ಕನ್ನಡಪ್ರಭ ವಾರ್ತೆ ಕೊಲ್ಹಾರ
ಕನ್ನಡ ನಮ್ಮ ಮಾತೃ ಭಾಷೆ. ಆದರೆ ಇಂಗ್ಲಿಷ್ ಜಗತ್ತಿನ ಭಾಷೆಯಾಗಿದೆ. ಆದರೆ ವ್ಯವಹರಿಸಲು ಕನ್ನಡದ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದಲ್ಲಿ ಭಾನುವಾರ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿಗೆ ಅನ್ನ ಮತ್ತು ಜ್ಞಾನ ಕೊಟಿದ್ದು ಭಾರತ. ಇಂದು ಜಗತ್ತಿನ ಮೂಲೆ ಮೂಲೆಗಳಲ್ಲಿ ಭಾರತದ ವೈದ್ಯರು, ವಿಜ್ಞಾನಿಗಳು,ಎಂಜಿನಿಯರ್‌ಗಳು ಹರಡಿಕೊಂಡಿದ್ದಾರೆ. ಅದರ ಶ್ರೇಯಸ್ಸು ವಿದ್ಯೆ ಕಲಿಸಿದ ನಮ್ಮ ದೇಶದ ಶಿಕ್ಷಕರಿಗೆ ಸಲ್ಲುತ್ತದೆ ಎಂದರು.
ಬಡತನದಲ್ಲಿ ಹುಟ್ಟಿ ಬೆಳೆದು ದೇಶದ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ನಮ್ಮೆಲ್ಲರಿಗೆ ಮಾದರಿ. ಅವರ ಹೆಸರು ಇಟ್ಟುಕೊಂಡು ಮುನ್ನಡೆಯುತ್ತಿರುವ ಕಲಾಂ ಆಂಗ್ಲ ಮಾಧ್ಯಮ ಶಾಲೆ ಉತ್ತರೋತ್ತರವಾಗಿ ಬೆಳೆಯಲಿ ಕೆನೆ ಮೊಸರು ಕೊಲ್ಹಾರದಲ್ಲಿ ಇಂಗ್ಲಿಷ್ ಕಂಪು ಹರಡಲಿ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಮಾತನಾಡಿ, ಇಂದು ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಅನುಕೂಲತೆಗಳು ಇವೆ. ಆದರೆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಬೇಕಾಗಿದೆ. ಇಲ್ಲಿ ಕಲಿತಿರುವ ಮಕ್ಕಳ ನಡವಳಿಕೆ ನೋಡಿದರೆ ಇಲ್ಲಿನ ಶಿಕ್ಷಕರು ಅವರಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಟ್ಟಿದ್ದಾರೆ ಎಂದು ಅಭಿಮಾನದಿಂದ ಹೇಳುತ್ತೇನೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಖಾನಖಾಯೆ ಗಫಾರಿಯಾ ಗುರುಕುಲದ ಪೀಠಾಧಿಪತಿ ಅಲ್ ಹಾಜ ಭಕ್ತಿಯಾರಖಾನ ಪಠಾಣ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಧ್ಯಕ್ಷ ಉಸ್ಮಾನ್ ಪಟೇಲ ಖಾನ್ನವರ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಫಿ ಭಂಡಾರಿ, ಎಸ್.ಬಿ.ಪತಂಗಿ, ಸಿ.ಎಮ್.ಗಣಕುಮಾರ ಹಾಗೂ ಪ್ರಾಸ್ತಾವಿಕವಾಗಿ ಶಾಲೆಯ ಪ್ರಾಂಶುಪಾಲ್ ಶಂಕರ ಯಂಕಂಚಿ ಮಾತನಾಡಿದರು.ಹಳೆಬೇರು-ಹೊಸ ಚಗುರು ವಿಷಯ ಆಧಾರಿತ ಮಕ್ಕಳಿಂದ ಮೂಡಿ ಬಂದ ಸುಂದರ ನೃತ್ಯರೂಪಕಗಳು ನೆರೆದ ಜನರ ಮನ ಗೆದ್ದವು. ವಿವಿಧ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು.
ಸ್ನೇಹ ಸಮ್ಮೇಳನ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ಶೀಲವಂತ ಹಿರೇಮಠದ ಕೈಲಾಸನಾಥ ಶ್ರೀಗಳು, ಖಾನಕಾಯೇ ಗಫಾರಿಯಾ ಪೀಠಾಧಿಪತಿ ಡಾ.ಭಕ್ತಿಯಾರಖಾನ ಪಠಾಣ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಉಸ್ಮಾನ್ ಪಟೇಲ ಖಾನ್ನವರ ವಹಿಸಿದ್ದರು. ಉದ್ಘಾಟನೆಯನ್ನು ಸಚಿವ ಶಿವಾನಂದ ಪಾಟೀಲ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ರಫಿ ಭಂಡಾರಿ, ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅತಿಥಿಗಳಾಗಿ ಕೆ.ಎಸ್.ದೇಸಾಯಿ,ಆರ್.ಬಿ.ಪಕಾಲಿ,ಎಸ್.ಬಿ.ಪತಂಗಿ,ಸಿ.ಎಸ್.ಗಿಡ್ಡಪ್ಪಗೋಳ,ಅಲ್ಲಾಭಕ್ಷ ಭಿಜಾಪುರ, ಆಯ್.ಎನ್.ತಹಶೀಲ್ದಾರ, ನಬೀಸಾಬ ಹೊನ್ಯಾಳ, ಸಿ.ಎಮ್.ಗಣಕುಮಾರ, ಡೋಂಗ್ರಿಸಾಬ ಗಿರಗಾಂವಿ, ಬಿ.ಎಸ್.ಹಂಗರಗಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.