ಗಡಿ ಜಿಲ್ಲೆಗೂ ಉಂಟು ಶ್ರೀ ರಾಮನ ನಂಟು

KannadaprabhaNewsNetwork | Published : Jan 21, 2024 1:32 AM

ಸಾರಾಂಶ

ಚಾಮರಾಜನಗರ ಗಡಿಯಲ್ಲಿರುವ ತಮಿಳುನಾಡಿನ ಸತ್ಯಮಂಗಲಂ ಅರಣ್ಯದ ಮೂಲಕ ಲಂಕೆಯತ್ತ ಪಯಣ ಬೆಳೆಸಿದ್ದ ಶ್ರೀರಾಮ. ಸೀತಾಪಹರಣ ವೇಳೆ ಸೀತೆಯನ್ನು ಅರಸಿ ಹೊರಟಿದ್ದಾಗ ಕಾನನದಲ್ಲಿ ದಾರಿ ಕಾಣದಾಗಿದ್ದಾಗ ಬಾಣ ಉಡಿ ಬೆಟ್ಟ ಸೀಳಿ, ಲಂಕೆಗೆ ದಾರಿ ಮಾಡಿಕೊಂಡಿದ್ದ ಎಂಬ ಅದೇ ರಾಮರ ಪಾದ.

ಸತ್ಯಮಂಗಲಂ ಅರಣ್ಯದ ಮೂಲಕ ಲಂಕೆಯತ್ತ ಪಯಣ ಬೆಳೆಸಿದ್ದ ಶ್ರೀರಾಮ । ಬಾಣ ಹೂಡಿ ಬೆಟ್ಟ ಸೀಳಿದ್ದ ರಾಮಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ಗಡಿಯಲ್ಲಿರುವ ತಮಿಳುನಾಡಿನ ಸತ್ಯಮಂಗಲಂ ಅರಣ್ಯದ ಮೂಲಕ ಲಂಕೆಯತ್ತ ಪಯಣ ಬೆಳೆಸಿದ್ದ ಶ್ರೀರಾಮ. ಸೀತಾಪಹರಣ ವೇಳೆ ಸೀತೆಯನ್ನು ಅರಸಿ ಹೊರಟಿದ್ದಾಗ ಕಾನನದಲ್ಲಿ ದಾರಿ ಕಾಣದಾಗಿದ್ದಾಗ ಬಾಣ ಉಡಿ ಬೆಟ್ಟ ಸೀಳಿ, ಲಂಕೆಗೆ ದಾರಿ ಮಾಡಿಕೊಂಡಿದ್ದ ಎಂಬ ಅದೇ ರಾಮರ ಪಾದ.ತಾಳವಾಡಿ ತಾಲೂಕಿನ ದೊಡ್ಡಪುರ ಬಳಿ ಮಂಡಿಯೂರಿ ರಾಮ ಬಾಣ ಹೂಡಿದ್ದ ಸ್ದಳದಲ್ಲಿ ದೊಡ್ಡ ಕುಳಿಯಾಗಿದ್ದು, ರಾಮ ಮಂಡಿಯೂರಿದ್ದ ಸ್ಥಳವನ್ನು ರಾಮನ ಪಾದ ಎಂದು ಕರೆಯಲಾಗುತ್ತದೆ. ರಾಮನ ಪಾದವೇ ಮಂದಿರವಾಗಿ, ದೇವರ ಹೆಜ್ಜೆ ಗುರುತನ್ನು ಶ್ರದ್ಧಾ ಭಕ್ತಿಯಿಂದ ನಿತ್ಯ ಪೂಜಿಸಲಾಗುತ್ತದೆ. ಸತ್ಯಮಂಗಲಂ ಅರಣ್ಯದಲ್ಲಿರುವ ರಾಮರ ಪಾದ ಪ್ರದೇಶದಿಂದ ಅಯೋಧ್ಯೆಗೆ ಮಣ್ಣು ಹಾಗೂ ತೀರ್ಥ ತೆಗೆದುಕೊಂಡು ಹೋಗಿದ್ದು, ಜ 22 ರಂದು ವಿಶೇಷ ಪೂಜೆಗೆ ಅಯೋಧ್ಯೆಗೆ ಮಂತ್ರಾಕ್ಷತೆ ಸೇರಿ ಪರಿಕರಗಳನ್ನು ರಾಮರ ಪಾದಕ್ಕೆ ಟ್ರಸ್ಟ್‌ನವರು ಕಳಿಸಿಕೊಟ್ಟಿದ್ದಾರೆ.

ಬಾಕ್ಸ್‌.....ಬಾಣ ಬಿಟ್ಟು ಬೆಟ್ಟ ಸೀಳಿದ್ದ ರಾಮ ತಮಿಳುನಾಡಿನ ತಾಳವಾಡಿ ತಾಲೂಕಿನ‌ ರಾಮಪುರ ಸಮೀಪದ ಅರಣ್ಯದ ನಡುವೆ ರಾಮರಪಾದ ಎಂಬ ದೇಗುಲವಿದೆ. ವನವಾಸ ಸಮಯದಲ್ಲಿ ಶ್ರೀರಾಮ ಒಂದು ದಿನ ಇಲ್ಲಿ ಬಂದು ತಂಗಿದ್ದು, ಹೊರಡುವ ವೇಳೆ ಎದುರಾದ ''''''''''''''''ತಲ'''''''''''''''' ಎಂಬ ರಾಕ್ಷಸನನ್ನು ಸಂಹರಿಸಲು ಹೂಡಿದ ಬಾಣ ಆತನ ತಲೆಯನ್ನು ಹಾದು ಹೋಗುವಾಗ ಅಡ್ಡ ಸಿಕ್ಕ ಬೆಟ್ಟವನ್ನು ಸೀಳಿದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಪುರಾಣದಲ್ಲಿ ಉಲ್ಲೇಖವಾದಂತೆ ಇಲ್ಲಿನ ಬೆಟ್ಟದ ಮಧ್ಯದ ಭಾಗ ಕತ್ತರಿಸಿದಂತಿದೆ. ಬಿಲ್ಲು ಹೂಡುವಾಗ ನೆಲಕ್ಕೆ ಮಂಡಿಯೂರಿದ ಕುರುಹಾಗಿ ಇಂದಿಗೂ ಅಲ್ಲಿ ಕಪ್ಪು ಶಿಲೆಯೊಂದರಲ್ಲಿ ಕುಳಿ ಬಿದ್ದಿದೆ. ಈ ಕುಳಿಯನ್ನು ರಾಮನ ಪಾದವೆಂದು ನಿತ್ಯ ಅಗ್ರಪೂಜೆ ಸಲ್ಲಿಸಲಾಗುತ್ತದೆ.

ಶನಿವಾರದಂದು ರಾಮನಿಗೆ ವಿಶೇಷ ಪೂಜೆಶನಿವಾರ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಪೂಜೆ ನಡೆಯುತ್ತಿದ್ದು, ವಿವಿಧ ಭಾಗಗಳಿಂದ ರಾಮನ ಭಕ್ತರು ಆಗಮಿಸುತ್ತಾರೆ. ವಿಶೇಷವೆಂದರೆ, ರಾಮ- ಸೀತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ ಕಾರ್ಯ ಸಿದ್ಧಿಗಾಗಿ ಬೇಡಿದರೆ ಆತ ಇಷ್ಟಾರ್ಥ ಸಿದ್ಧಿಸುತ್ತಾನೆ ಎನ್ನುವುದು ಇಲ್ಲಿಯ ನಂಬಿಕೆ. ಮಕ್ಕಳಾಗದೆ ಇರುವವರು ಕೂಡ ಇಲ್ಲಿಗೆ ಬಂದು ಸಂತಾನ ಭಾಗ್ಯಕ್ಕಾಗಿ ಬೇಡಿಕೊಳ್ಳುತ್ತಾರೆ ಎನ್ನುತ್ತಾರೆ ಆರ್ಚಕ ರಂಗರಾಜು.

ಪುರಾಣದ ಬಗ್ಗೆ ಹೇಳುವ ತಾಳವಾಡಿ ಭಾಗದ ಜನ ತಮ್ಮ ಬೇಕು ಬೇಡಗಳಿಗಾಗಿ ರಾಮನ ಪಾದಕ್ಕೆ ಪೂಜೆ ಸಲ್ಲಿಸುತ್ತಾರೆ. ಕಾಡಿನ ನಡುವೆ ಇರುವ ರಾಮನ ಪಾದದ ಕುರುಹು ಈ ಭಾಗದ ಜನರ ಬಲವಾದ ನಂಬಿಕೆಗೆ ಕಾರಣವಾಗಿದೆ. ಪ್ರತಿ ಶನಿವಾರ, ರಾಮನವಮಿ ಸೇರಿದಂತೆ ಅಮಾವಾಸ್ಯೆ, ಹುಣ್ಣಿಮೆ ದಿನಗಳು ಇಲ್ಲಿನ ವಿಶೇಷ ದಿನಗಳಾಗಿವೆ. ಆನೆಗಳು ಹಾಗೂ ಹುಲಿ ಸಂಚಾರ ಇಲ್ಲಿ ಸಾಮಾನ್ಯವಾಗಿರುವುದರಿಂದ ಏಕಾಂಗಿಯಾಗಿ ತೆರಳಲು ಮತ್ತು ಮುಂಜಾನೆ ಹಾಗೂ ಸಂಜೆ 4 ರ ಬಳಿಕ ದೇಗುಲ ಭೇಟಿ ಅಪಾಯಕಾರಿಯಾಗಿದೆ.

Share this article