ಆರ್ಥಿಕ ಪ್ರಗತಿಯೊಂದಿಗೆ ನೆಮ್ಮದಿ ಜೀವನದ ಪರಿಕಲ್ಪನೆ ಅಧ್ಬುತ: ಸದಾಶಿವ ಬಂಗೇರಾ

KannadaprabhaNewsNetwork | Published : Aug 22, 2024 12:58 AM

ಸಾರಾಂಶ

ಕಡೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಸದಸ್ಯರ ಮಕ್ಕಳಿಗೆ ನೀಡುವ ಶಿಷ್ಯವೇತನ (ಸುಜ್ಞಾನ ನಿಧಿ) 2,18,69 ಕೋಟಿ ರು. ಮಕ್ಕಳಿಗೆ ನೀಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಸದಾಶಿವ ಬಂಗೇರಾ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸುಜ್ಞಾನ ನಿಧಿ ವಿತರಣೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಕಡೂರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಸದಸ್ಯರ ಮಕ್ಕಳಿಗೆ ನೀಡುವ ಶಿಷ್ಯವೇತನ (ಸುಜ್ಞಾನ ನಿಧಿ) 2,18,69 ಕೋಟಿ ರು. ಮಕ್ಕಳಿಗೆ ನೀಡಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಸದಾಶಿವ ಬಂಗೇರಾ ತಿಳಿಸಿದರು.

ತಾಲೂಕಿನ ಮಲ್ಲೇಶ್ವರ ಗ್ರಾಮದ ಶ್ರೀ ಸ್ವರ್ಣಾಂಭ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಸುಜ್ಞಾನ ನಿಧಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 17 ವರ್ಷದಿಂದ ಕಡೂರು ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಆರಂಭವಾಗಿದ್ದು ಡಾ.ವೀರೆಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಅಮ್ಮನವರ ರಾಮರಾಜ್ಯದ ಕನಸು, ಪಾನಮುಕ್ತ ಸಮಾಜ ನಿರ್ಮಾಣ, ಆರ್ಥಿಕವಾಗಿ ಪ್ರಗತಿಹೊಂದಿ ನೆಮ್ಮದಿ ಜೀವನ ನಡೆಸುವ ಪರಿಕಲ್ಪನೆ ಅಧ್ಬುತವಾದದ್ದು. ಶ್ರೀ ಕ್ಷೇತ್ರ ಗ್ರಾಮಭಿವೃದ್ಧಿ ಯೋಜನೆ ಸಾಲ ಕೊಡುವುದು ಮತ್ತು ವಸೂಲಿ ಮಾಡುವುದಕ್ಕೆ ಮಾತ್ರ ಸೀಮಿತ. ನೂರಾರು ಜನಪರ ಯೋಜನೆ ಹಾಕಿಕೊಂಡಿದ್ದು ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕವಾಗಿ ಒತ್ತು ನೀಡಿದೆ. ಸುಜ್ಞಾನ ನಿಧಿಯಿಂದ ರಾಜ್ಯದಲ್ಲಿ ಈ ಸಾಲಿನಲ್ಲಿ 96 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು 116 ಕೋಟಿ ಹಣ ಮಕ್ಕಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಕಡೂರು ತಾಲೂಕಿನಲ್ಲಿ 189 ಮಕ್ಕಳು ಈ ಯೋಜನೆ ಫಲಾನುಭವಿಗಳಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಈ ವರ್ಷ 1750 ಮಕ್ಕಳು ಶಿಷ್ಯವೇತನ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಪಾನಮುಕ್ತ ಸಮಾಜ ನಿರ್ಮಾಣ, ಆರೋಗ್ಯ ಕಾರ್ಡ್, ಶಿಕ್ಷಣ, ಶುದ್ಧ ಕುಡಿಯುವ ನೀರು, ದೇವಾಲಯಗಳ ಕಟ್ಟಡಕ್ಕೆ ಹಣ, ಹೈನುಗಾರಿಕೆ, ಡೈರಿ ಕಟ್ಟಲು ಹಣ, ಸಸಿ ನೆಡುವ ಕಾರ್ಯಕ್ರಮ, ವಾತ್ಸಲ್ಯ ಮನೆ, ಶಿಕ್ಷಕರಿಲ್ಲದ ಶಾಲೆಗೆ ಶಿಕ್ಷಕರ ನೇಮಕ, ಮಹಿಳೆಯರಿಗೆ ಹೊಲಿಗೆ ತರಬೇತಿ, ಮಲೆನಾಡಿನಲ್ಲಿ ಪ್ರಕೃತಿ ವಿಕೋಪವಾದಾಗ ರಕ್ಷಣೆಗೆ 850 ಶೌರ್ಯರ ತಂಡ ರಚಿಸಿದ್ದು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನೂರಾರು ಯೋಜನೆ ಜನರ ಹಿತಕ್ಕಾಗಿ ಅರ್ಪಣೆ ಮಾಡಿದ್ದಾರೆ ಎಂದರು.

ಕಡೂರು ಪಿಎಸ್‍ಐ ಪವನ್ ಕುಮಾರ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಿಂದ ಬಡವರಿಗೆ ಹೆಚ್ಚಿನ ಅವಕಾಶಗಳಿದ್ದು ಅದರಲ್ಲೂ ಮಹಿಳೆ ಯರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿ. ಶೌರ್ಯ ವಿಪತ್ತು ತಂಡದ ಕೆಲಸಗಳನ್ನು ತಾವು ಕಂಡಿದ್ದು ನಿಜಕ್ಕೂ ಅದು ಸಾಧನೆ. ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಮೊದಲ ಆಧ್ಯತೆ ನೀಡಿದ್ದು ಈಗ ಪುರುಷರು ಸಹ ಸಾಲ ಪಡೆಯಲು ಅರ್ಹರಾಗಿದ್ದು ಶ್ರೀ ಕ್ಷೇತ್ರದ ಪೂಜ್ಯರ ಯೋಜನೆ ಅನನ್ಯವಾಗಿವೆ ಎಂದರು.

ಶಿಕ್ಷಣ ಇಲಾಖೆ ಶಿಕ್ಷಕ ರಾಜಶೇಖರ್, ಶ್ರೀನಿವಾಸ್ , ರೋಟರಿಯನ್ ಮಂಜುನಾಥ್, ರವಿಕುಮಾರ್, ಪತ್ರಕರ್ತ ಎ.ಜೆ.ಪ್ರಕಾಶ್‍ಮೂರ್ತಿ ಇದ್ದರು. ಕಾರ್ಯಕ್ರಮವನ್ನು ಕಡೂರು ತಾಲೂಕು ಯೋಜನಾ ನಿರ್ದೇಶಕ ಪ್ರಸಾದ್‍ನಾಯಕ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ 187 ಮಕ್ಕಳಿಗೆ ಶಿಷ್ಯವೇತನ ವಿತರಣೆ ಮಾಡಲಾಯಿತು.20ಕೆಕೆಡಿಯು2.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಡೆದ ಸುಜ್ಞಾನ ನಿಧಿ ಕಾರ್ಯಕ್ರಮವನ್ನು ಶಿಕ್ಷಕ ರಾಜಶೇಖರ್ ಉದ್ಘಾಟಿಸಿದರು

Share this article