ಸರ್ಕಾರಕ್ಕಿಂತಲೂ ಸಹಕಾರಿ ರಂಗ ಬಲಿಷ್ಠ ಕ್ಷೇತ್ರ

KannadaprabhaNewsNetwork | Published : Mar 5, 2025 12:32 AM

ಸಾರಾಂಶ

ಮಾಜದಲ್ಲಿ‌ ಜನಪರ ಕೆಲಸಗಳನ್ನು ಮಾಡುವಾಗ ಪಕ್ಷಭೇದ ಮರೆತು ಜನ ಸೇವೆ ಮಾಡಿದಾಗ ಅದು ಜನಾರ್ಧನನ ಸೇವೆಯಾಗಲಿದೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದಿನ-ದಲಿತ, ಬಡವ-ಬಲ್ಲಿದ ಮತ್ತು ಕಾರ್ಮಿಕ ವರ್ಗಕ್ಕೆ ಆರ್ಥಿಕ ಸಹಾಯ, ಸಹಕಾರ ನೀಡಿ ದುಡಿಯುವ ಕೈಗಳಿಗೆ ಕಾಯಕ‌ ನೀಡುವ ಮಹತ್ತರ ಕಾರ್ಯ ಸಹಕಾರ ರಂಗದಲ್ಲಿ‌ ಮಾಡಬಹುದು ಎಂದು ರಾಜ್ಯ ಸಹಕಾರಿ‌ ಸಂಘಗಳ ಮಹಾಮಂಡಳದ ನೂತನ ನಿರ್ದೇಶಕ ಉಮೇಶ ಬಾಳಿ ಹೇಳಿದರು.

ಸಮೀಪದಲ್ಲಿ ಹೊಸುರ ಗ್ರಾಮದ ಮಡಿವಾಳೇಶ್ವರ ಪಿಕೆಪಿಎಸ್‌ನಲ್ಲಿ ನಡೆದ ಸಾಧಕರ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರಿ ರಂಗದಲ್ಲಿ ಮಾಡುವ ಕೆಲಸಗಳನ್ನು ಯಾವ ಸರ್ಕಾರಗಳಿಂದಲ್ಲೂ ಮಾಡಲು ಸಾಧ್ಯವಿಲ್ಲ, ಅಷ್ಟು ಬಲಿಷ್ಠವಾದ ಕ್ಷೇತ್ರವೆ ಸಹಕಾರಿ ರಂಗ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಪ್ರಕಾಶ ಮೂಗಬಸವ ಮಾತನಾಡಿ, ಸಮಾಜದಲ್ಲಿ‌ ಜನಪರ ಕೆಲಸಗಳನ್ನು ಮಾಡುವಾಗ ಪಕ್ಷಭೇದ ಮರೆತು ಜನ ಸೇವೆ ಮಾಡಿದಾಗ ಅದು ಜನಾರ್ಧನನ ಸೇವೆಯಾಗಲಿದೆ. ಚುನಾವಣೆ ಎದುರಿಸಿದಾಗ ಪಕ್ಷದ ಚಿಹ್ನೆ ಅಡಿಯಲ್ಲಿ ಇರುತ್ತದೆ. ಪಕ್ಷದ ಚುಟುವಟಿಕೆಯಲ್ಲಿ ಪಕ್ಷಕ್ಕೆ ನಿಷ್ಠಾವಂತರಾಗಿದ್ದು ಅದನ್ನು ಮೀರಿದ ಬಾಂಧವ್ಯಕ್ಕೆ ಧಕ್ಕೆ ಬರದಂತಿರಬೇಕು ಎಂದರು.

ಈ ವೇಳೆ ಕೇಂದ್ರ ‌ಸರ್ಕಾರದ‌ ನೈಋತ್ಯ ರೈಲ್ವೆ ವಿಭಾಗದ ಡಿಆರ್‌ಯುಸಿಸಿ‌ ನಾಮನಿರ್ದೇಶನ ಸದಸ್ಯ ಎಫ್.ಎಸ್.ಸಿದ್ದನಗೌಡರ, ರಾಜ್ಯ ಸಹಕಾರ ಮಾಹಾಮಂಡಳ ಸ್ಥಾನಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಉಮೇಶ ಬಾಳಿ, ಜಿಲ್ಲಾ ಕೃಷಿಕ ಸಮಾಜ ಉಪಾಧ್ಯಕ್ಷ ‌ಗುರು ಮೆಟಗುಡ್, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕಾರ್ತಿಕ ಪಾಟೀಲ, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ‌ಉಮೇಶ ಬೋಳೆತ್ತಿನ‌ ರವರನ್ನು ಸತ್ಕರಿಸಲಾಯಿತು.

ಡಿಸಿಸಿ ಬ್ಯಾಂಕ್ ‌ಮಾಜಿ‌ ನಿರ್ದೇಶಕ ಸೊಗಲ ಸೋಮೇಶ್ವರ ಟ್ರಸ್ಟ್ ಅಧ್ಯಕ್ಷ ವೀರನಗೌಡ ಸಂಗಣ್ಣವರ, ಉಪಾಧ್ಯಕ್ಷ ಕುಮಾರ ಬೋಳೆತ್ತಿನ, ಮಡಿವಾಳಪ್ಪ ಬೂದಿಹಾಳ, ಸುರೇಶ ಬಾಳೆಕುಂದರಗಿ, ನಾಗಪ್ಪ ಆರೇರ, ಮಂಜು ಪಾಟೀಲ, ಫಕೀರ ಜಡಿ, ಶಂಕರ ಹಿರುನವರ ಇತರರಿದ್ದರು. ಸಂಘದ ಸಿಇಒ ಮಂಜುನಾಥ ಪೆಂಟೇದ ಸ್ವಾಗತಿಸಿ, ನಿರೂಪಿಸಿದರು. ಮೊಮಿನ ಧಪೆದಾರ ವಂದಿಸಿದರು.

Share this article