ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಅಪಾರವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ಪಟ್ಟಣದಲ್ಲಿ ಸುಮಾರು ₹4.82 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಹೊಳೆಹೊನ್ನೂರು ಕೊಪ್ಪದ ಬಳಿಯ ಬೈಪಾಸ್‌ನಿಂದ ಚಿಕ್ಕ ಕೂಡಲಿ ಬೈಪಾಸ್‌ವರೆಗೆ ಹದಗೆಟ್ಟಿರುವ ರಸ್ತೆ ಮತ್ತು ಹಳೆಯ ಸೇತುವೆ ದುರಸ್ತಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ಚಿತ್ರದುರ್ಗದಿಂದ ಶಿವಮೊಗ್ಗವರೆಗೆ ಅಪೂರ್ಣಗೊಂಡ ರಸ್ತೆ ನಿರ್ಮಾಣ ಮತ್ತು ಚಿತ್ರದುರ್ಗ, ಚನ್ನಗಿರಿ, ಹೊಳೆಹೊನ್ನೂರು ಹಾಗೂ ಶಿವಮೊಗ್ಗ ನಗರಗಳ ಚತುಷ್ಪಥ ಬೈಪಾಸ್ ರಸ್ತೆ, ಚಿತ್ರದುರ್ಗ, ಹೊಳಲ್ಕೆರೆ, ಶಿವಮೊಗ್ಗದಲ್ಲಿ 3 ರೈಲ್ವೆ ಮೇಲ್ಲೇತುವೆ, ಭದ್ರಾನದಿಗೆ 4 ಪಥದ ಭಾರೀ ಸೇತುವೆ, 10 ಕಿರುಸೇತುವೆ, ವೆಹಿಕಲ್ ಅಂಡರ್ ಪಾಸ್‌ಗಳು ಮತು 42 ಕಲ್ವರ್ಟ, ಕಾಂಕ್ರೀಟ್ ಚರಂಡಿ, ಟ್ರಕ್ ಹಾಗೂ ಬಸ್ ನಿಲ್ದಾಣಗಳ ನಿರ್ಮಾಣಕ್ಕಾಗಿ ₹350 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.ಪಟ್ಟಣದಿಂದ ಹೊರಹೋಗುವ ರಸ್ತೆಗೆ ವಿದ್ಯುತ್ ದೀಪ, ಬಾಕ್ಸ್ ಚರಂಡಿ ಕಾಮಗಾರಿಗೆ ಮಾಜಿ ಶಾಸಕ ಕೆ.ಬಿ. ಅಶೋಕನಾಯ್ಕ ಅವರು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭ ₹5 ಕೋಟಿ ಹಾಗೂ ಭದ್ರಾವತಿ ರಸ್ತೆಯ ಕಾಮಾಗಾರಿಗೆ ₹5 ಕೋಟಿ ಅನುದಾನ ತರುವಲ್ಲಿ ಸಫಲರಾಗಿದ್ದಾರೆ ಎಂದರು.
ಶಾಸಕಿ ಶಾರದ ಪೂರ್ಯಾ ನಾಯ್ಕ್ ಮಾತನಾಡಿ, ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿರುವುರಿಂದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸಂಸದರ ಅನುದಾನದಿಂದ ಕ್ಷೇತ್ರವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಕೈ ಜೋಡಿಸಿ, ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲಾಗುವುದು. ಈ ಕೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಚರಿಸಲು ಬಸ್ ಸೌಲಭ್ಯವನ್ನು ಒದಗಿಸುವಂತೆ ಮತ್ತು ಬಸ್‌ಗಳು ಕಾಲೇಜು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಕೋರಿ ಕಾಲೇಜು ಪ್ರಾಂಶುಪಾಲೆ ಡಾ. ಕೆ.ಆರ್. ಪ್ರತಿಭಾ ನೇತೃತ್ವದಲ್ಲಿ ಶಿಕ್ಷಕರು ಹಾಗೂ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ನಿಕಟಪೂರ್ವ ಶಾಸಕ ಕೆ.ಬಿ. ಅಶೋಕ ನಾಯ್ಕ, ಕಲ್ಲಜ್ಜನಾಳ್ ಮಂಜುನಾಥ, ಸುಬ್ರಮಣಿ, ಕಿರಣಕುಮಾರ್, ರವಿಕುಮಾರ್, ಮಹಾದೇವಪ್ಪ, ವೆಂಕಟೇಶ್, ನಾರಾಯಣ, ನಿರ್ಮಲ, ಬಿಂದು, ಎ.ಕೆ.ರಮೇಶ್, ಪರಶುರಾಮ್, ಶ್ರಿನಿವಾಸ್, ಮಲ್ಲೇಶಪ್ಪ, ಉಜ್ಜನಪ್ಪ ಇನ್ನಿತರರಿದ್ದರು.ಬಸ್ ಸೌಲಭ್ಯಕ್ಕೆ ಮನವಿ:
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಸ್ ಸೌಲಭ್ಯ ಮತ್ತು ನಿಲುಗಡೆಗೆ ಆಗ್ರಹಿಸಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.- - - ಟಾಪ್ ಕೋಟ್‌ಈಗಾಗಲೇ ಶಿವಮೊಗ್ಗದಿಂದ ಹುಬ್ಬಳಿಗೆ ರೈಲು ಓಡಾಡಲು ಕಾಮಗಾರಿ ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ಶಿವಮೊಗ್ಗದ ಮುಖಾಂತರ ಹುಬ್ಬಳಿಗೆ ತಲುಪುವ ಕಾರ್ಯವಾಗಲಿದೆ. ಅಲ್ಲದೇ, ಹೆಚ್ಚು ರೈಲುಗಳನ್ನು ನಿಯೋಜಿಸಲಾಗುವುದರ ಜೊತೆಗೆ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಾರಂಭ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ
- ಬಿ.ವೈ.ರಾಘವೇಂದ್ರ, ಸಂಸದ- - - -28ಎಚ್‌ಎಚ್‌ಆರ್‌ಪಿ1:
ಹೊಳೆಹೊನ್ನೂರಿನ ರಸ್ತೆ ಕಾಮಗಾರಿಗೆ ಸಂಸದ ಬಿ.ವೈ. ರಾಘವೇಂದ್ರ ಗುದ್ದಲಿ ಪೂಜೆ ನೆರೆವೇರಿಸಿದರು. ಈ ಸಂದರ್ಭದಲ್ಲಿ ಶಾಸಕಿ ಶಾರದಾ ಪೂರ್ಯನಾಯ್ಕ, ಮಾಜಿ ಶಾಸಕ ಕೆ.ಬಿ.ಅಶೋಕ ನಾಯ್ಕ ಹಾಜರಿದ್ದರು.