ಡೊಳ್ಳಿನ ಪದಗಳ ಕಲೆ ಕುರುಬರ ಇಚ್ಛಾಶಕ್ತಿ ಕೊರತೆಯಿಂದ ಬೆಳಕಿಗೆ ಬರುತ್ತಿಲ್ಲ

KannadaprabhaNewsNetwork | Updated : Jan 05 2024, 04:03 PM IST

ಸಾರಾಂಶ

ಡೊಳ್ಳಿನ ಪದಗಳ ಕಲೆಯು ಕುರುಬರ ಇಚ್ಛಾಶಕ್ತಿ ಕೊರತೆಯಿಂದ ಬೆಳಕಿಗೆ ಬರುತ್ತಿಲ್ಲ. ಸರ್ಕಾರ ಜನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಹಾಲುಮತದ ಕುರುಬರು ಪ್ರಾಚೀನ ಡೊಳ್ಳಿನ ಪದದ ಕಲೆಯನ್ನು ಬೆಳೆಸಬೇಕಾಗಿದೆ ಎಂದು ಪುಣ್ಯಾರಣ್ಯ ಪತ್ರಿವನ ಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರ ಶ್ರೀಗಳು ಹೇಳಿದರು.

ನರಗುಂದ: ಡೊಳ್ಳಿನ ಪದಗಳ ಕಲೆಯು ಕುರುಬರ ಇಚ್ಛಾಶಕ್ತಿ ಕೊರತೆಯಿಂದ ಬೆಳಕಿಗೆ ಬರುತ್ತಿಲ್ಲ. ಕಾಟಾಚಾರಕ್ಕೀಗ ಸಣ್ಣ ಸಣ್ಣ ಮಕ್ಕಳಿಂದ ಡೊಳ್ಳು ಬಾರಿಸುವಿಕೆ ಕಾಣುತ್ತಿದೆ. ಸರ್ಕಾರ ಜನಪದ ಕಲೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಹಾಲುಮತದ ಕುರುಬರು ಎಲ್ಲರೂ ಒಂದಾಗಿ ಪ್ರಾಚೀನ ಡೊಳ್ಳಿನ ಪದದ ಕಲೆಯನ್ನು ಬೆಳೆಸಬೇಕಾಗಿದೆ ಎಂದು ಪುಣ್ಯಾರಣ್ಯ ಪತ್ರಿವನ ಮಠದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರ ಶ್ರೀಗಳು ಹೇಳಿದರು.

ಅವರು ಗುರುವಾರ ಪಟ್ಟಣದ ದಂಡಾಪುರ ಉಡಚಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೀರೇಶ್ವರ ಕಲಾ ತಂಡ ಇವರ ಸಹಯೋಗದಲ್ಲಿ ನಡೆದ ಜನಪದ ಸಂಭ್ರಮದ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಪ್ರಾಚೀನ ಕಲೆಉಳಿಸಲು ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಇದರ ದುರ್ಲಾಭವನ್ನು ಬೇರೆಯವರು ಪಡೆಯುತ್ತಿದ್ದಾರೆ. 

ಸ್ವಾರ್ಥ ಬಿಟ್ಟು ಒಟ್ಟಾಗಿ ಕೆಲಸ ಮಾಡಿದಾಗ ಪ್ರಾಚೀನ ಕಲೆ ಉಳಿಯಲು ಸಾಧ್ಯವೆಂದು ತಿಳಿಸಿದರು. ಕಾಂಗ್ರೆಸ್ ನರಗುಂದ ಮಂಡಲ ಅಧ್ಯಕ್ಷ ಪ್ರವೀಣ ಯಾವಗಲ್ಲ ಮಾತನಾಡಿ, ಜನಪದ ಕಲೆಗಳ ವೈಭವ ಕಡಿಮೆ ಆಗುತ್ತಿರುವುದು ವಿಷಾದನೀಯವಾಗಿದೆ. ಕುಟುಂಬದ ಹಾಗೂ ಧರ್ಮಾಚರಣೆಯ ವಿಷಯಗಳನ್ನು ಒಳಗೊಂಡಿದೆ. ಅನೇಕ ಉತ್ಸವ, ಸಮಾರಂಭಗಳಲ್ಲಿ ಕಲೆಯನ್ನು ಬಿತ್ತರಿಸಲು ಮತ್ತು ಸರ್ಕಾರದ ಸಹಾಯ ಬಯಸುವುದು ಆಗಬೇಕಾಗಿದೆ ಎಂದರು.ಶಾಸಕರ ಪುತ್ರ ಮಹೇಶಗೌಡ ಪಾಟೀಲ ಮಾತನಾಡಿ, ಕೆಂಗಲ್ ಹನುಮಂತರಾಯವರು ಜನಪದ ಕಲೆಗಳನ್ನು ಶಾಶ್ವತ ಉಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸ್ಥಾಪಿಸಿದರು. 

ಈಗಿನ ಕಾಲವು ಡಿಜೆ, ಸೌಂಡ್ ಸಿಸ್ಟಮ್, ಜಾಂಜ ಮುಂತಾದ ಶಬ್ದ ಮಾಲಿನ್ಯ ಉಂಟು ಮಾಡುವ ವ್ಯವಸ್ಥೆಗೆ ಹೊಂದಿಕೊಂಡಿದೆ. ಕಲೆ ಉಳಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ದ್ಯಾಮಣ್ಣ ಸವದತ್ತಿ ಮಾತನಾಡಿ, ಜನಪದ ಕಲೆ ಪ್ರಾಚೀನ ಸಂಪತ್ತಾಗಿದೆ. ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬಂದು ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿದ ಜ್ಞಾನ ಭಂಡಾರವಾಗಿದೆ ಎಂದರು.

ಎಚ್ .ಬಿ. ಅಸೂಟಿ, ಪುರಸಭೆ ಸದಸ್ಯ ಪ್ರಶಾಂತ ಜೋಶಿ, ಪಿಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಉಮೇಶ ಯಳ್ಳೂರ, ಫಕೀರಪ್ಪ ಸವದತ್ತಿ, ಶಿವಪ್ಪ ಕತ್ತಿ, ನಿಂಗಣ್ಣ ಡೋಣಿ, ಸಿದ್ದಪ್ಪ ದುಂಡಿ, ಬೀರಪ್ಪ ದರಗದ, ಗೋವಿಂದ ಕುರಿ, ಬಸು ನೆಗಳೂರ, ಸಾಬಣ್ಣ ಸವದತ್ತಿ, ಗದಿಗೆಪ್ಪ ಸವದತ್ತಿ, ಶ್ರೀ ಬೀರೇಶ್ವರ ಕಲಾ ತಂಡದ ಪದಾಧಿಕಾರಿಗಳು ಇದ್ದರು.

Share this article