿಳುನಾಡು, ಕ್ಯಾಲಿಕೆಟ್‌ ಎಫ್‌ಸಿ ಕ್ಯಾಲಿಕೆಟ್‌, ಟ್ರೀಡಿಷನಲ್‌ ಟೂರಿಸಂ ಎಫ್‌ಸಿ ತಿರುಚಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.
Follow Us

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 6ನೇ ದಿನವಾದ ಗುರುವಾರ ನಡೆದ ಫುಟ್ಬಾಲ್ ಪಂದ್ಯಾವಳಿಯ ಹಣಾಹಣಿಯಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ, ವಾಲ್‌ಪರಿ ಎಫ್.ಸಿ ತಮಿಳುನಾಡು, ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ಹಾಗೂ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಫುಟ್ಬಾಲ್ ಮೊದಲನೇ ಪಂದ್ಯಾವಳಿಯು ವಾಲ್‌ಪರಿ ಎಫ್.ಸಿ ತಮಿಳುನಾಡು ಹಾಗೂ ಮೊಗ್ರೆಲ್ ಎಫ್.ಸಿ ಕುಂಬ್ಳೆ. ತಂಡಗಳ ನಡುವೆ ನಡೆದ ಪಂದ್ಯಾವಳಿಯ ಮೊದಲಾರ್ಧದಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು ತಂಡದ ಮುನ್ನಡೆ ಆಟಗಾರ 3ನೇ ನಿಮೀಷದಲ್ಲಿ ಸಿಬಿನ್ ತನಗೆ ದೊರೆತ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಎದುರಾಳಿ ತಂಡಕ್ಕೆ 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆಯನ್ನು ಒದಗಿಸಿದರು. 10ನೇ ನಿಮೀಷದಲ್ಲಿ ವಾಲ್‌ಪರಿ ಎಫ್.ಸಿ ತಂಡದ ಮತೋರ್ವ ಮುನ್ನಡೆ ಆಟಗಾರ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಸ್ಥೈರ್ಯ ತುಂಬುವಲ್ಲಿ ಮುಂದಾದರು. ಆದರೆ ಎದುರಾಳಿ ಕುಂಬ್ಳೆ ತಂಡವು ಬಿರುಸಿನ ಆಟಕ್ಕೆ ಇಳಿದು 22ನೇ ನಿಮೀಷದಲ್ಲಿ ಕುಂಬ್ಳೆ ತಂಡದ ಮುನ್ನಡೆ ಆಟಗಾರ ನಿಷಾದ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಗಳಿಸಿದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ದ್ವಿತೀಯಾರ್ಧದ 8ನೇ ನಿಮಿಷದಲ್ಲಿ ವಾಲ್‌ಪರಿ ಎಫ್.ಸಿ ತಮಿಳುನಾಡು ತಂಡದ ಮಲ್ವಿನ್ ಅವರು 1 ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಎರಡು ತಂಡಗಳು ಬಿರುಸಿನ ಆಟವನ್ನು ಪ್ರದರ್ಶಿಸುವ ಮೂಲಕ ಎದುರಾಳಿ ವಾಲ್‌ಪರಿ ಎಫ್.ಸಿ ತಮಿಳುನಾಡು 14ನೇ ನಿಮಿಷದಲ್ಲಿ ನಿಖಿಲ್ ಅಯ್ಯಪ್ಪ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿತ್ತು. 24 ನೇ ನಿಮೀಷದಲ್ಲಿ ನಿಖಿಲ್ ಅವರು ಮತ್ತೊಂದು ಗೋಲು ಬಾರಿಸುವ ಮೂಲಕ ಮೊಗ್ರೆಲ್ ಎಫ್.ಸಿ ಕುಂಬ್ಳೆ. ತಂಡವನ್ನು 5-1 ಗೋಲುಗಳಿಂದ ಸೋಲಿಸುವ ಮೂಲಕ ವಾಲ್‌ಪರಿ ಎಫ್.ಸಿ ತಮಿಳುನಾಡು ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಒಂದೇ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ 3 ಗೋಲುಗಳ ಸಾಧನೆಯನ್ನು ನಿಖಿಲ್ ಅಯ್ಯಪ್ಪ ಮಾಡಿರುವುದು ಮತ್ತೊಂದು ಸಾಧನೆಯಾಗಿದೆ. ಭಾರಿ ಸವಾಲು: ದ್ವಿತೀಯ ಪಂದ್ಯಾವಳಿಯು ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಹಾಗೂ ಅಶೋಕ ಎಫ್.ಸಿ ತಂಡಗಳ ನಡುವೆ ನಡೆದು ಮೊದಲಾರ್ಧದ 5ನೇ ನಿಮೀಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ರಾಸುಲ್ 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಗೋಲಿನ ಖಾತೆಯನ್ನು ತೆರೆಯುತ್ತಿದ್ದಂತೆ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ 17 ನೇ ನಿಮೀಷದಲ್ಲಿ ಜಯ ಹಾಗೂ 24 ನೇ ನಿಮೀಷದಲ್ಲಿ ಶ್ಯಾಂ ಗೋಲುಗಳಿಸುವ ಮೂಲಕ ಪ್ರಥಮಾರ್ಧದಲ್ಲಿ ಎದುರಾಳಿ ತಂಡಕ್ಕೆ ಭಾರಿ ಸವಾಲನ್ನೇ ನೀಡಿದರು.

ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಸಮಬಲದ ಪ್ರದರ್ಶವನ್ನು ನೀಡುತ್ತಿದ್ದರೂ 17ನೇ ನಿಮೀಷದಲ್ಲಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡದ ದುಲ್ಯಾಶನ್ ತನಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡವನ್ನು ಮತ್ತಷ್ಟು ಒತ್ತಡಕ್ಕೆ ಸಿಲುಕಿಸಿದರು. ಅಶೋಕ ಮೈಸೂರು ಆಟಗಾರರು ಬಿರುಸಿನ ಆಟಕ್ಕೆ ದುಮುಕ್ಕಿದ್ದರೂ ಎದುರಾಳಿ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡಕ್ಕೆ 19ನೇ ಮತ್ತು 22ನೇ ನಿಮಿಷದಲ್ಲಿ ಪ್ರಶಾಂತ್ 2ಗೋಲುಗಳಿಸುವ ಮೂಲಕ ಎದುರಾಳಿ ತಂಡದ ಗೋಲಿನ ಅಂತರವನ್ನು ಕಡಿಮೆಗೊಳಿಸಿದರು. ಮುಂದಿನ ಸುತ್ತಿಗೆ ಪ್ರವೇಶ:

4-2 ಗೋಲುಗಳಿಂದ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ತಂಡವು ಮೈಸೂರು ತಂಡವನ್ನು ಸೋಲಿಸುವ ಮೂಲಕ ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

3ನೇ ಪಂದ್ಯಾವಳಿಯು ಬ್ಲೂಮೌಂಟೆನ್ ಎಫ್.ಸಿ.ಊಟಿ ಹಾಗೂ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಗಳ ನಡುವೆ ನಡೆಯಬೇಕಿದ್ದು, ಬ್ಲೂಮೌಂಟೆನ್ ಎಫ್.ಸಿ.ಊಟಿ ತಂಡವು ಬಾರದ ಹಿನ್ನಲೆಯಲ್ಲಿ ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್ ತಂಡಕ್ಕೆ ವಾಕ್‌ಓವರ್ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. 4ನೇ ಪಂದ್ಯಾವಳಿಯು ಯಂಗ್ ವಾರಿರ‍್ಸ್ ಎಫ್.ಸಿ.ಕೆಜಿಎಫ್ ಹಾಗೂ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ನಡುವೆ ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಯಂಗ್ ವಾರಿರ‍್ಸ್ ಎಫ್.ಸಿ.ಕೆಜಿಎಫ್ ಬಾರದ ಹಿನ್ನಲೆಯಲ್ಲಿ ಟಿಡಿಎಲ್ ಎಫ್.ಸಿ ಬೈಲುಕೊಪ್ಪ ತಂಡಕ್ಕೆ ವಾಕ್‌ಓವರ್ ನೀಡಿದ ಹಿನ್ನಲೆ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಇದೇ ಸಂದರ್ಭ ಪಂದ್ಯಾವಳಿಯನ್ನು ಬ್ಲೂಬಾಯ್ಸ್ ಯುವಕ ಸಂಘದ ಮಾಜಿ ಅಧ್ಯಕ್ಷ ಮೊಣ್ಣಪ್ಪ ಪೂಜಾರಿ ಉದ್ಘಾಟಿಸಿದರು. ಪಂಚಾಯಿತಿ ಸದಸ್ಯರಾದ ಶಬ್ಬಿರ್ ಅಧ್ಯಕ್ಷ ಆಲಿಕುಟ್ಟಿ, ಗೌರವಧ್ಯಕ್ಷ ಟಿ.ಯು.ಪ್ರಸನ್ನ, ಅನಿಲ್, ಹಮೀದ್ ಸೇರಿದಂತೆ ಮತ್ತಿತರರು ಇದ್ದರು.

ಇಂದಿನ ಪಂದ್ಯಾವಳಿಗಳುಮೊದಲ ಪಂದ್ಯ 1.30 ಗಂ. ವಾಲ್‌ಪರಿ ಎಫ್.ಸಿ ತಮಿಳುನಾಡು v/s ಇಕೆಎನ್ ಎಫ್.ಸಿ.ಕೋಳಿಕಡಾವು ಇರಿಟಿ ಕಣ್ಣುನೂರು

ದ್ವಿತೀಯ ಪಂದ್ಯಾವಳಿ 2.30. ಗಂ. ಟ್ರೇಡಿಷನಲ್ ಟೂರಿಸಂ ಎಫ್.ಸಿ.ತಿರುಚಿ v/s ಮಿಡ್‌ಸಿಟಿ ಸುಂಟಿಕೊಪ್ಪ

ಮೂರನೇ ಪಂದ್ಯಾವಳಿ 3.30 ಗಂ ಟಿಡಿಎಲ್ ಎಫ್.ಸಿ ಬೈಲುಕೊಪ್ಪ v/s ಎನ್‌ವೈಸಿ ಕೊಡಗರಹಳ್ಳಿ

ನಾಲ್ಕನೇ ಪಂದ್ಯಾವಳಿ 4.30 ಗಂ ಬೆಟ್ಟಗೇರಿ ಎಫ್.ಸಿ ಸುಂಟಿಕೊಪ್ಪ v/s ಕ್ಯಾಲಿಕೆಟ್ ಎಫ್.ಸಿ.ಕ್ಯಾಲಿಕೆಟ್