ಶಿಕ್ಷಕರ ಕೊರತೆ ಕೊರಗಲ್ಲೇ ಶೈಕ್ಷಣಿಕ ವರ್ಷ ಆರಂಭ

KannadaprabhaNewsNetwork |  
Published : Jun 03, 2025, 02:06 AM IST
ಕಲಬುರಗಿ ಜಿಲ್ಲೆಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆ 298 ಹಾಗೂ ಪ್ರೌಢಶಾಲೆ 2050 ಸೇರಿದಂತೆ ಒಟ್ಟು 2348 ಸರ್ಕಾರಿ ಶಾಲೆಗಳಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಹುದ್ದೆ 8063, ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 6094 ಶಿಕ್ಷಕರು, 1969 ಶಿಕ್ಷಕರ ಹುದ್ದೆ ಖಾಲಿಯಾಗಿವೆ | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ಕೆಳಗಿನ ಸ್ಥಾನಮಾನದಲ್ಲೇ ತಮ್ಮ ಮಾನ ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗಲೇ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಲ್ಲೇ ಮತ್ತೊಂದು ಶೈಕ್ಷಣಿಕ ವರುಷಕ್ಕೆ ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆಗಳು ಪುನಾರಂಭಗೊಂಡಿವೆ.

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಕಲಬುರಗಿ ಸೇರಿದಂತೆ ಕಲ್ಯಾಣದ ಜಿಲ್ಲೆಗಳು ಕೆಳಗಿನ ಸ್ಥಾನಮಾನದಲ್ಲೇ ತಮ್ಮ ಮಾನ ಉಳಿಸಿಕೊಳ್ಳಲು ಹೆಣಗಾಡುತ್ತಿರುವಾಗಲೇ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಲ್ಲೇ ಮತ್ತೊಂದು ಶೈಕ್ಷಣಿಕ ವರುಷಕ್ಕೆ ಜಿಲ್ಲೆಯಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆಗಳು ಪುನಾರಂಭಗೊಂಡಿವೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಅನ್ನೋದ್ರಲ್ಲಿ ದೂಸ್ರಾ ಮಾತಿಲ್ಲವಾದರೂ ಶಿಕ್ಷಕರೇ ಇಲ್ಲ, ಕೊರತೆ ಕಾಡುತ್ತಿದೆ ಅನ್ನೋವಾಗ ಗುಣಮಟ್ಟದ ಶಿಕ್ಷಣ ಮರೀಚಿಕೆಯೇ ಸರಿ, ಶಿಕ್ಷಕರೇ ಇಲ್ಲದಿರುವಾಗ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಡಲಿ ಪೆಟ್ಟು ಬೀಳೋದು ನಿಶ್ಚಿತ ಎಂಬ ಚರ್ಚೆಗಳಲ್ಲೇ ಜಲ್ಲೆಯಲ್ಲಿರುವ ಖಾಲಿ ಶಿಕ್ಷಕರ ಪಟ್ಟಿಯಲ್ಲೊಮ್ಮೆ ಕಣ್ಣು ಹರಿಸಿದಾಗ ಆತಂಕದ ಚಿತ್ರಣವೇ ನಮ್ಮೆಲ್ಲರ ಮಂದೆ ಕಾಡುವಂತಿದೆ.

ಗುಣಮಟ್ಟದ ಶಿಕ್ಷಣ ಪೂರೈಸಬೇಕೆಂದರೆ ಪೂರ್ಣ ಪ್ರಮಾಣದಲ್ಲಿ ಶಿಕ್ಷಕರ ಹುದ್ದೆ ಭರ್ತಿಯಾಗಿರಬೇಕು. ಆದರೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರದಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಸುಮಾರು 2, 500ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ.

ಕಲಬುರಗಿ ಜಿಲ್ಲೆಯಾದ್ಯಂತ ಸರ್ಕಾರಿ ಪ್ರಾಥಮಿಕ ಶಾಲೆ 298 ಹಾಗೂ ಪ್ರೌಢಶಾಲೆ 2050 ಸೇರಿದಂತೆ ಒಟ್ಟು 2348 ಸರ್ಕಾರಿ ಶಾಲೆಗಳಿದ್ದು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಹುದ್ದೆ 8063, ಅದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 6094 ಶಿಕ್ಷಕರು, 1969 ಶಿಕ್ಷಕರ ಹುದ್ದೆ ಖಾಲಿಯಾಗಿವೆ.

ಅದರಂತೆ ಪ್ರೌಢಶಾಲೆಗೆ ಮಂಜೂರಾದ ಶಿಕ್ಷಕರ ಸಂಖ್ಯೆ 2785, ಅದರಲ್ಲಿ ಕಾರ್ಯ ನಿರ್ವಹಿಸುತ್ತಿರುವವರು 2190 ಶಿಕ್ಷಕರು, 595 ಹುದ್ದೆ ಭರ್ತಿಯಾಗದೆ ಖಾಲಿ ಉಳಿದಿವೆ.

ಖಾಲಿಯಿದ್ದಲ್ಲಿ ಅತಿಥಿ ಶಿಕ್ಷಕರ ನೇಮಕ:

ಕಲಬುರಗಿ ಜಿಲ್ಲೆಯಾದ್ಯಂತ ಒಟ್ಟು 2025 ಮಾರ್ಚ್ 30ರ ವರೆಗೆ 595 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು, 1969 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಯಾವ ಶಾಲೆಗಳಲ್ಲಿ ನಿರ್ದಿಷ್ಟ ಹುದ್ದೆಗಳ ಕೊರತೆಯಿದೆಯೋ, ಅಲ್ಲಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ತಾಲೂಕಿನ ಬಿಇಒ,ಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಸಪ್ಪಣಗೋಳ ತಿಳಿಸಿದರು.-----------

15 ದಿನ ಮನೆ ಭೇಟಿ ಆಂದೋಲನ

ಜೂ. 15ರವರೆಗೆ ಮಕ್ಕಳನ್ನು ಶಾಲೆಯ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಮಕ್ಕಳ ಪಾಲಕ ಪೋಷಕರ ಭೇಟಿಗಾಗಿ ಶಾಲಾ ಮುಖ್ಯಗುರುಗಳು ಹಾಗೂ ಸಹ ಶಿಕ್ಷಕರ ಸಮ್ಮುಖದಲ್ಲಿ ಇಲಾಖೆಯಿಂದ ಮನೆ ಭೇಟಿ ಆಂದೋಲನ ನಡೆಸಲಾಗುತ್ತಿದೆ. ಪ್ರತಿ ಬಾರಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಕನಿಷ್ಠ 10 ಪ್ರತಿಶತ ವಿದ್ಯಾರ್ಥಿಗಳು ಗೈರಾಗುತಿದ್ದು, ಶಾಲಾ ಮುಖ್ಯ ವಾಹಿನಿಗೆ ತರುವ ಕೆಲಸ ನಡೆಯುತ್ತಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಗುಂಡಪ್ಪ ಸಂಪಣ್ಣಗೋಳ ತಿಳಿಸಿದ್ದಾರೆ.

-----------------

ಖಾಲಿ ಹುದ್ದೆಗಳಲ್ಲಿರುವ ಅತಿಥಿ ಶಿಕ್ಷಕರ ಮೂಲಕ ಖಾಲಿಯಿರುವ ಹುದ್ದೆಗಳ ಕಾರ್ಯಭಾರವನ್ನು ಸರಿದೂಗಿಸಿಕೊಂಡು ಮಕ್ಕಳಿಗೆ ಪರಿಣಾಮಕಾರಿ ಬೋಧನೆ ಮಾಡಿ ಕಲಿಕಾ ಗುಣಮಟ್ಟವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆ ಪ್ರಯತ್ನ ನಡೆಸಿದೆ.

ಸೂರ್ಯಕಾಂತ್ ಮದಾನೆ ಡಿಡಿಪಿಐ ಕಲಬುರಗಿ.

ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲೆಗಳಿಗೆ ಮಂಜೂರಾದ ಹುದ್ದೆ, ಖಾಲಿ ಹುದ್ದೆ ವಿವರ

1) ಅಫಜಲ್ಪುರ- ಮಂಜೂರಾದ ಹುದ್ದೆ -962, ಕಾರ್ಯಭಾರ ಹುದ್ದೆ - 764, ಖಾಲಿ ಹುದ್ದೆ - 198.

2) ಆಳಂದ- ಮಂಜೂರು 1169, ಕಾರ್ಯಭಾರ 923, ಖಾಲಿ 246.

3) ಚಿಂಚೋಳಿ - ಮಂಜೂರು 1010, ಕಾರ್ಯಭಾರ 606, ಖಾಲಿ 404.

4) ಚಿತ್ತಾಪುರ- ಮಂಜೂರು 1282, ಕಾರ್ಯಭಾರ 1010, ಖಾಲಿ 272.

5) ಕಲಬುರಗಿ ಉತ್ತರ- ಮಂಜೂರು 752, ಕಾರ್ಯಭಾರ 680, ಖಾಲಿ 72.

6) ಕಲಬುರಗಿ ದಕ್ಷಿಣ - ಮಂಜೂರು 733, ಕಾರ್ಯಭಾರ 663, ಖಾಲಿ 70.

7) ಜೇವರ್ಗಿ - ಮಂಜೂರು 1324, ಕಾರ್ಯಭಾರ 879, ಖಾಲಿ 445.

8) ಸೇಡಂ: ಮಂಜೂರು - 831,ಕಾರ್ಯಭಾರ 596, ಖಾಲಿ 262

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ