- ತೆಂಗಿನ ಕಾಯಿ ₹15- 30, ಎಳನೀರು ದರ ₹45- 50 । ರೈತರ ಮೊಗದಲ್ಲಿ ಮಂದಹಾಸ
ಕಡೂರು ಕೃಷ್ಣಮೂರ್ತಿ.ಕನ್ನಡಪ್ರಭ ವಾರ್ತೆ, ಕಡೂರು ತೆಂಗಿನ ಮರಗಳು ಬರಗಾಲದಲ್ಲೂ ರೈತರನ್ನು ಕೈ ಹಿಡಿದು ನಡೆಸುತ್ತಿದ್ದ ಕಲ್ಪವೃಕ್ಷವೇ ಸರಿ. ಪ್ರಸ್ತುತ ಎಳನೀರಿನ ಬೆಲೆ ದುಬಾರಿಯಾಗಿರುವುದು ರೈತರಿಗೆ ಖುಷಿ ತಂದರೂ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಪೂರೈಸಲಾಗದಂತಾಗಿದೆ.
ಬಯಲು ಪ್ರದೇಶದ ಬರಪೀಡಿತ ತಾಲೂಕುಗಳಾದ ಕಡೂರು, ತರೀಕೆರೆ, ಅರಸೀಕೆರೆ, ತಿಪಟೂರು ಸೇರಿದಂತೆ ಈ ಭಾಗದ ರೈತರನ್ನು ಬರದಿಂದ ಬಚಾವ್ ಮಾಡುವ ಈ ತೆಂಗಿನ ಮರಗಳು ಎಳನೀರು, ತೆಂಗಿನಕಾಯಿ ಅಥವಾ ಕೊಬ್ಬರಿ ಸೇರಿದಂತೆ ಹಲವು ರೂಪದಲ್ಲಿ ಕೈ ಹಿಡಿದು ನಡೆಸುತ್ತಿವೆ. ಇತ್ತೀಚೆಗೆ ತೆಂಗಿನ ಕಾಯಿಗಿಂತ ಮಾರಾಟಕ್ಕಿಂತ ಎಳನೀರಿಗೆ ಬೇಡಿಕೆ ಹೆಚ್ಚಾಗುವ ಮೂಲಕ ಉತ್ತಮ ಬೆಲೆ ಸಿಗುತ್ತಿದೆ. 1 ಎಳನೀರಿಗೆ ₹40 ರಿಂದ 50 ರವರೆಗೆ ಸಿಗುತ್ತಿರುವುದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ ಆದರೆ ಇಳುವರಿ ಕುಂಠಿತವಾಗಿ ಒಂದಿಷ್ಟು ನಿರಾಸೆ ಮೂಡಿಸಿದೆ.ಎಳನೀರಿನ ಹಲವಾರು ಉತ್ತಮ ಗುಣಗಳಿಂದಾಗಿ ಎಲ್ಲರಿಗೂ ಬೇಕು. ಬಿಸಿಲಿನ ಜಳದಿಂದ ಬಸವಳಿವ ಜನರ ದೇಹ ತಂಪಾಗಲು ಎಳನೀರು ಆರೋಗ್ಯಕರ. ಅಲ್ಲದೆ ಅನಾರೋಗ್ಯದ ಸಂದರ್ಭದಲ್ಲೂ ಸೇವಿಸಬಹುದಾದ ಎಳನೀರಿಗೆ ಬೇಸಿಗೆ ಸಮೀಪಿಸುತ್ತಿದ್ದಂತೆ ಎಲ್ಲಿಲ್ಲದ ಬೇಡಿಕೆ ಬಂದಿರುವುದೇ ಬೆಲೆ ಹೆಚ್ಚಳಕ್ಕೆ ಕಾರಣ. ಇದರ ಪ್ರತಿಫಲವಾಗಿ ಈಗ ತೆಂಗಿನಕಾಯಿ ಮತ್ತು ಕೊಬ್ಬರಿಗಿಂತ ಎಳನೀರಿನ ಬೆಲೆ ತುಟ್ಟಿಯಾಗಿದೆ. ಇದು ಬಯಲು ಪ್ರದೇಶದ ರೈತರಿಗೆ ಸಮಾಧಾನ ತಂದಿದೆ.
ಸದ್ಯಕ್ಕೆ ಒಂದು ತೆಂಗಿನ ಕಾಯಿ ಬೆಲೆ ₹15, 20, 30ವರೆಗಿದೆ. ಆದರೆ ತೆಂಗಿನ ಕಾಯನ್ನು ಕೆಡವಿ, ಸುಲಿಸಿ ಮಾರುಕಟ್ಟೆಗೆ ಸಾಗಿಸಿ ಮಾರಾಟದ ಬೆಲೆಗಳಿಗೆ ಹೋಲಿಸಿದರೆ ತೆಂಗಿನ ಕಾಯಿ ದರ ಕಡಿಮೆಯೇ. ಅದೇ 1 ಎಳನೀರಿನ ಬೆಲೆ 2 ತೆಂಗಿನಕಾಯಿ ಬೆಲೆಗೆ ಸಮವಾಗುವಷ್ಟು ದುಪ್ಪಟ್ಟಾಗಿದೆ. ಅಂದರೆ, ಎಳನೀರಿಗೆ ಸುಮಾರು ₹45ರಿಂದ 50 ಇದೆ.ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಹೆಚ್ಚೆಂದರೆ ₹30 ಇದೆ. ಬಿಟ್ಟರೆ ಕೊಬ್ಬರಿಯೂ ಕಡಿಮೆ ಇದ್ದು ಸರ್ಕಾರ ನೀಡಿರುವ ಬೆಂಬಲ ಬೆಲೆಯಿಂದಾಗಿ ರೈತರಿಗೆ ಬೋನಸ್ ನಂತಹ ಬೆಲೆ ಸಿಕ್ಕಿದೆ.
ಒಂದು ಕಾಲದಲ್ಲಿ ಕಡೂರು, ತರೀಕೆರೆ ತಾಲೂಕುಗಳಿಂದ ವ್ಯಾಪಾರಿಗಳು ಎಳನೀರು ಮಂಗಳೂರು, ಮುಂಬೈ, ಪೂನಾ ಮತ್ತಿತರ ಕಡೆಗೆ ತೋಟದಿಂದಲೇ ನೇರ ಖರೀದಿಸಿ ಕಳುಹಿಸುತ್ತಿದ್ದರು. ಆಗ 1 ಎಳನೀರಿಗೆ ಕನಿಷ್ಠ ₹15- 20 ಮಾತ್ರ ಇತ್ತು. ಇದೀಗ ಎಳನೀರಿಗೆ ತೋಟದಲ್ಲೇ ₹25 ರಿಂದ 30 ರೈತರಿಗೆ ಸಿಗುತ್ತಿದೆ. ಆದರೂ ತೋಟಗಳಲ್ಲಿ ಇಳುವರಿ ಕಡಿಮೆಯಾಗಿ ದುಡ್ಡು ಕೊಡುತ್ತೇವೆ ಎಂದರೂ ಎಳನೀರು ದೊರೆಯುತ್ತಿಲ್ಲ. ಹಾಗಾಗಿ ಅನೇಕ ವರ್ಷಗಳ ನಂತರ ಎಳನೀರಿಗೆ ಬೆಲೆ ಸಿಕ್ಕಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ದರೂ ಅದಷ್ಟು ಲಾಭ ಪಡೆಯಲು ಆಗದಂತೆ ಇಳುವರಿ ಕುಸಿದಿದೆ.ಎಳನೀರಿನ ಬೆಲೆ ಏರಿಕೆ ರೈತರು, ವರ್ತಕರು ಮತ್ತು ವ್ಯಾಪಾರಿಗಳಿಗೆ ₹45- 50 ವರೆಗೆ ಬೆಲೆ ಸಿಗುತ್ತಿರುವುದರಿಂದ ಇವರೆಲ್ಲರಿಗೂ ಸಂತೋಷ ತರುತ್ತಿದ್ದರೂ ಕೊಳ್ಳುವ ಗ್ರಾಹಕರಿಗೆ ಮಾತ್ರ ಹೆಚ್ಚು ಹೊರೆಯಾಗಿ ಪರಿಣಮಿಸಿದೆ. -- ಬಾಕ್ಸ್ ಸುದ್ದಿಗೆ-- ತೆಂಗು ಗರಿರೋಗ, ನುಸಿ ಪೀಡೆಯಿಂದ ಮುಕ್ತವಾಗಿಲ್ಲ ಸುಮಾರು 25 ವರ್ಷಗಳ ಹಿಂದಿನಿಂದ ತೆಂಗು ಹಲವಾರು ರೋಗ ಬಾಧೆಯಿಂದ ತತ್ತರಿಸುತ್ತಲೇ ಇದೆ. ತೆಂಗಿಗೆ ಕಪ್ಪು ತಲೆ ಹುಳು, ನುಸಿಪೀಡೆ ಮತ್ತು ಗರಿ ರೋಗದಂತ ಮಾರಕ ಕಾಯಿಲೆಗಳು ಹಬ್ಬಿ ಎಳನೀರು ಹಾಗೂ ತೆಂಗಿನಕಾಯಿ ಇಳುವರಿ ಇಲ್ಲದಂತಾಗಿ ರೈತರು ಸಂಕಷ್ಟಕ್ಕೆ ಈಡಾಗಿದ್ದರು. ರೋಗ ನಿಯಂತ್ರಣಕ್ಕೆ ಸರ್ಕಾರಕ್ಕೆ ಕ್ರಮ ಕೈಗೊಂಡರೂ ಅಷ್ಟಾಗಿ ಪರಿಣಾಮ ಬೀರದೆ ರೈತರ ಬದುಕು ಸಂಕಷ್ಟದಲ್ಲೇ ಇದೆ. ಈಗಲೂ ತೆಂಗು ಗರಿ ರೋಗ, ನುಸಿ ಪೀಡೆಯಿಂದ ಮುಕ್ತವಾಗಿಲ್ಲ.
ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಸ್ವಲ್ಪ ಮಟ್ಟಿನ ಇಳುವರಿ ಕುಸಿಯುವುದು ಸಹಜ. ಆದರೆ ಈ ಬಾರಿ ಬೇಸಿಗೆಗೂ ಮುನ್ನವೇ ಸಾಕಷ್ಟು ಇಳುವರಿ ಕುಸಿದಿರುವುದು ಮತ್ತು ಇನ್ನು ತಹಬದಿಗೆ ಬಾರದ ಕೆಲವು ರೋಗಗಳಿಂದ ಇಳುವರಿ ಮೇಲೆ ಪರಿಣಾಮ ಬೀರಿದೆ. ಇದು ರೈತರಿಗೆ ವರದಾನವಾಗಬೇಕಿದ್ದ ಎಳನೀರಿನ ಬೆಲೆ ಹೆಚ್ಚಳದ ಸಂತಸವನ್ನು ಕಸಿದಿದೆ.- ಹೇಳಿಕೆ--ಹಿಂದೆ ಎಳನೀರು ತೋಟಗಳಿಂದಲೇ ನೇರವಾಗಿ ಖರೀದಿ ನಡೆಯುತ್ತಿತ್ತು. ಆದರೆ ತೆಂಗಿನ ಮರಗಳಿಗೆ ರೋಗಗಳು ಹರಡಿದ ಕಾರಣ ತೋಟಗಳಲ್ಲಿ ಎಳನೀರಿನ ಇಳುವರಿ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಎಳನೀರನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯವಿದೆ. ತೋಟಗಳಲ್ಲಿ ಇಳುವರಿ ಕಡಿಮೆಯಾಗಿರುವ ಜೊತೆಗೆ ದೂರದ ಊರುಗಳಿಗೆ ಕಳುಹಿಸುತ್ತಿರುವ ಕಾರಣ ಮತ್ತು ಸ್ಥಳೀಯವಾಗಿ ಬೆಲೆ ಹೆಚ್ಚಾಗಿದೆ.----ಕೆ.ಟಿ. ತಮ್ಮಯ್ಯ,ಎಳನೀರು ವ್ಯಾಪಾರಿ,---ಕಡೂರು. 10ಕೆೆಕೆಡಿಯು1. ಎಳ ನೀರು ಮಾರುತ್ತಿರುವ ವ್ಯಾಪಾರಿ ತಮ್ಮಯ್ಯ. 10ಕೆಕೆಡಿಯು1ಎ.