ವಿದ್ಯಾವಂತರಾಗಿ ಬೆಳಗಬೇಕೆನ್ನುವ ಆಸೆ ಗುರು ಪರಂಪರೆಯದ್ದು

KannadaprabhaNewsNetwork | Updated : Feb 20 2024, 01:52 AM IST

ಸಾರಾಂಶ

ಸದಾ ಮಕ್ಕಳಲ್ಲಿ ನಗು ಇರಬೇಕು. ಒಳ್ಳೆಯ ಸಾಧಕನಾಗಿ ಸಾಧನೆ ಮಾಡಬೇಕೆಂಬ ಮನೋಭಾವ ಮಕ್ಕಳಲ್ಲಿ ಸ್ಪರ್ಧಾ ಬೆಳೆಯಬೇಕು. ವಿದ್ಯಾವಂತರಾಗಿ ಬೆಳಗಬೇಕೆನ್ನುವ ಆಸೆ ಗುರು ಪರಂಪರೆಯದ್ದಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮಡಿಕೇಶ್ವರದ ಶಿಕ್ಷಕ ಬಿ.ಎಸ್.ಹಂಚಲಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಸದಾ ಮಕ್ಕಳಲ್ಲಿ ನಗು ಇರಬೇಕು. ಒಳ್ಳೆಯ ಸಾಧಕನಾಗಿ ಸಾಧನೆ ಮಾಡಬೇಕೆಂಬುವುದೇ ಗುರುಗಳದ್ದಾಗಿದೇ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ವಿದ್ಯಾವಂತರಾಗಿ ಬೆಳಗಬೇಕೆನ್ನುವ ಆಸೆ ಗುರು ಪರಂಪರೆಯದ್ದಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮಡಿಕೇಶ್ವರದ ಶಿಕ್ಷಕ ಬಿ.ಎಸ್.ಹಂಚಲಿ ಹೇಳಿದರು.

ಸ್ಥಳೀಯ ಶ್ರೀ ಖಾಸ್ಗತೇಶ್ವರ ಕೃಪಾಪೋಷಿತ ಗಂಗಮ್ಮ ಚನ್ನಪ್ಪ ಮುದಗಲ್ಲ ಬಾಲಕೀಯರ ಪ್ರೌಢಶಾಲೆಯ ೨೦೨೩-೨೪ನೇ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿನಿಯರಿಗೆ ಶುಭಕೋರುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹುಟ್ಟು ಸಾವಿನ ನಡುವೆ ಅಹಂ ತುಂಬಿದೆ. ಅಹಂ ಇರದಿದ್ದರೇ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ನಡೆ, ನುಡಿ ಆದರ್ಶಕತೆ ಕುರಿತು ಅನ್ಯರು ನಿಮ್ಮ ಮಾತಾಪಿತರಿಗೆ ತಿಳಿಸುತ್ತಾರೋ ಆವಾಗ ಜೀವನ ಸಾರ್ಥಕತೆಯಾಗಲಿದೆ ಎಂದರು.ಬೆಂಗಳೂರಿನ ಎಂ.ಎಸ್.ಸಿ.(ಕಂಪ್ಯೂಟರ್ ಸೈನ್ಸ್) ಪ್ರಾಧ್ಯಾಪಕಿ ಎಂ.ಎಂ.ಅಮಲ್ಯಾಳ ಸನ್ಮಾನ ಸ್ವೀಕರಿ ಮಾತನಾಡಿ, ಮಾನವೀಯ ಮೌಲ್ಯಗುಣಗಳನ್ನು ಅಳವಡಿಸಿಕೊಂಡು ಕಲಿಸಿದ ಶಿಕ್ಷಕರನ್ನು ಹಾಗೂ ಮಾತಾಪಿತರನ್ನು ಹಿರಿಯರನ್ನು ಗೌರವಿಸುವಂತಹ ಕಾರ್ಯ ಮಾಡುತ್ತ ಸಾಧನೆಯ ಗುರಿ ತಲುಪಬೇಕೆಂಬುವುದು ಶಿಕ್ಷಣದ್ದಾಗಿದೆ ಎಂದರು. ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನವೆಂಬುವುದು ಬಂಗಾರದಂತಾಗಿದೆ. ಇದನ್ನು ಕಷ್ಟಪಟ್ಟು ಇಷ್ಟ ಪಟ್ಟು ಓದುವ ಜ್ಞಾನವನ್ನು ವೃದ್ಧಿಸಿಕೊಂಡು ಮುಂದಾಗಬೇಕು. ಲಾಲಬಹದ್ದೂರ ಶಾಸ್ತ್ರೀಜಿ, ಸರ್.ಎಂ.ವಿಶ್ವೇಶ್ವರಯ್ಯನವರ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಕಷ್ಟ ಪಟ್ಟು ಕಲಿತು ಸಾಧನೆಗೆ ಕಾರಣ ಹೇಗಾದರೆಂಬುವುದರ ಕುರಿತು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಪಿ.ಬಿ.ಭಂಟನೂರ, ವೀ.ವಿ.ಸಂಘದ ನಿರ್ದೇಶಕ ಸಿ.ಆರ್.ಕತ್ತಿ ಮಾತನಾಡಿದರು. ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಆದರ್ಶ ವಿಧ್ಯಾರ್ಥಿನಿಯರೆಂದು ಆಯ್ಕೆ ಮಾಡಿ ಗೌರವಿಸಲಾಯಿತು. ಶಿಕ್ಷಕಿ ಪ್ರೀತಿ ಪ್ರಾಸ್ತಾವಿಕ ಮಾತನಾಡಿದರು. ೧೦ನೇ ವರ್ಗದ ವಿಧ್ಯಾರ್ಥಿನಿಯರು ಶಾಲೆಗೆ ಕಟ್ಟಿಗೆಯಿಂದ ತಯಾರಿಸಲಾದಂತಹ ಸುಸರ್ಜಿತವಾದ ಮೈಕ್ ಟೇಬಲ್‌ನ್ನು ನೀಡಿದರು. ಶ್ರೀಗಳಿಗೆ ಅತಿಥಿ ಮಹೋದಯರಿಗೆ ಸನ್ಮಾನಿಸಿ, ಗೌರವಿಸಲಾಯಿತು. ವೀ.ವಿ.ಸಂಘದ ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹಕಾರ್ಯದರ್ಶಿ ಕಾಶಿನಾಥ ಮುರಾಳ, ನಿರ್ದೇಶಕರಾದ ಕೆ.ಸಿ.ಸಜ್ಜನ, ಎಂ.ಆರ್.ಕತ್ತಿ, ರಮೇಶ ಸಾಲಂಕಿ, ಎಂ.ಜಿ.ಕತ್ತಿ, ಶಂಕರಗೌಡ ಪಾಟೀಲ ಹಾಗೂ ಎಂ.ಬಿ.ಸರಶೆಟ್ಟಿ, ಆರ್.ಸಿ.ಪಾಟೀಲ ಹಾಗೂ ಶಿಕ್ಷಕರಾದ ಪಿ.ಬಿ.ದೇಶಮುಖ, ಎಂ.ಆರ್.ಕಾಂಬಳೆ, ಎಂ.ಆರ್.ಕುಲಕರ್ಣಿ, ಪಿ.ಪಿ.ಬಸರಕೋಡ, ವಿದ್ಯಾರ್ಥಿ ಪ್ರತಿನಿಧಿ ಲಕ್ಷ್ಮೀ ದೊಡಮನಿ ಉಪಸ್ಥಿತರಿದ್ದರು. ಶಿಕ್ಷಕ ವೈ.ಎಸ್.ನಾದ ಸ್ವಾಗತಿಸಿದರು. ಎಂ.ಐ.ಕೇಸರಿ ನಿರೂಪಿಸಿ, ವಂದಿಸಿದರು. ಸದಾ ಮಕ್ಕಳಲ್ಲಿ ನಗು ಇರಬೇಕು. ಒಳ್ಳೆಯ ಸಾಧಕನಾಗಿ ಸಾಧನೆ ಮಾಡಬೇಕೆಂಬುವುದೇ ಗುರುಗಳದ್ದಾಗಿದೇ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯಬೇಕು. ವಿದ್ಯಾವಂತರಾಗಿ ಬೆಳಗಬೇಕೆನ್ನುವ ಆಸೆ ಗುರು ಪರಂಪರೆಯದ್ದಾಗಿದೆ ಎಂದು ಸರ್ಕಾರಿ ಪ್ರೌಢಶಾಲೆಯ ಮಡಿಕೇಶ್ವರದ ಶಿಕ್ಷಕ ಬಿ.ಎಸ್.ಹಂಚಲಿ ಹೇಳಿದರು.

Share this article