ಕನ್ನಡಪ್ರಭ ವಾರ್ತೆ ಮುದಗಲ್
ಪ್ರತಿಯೊಂದು ಗ್ರಾಮ, ಪಟ್ಟಣಗಳಲ್ಲಿ ದೇವಸ್ಥಾನಗಳು ಇರುವುದು ಸಹಜ. ಆದರೆ, ದೇವಸ್ಥಾನಗಳಿಂದ ಗ್ರಾಮ ಹಾಗೂ ಪಟ್ಟಣಗಳಿಗೆ ಮುಕುಟವಿದ್ದಂತೆ. ಆದ್ದರಿಂದ ಗ್ರಾಮ, ಪಟ್ಟಣಗಳಲ್ಲಿ ವಾಸಿಸುವ ಜನತೆಯ ಮಧ್ಯೆ ಸುಮಧುರ ಬಾಂಧವ್ಯಗಳನ್ನು ಬೆಸೆಯುತ್ತವೆ ಎಂದು ಬಾಗಲಕೋಟೆಯ ಬೋವಿ ಗುರುಪೀಠದ ಸಿದ್ರಾಮೇಶ್ವರ ಮಹಾಸಂಸ್ಥಾನದ ಶ್ರೀಗಳು ಆಶೀರ್ವಚನ ನೀಡಿದರು.ಸಮೀಪದ ಉಳಿಮೇಶ್ವರ ಗ್ರಾಮದಲ್ಲಿ ಸತತ ಎರಡು ದಿನಗಳಿಂದ ಜರುಗಿದ ಶ್ರೀ ಸತ್ಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ, ಚಂಡಿಕಾ ಯಾಗ, ಹೋಮ ಹವನದ ನಂತರ ಶ್ರೀ ಸತ್ಯಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಂತರ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ದೇವಸ್ಥಾನ ತನ್ನ ಧಾರ್ಮಿಕ ಅನುಸಾರವಾಗಿ ತನ್ನ ಪಾವಿತ್ರ್ಯತೆಯನ್ನು ಹೊಂದಿಕೊಂಡಿರುತ್ತದೆ. ನಾವು ಮಕ್ಕಳನ್ನು ಸೇರಿಸಿ ವಿದ್ಯಾದಾನ ಮಾಡಿದರೆ ಅದಕ್ಕೆ ಶಾಲೆ, ಜನತೆಯ ಆರೋಗ್ಯವನ್ನು ತಪಾಸಣೆ ಮಾಡುವ ಕೇಂದ್ರಕ್ಕೆ ಆಸ್ಪತ್ರೆ, ಭಕ್ತಿಯಿಂದ ಭಗವಂತನ ನಾಮಸ್ಮರಣೆ, ದೇವರನ್ನು ಪ್ರತಿಷ್ಠಾಪಿಸಿ ಭಕ್ತಿಯನ್ನು ಸಮರ್ಪಿಸಿದರೆ ದೇವಸ್ಥಾನ ಎನ್ನುವ ಪರಿಪಾಠ ಹಿಂದುಗಳದ್ದಾಗಿದೆ.ಅದರಂತೆ ನಾವು ಇಂದು ಉಳಿಮೇಶ್ವರ ಗ್ರಾಮದಲ್ಲಿ ಶ್ರೀ ಸತ್ಯಮ್ಮ ದೇವಿ ದೇವಸ್ಥಾನವು ಹಳ್ಳದ ದಂಡೆಯ ಮೇಲೆ ಇರುವುದರಿಂದ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಅಂತಹ ದೇವಸ್ಥಾನವನ್ನು ಬೋವಿ ಸಮಾಜ ಬಾಂಧವರು ತಮ್ಮ ಆರಾಧ್ಯ ದೇವಿ ಎಂದು ಇಡೀ ದೇವಸ್ಥಾನವನ್ನೇ ಜೀರ್ಣೋದ್ಧಾರಗೊಳಿಸಿ ಭವ್ಯವಾದ ಮೂರ್ತಿ ಪ್ರತಿಷ್ಠಾಪಿಸಿ ಪ್ರಾಣ ಪ್ರತಿಷ್ಠಾಪಿಸಿದೆ.
ಇಂದು ಬೋವಿ ಸಮಾಜದ ಕೆಲವರಿಗೆ ಕುಲದೇವತೆಯಾಗಿದ್ದರು ಗ್ರಾಮದ ಜನತೆ ನಡೆದುಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಇದನ್ನು ರಕ್ಷಣಾತ್ಮಕವಾಗಿ, ಸ್ವಚ್ಛತೆಯಿಂದ ರಕ್ಷಿಸಿಕೊಂಡರೆ ಬರುವ ಭಕ್ತಾದಿಗಳಿಗೆ ಭಕ್ತಿಯು ಬರಲು ಸಾಧ್ಯವಾಗುತ್ತದೆ ಎಂದು ಕಿವಿ ಮಾತು ಹೇಳಿದರು.ವೇದಿಕೆ ಮೇಲೆ ಅಂಕಲಿಮಠದ ಬಸವರಾಜ ಸ್ವಾಮಿಗಳು, ಅಮರನಾಥೇಶ್ವರ ಮಠ ಪೀಠಾಧೀಶ್ವರ ಮಹಾಂತ ಸಹದೇವಾನಂದ ಗಿರಿ ಜಿ ಮಹಾರಾಜ, ಪಂಚದರ್ಶನಾಮ ಜುನಾ ಅಖಾಡ, ಹಿಮಾಲಯ ಪೀಠಾಧೀಶ್ವರ ಅನಂತ ವಿಭೂಷಣ ಮಹಾಮಂಡಲೇಶ್ವರ ಶಿವಾಂಗಿನಂದ ಗಿರಿ ಜಿ ಮಹಾರಾಜ, ಸಿದ್ದು ವೈ ಬಂಡಿ, ನಾಗಲಾಪೂರ ವಿಎಸ್ಎಸ್ಎನ್ ಅದ್ಯಕ್ಷ ಶರಣಬಸವ ವ್ಯಾಕರನಾಳ ಸೇರಿದಂತೆ ಸತ್ಯಮ್ಮದೇವಿ ಸಂಘ, ಆಡಳಿತ ಮಂಡಳಿ ಸದಸ್ಯರು, ಸೇರಿದಂತೆ ಮುಂತಾದವರಿದ್ದರು.