ದೇಶ ಮತ್ತು ನಾಡಿನ ಅಭಿವೃದ್ಧಿ ಯುವತಿಯರ ಮೇಲಿದೆ-ಹೆಗಡಾಳ

KannadaprabhaNewsNetwork | Published : Jul 1, 2024 1:55 AM

ಸಾರಾಂಶ

ದೇಶ ಮತ್ತು ನಾಡಿನ ಅಭಿವೃದ್ಧಿ ಯುವತಿಯರ ಮೇಲಿದ್ದು ವ್ಯಕ್ತಿತ್ವ ವಿಕಾಸದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಪ್ರಾ ಡಾ. ಆರ್. ವಿ. ಹೆಗಡಾಳ ಹೇಳಿದರು.

ರಾಣಿಬೆನ್ನೂರು: ದೇಶ ಮತ್ತು ನಾಡಿನ ಅಭಿವೃದ್ಧಿ ಯುವತಿಯರ ಮೇಲಿದ್ದು ವ್ಯಕ್ತಿತ್ವ ವಿಕಾಸದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಪ್ರಾ ಡಾ. ಆರ್. ವಿ. ಹೆಗಡಾಳ ಹೇಳಿದರು.ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ರಾಣಿಬೆನ್ನೂರಿನ ಎಸ್‌ಜೆಎಂವ್ಹಿ ಮಹಿಳಾ ಪದವಿ ಮಹಾವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು. ಗ್ರಾಮ ಸಂಸ್ಕೃತಿ ಮತ್ತು ಪರಂಪರೆ ಅರಿತು ಅರ್ಥಮಾಡಿಕೊಳ್ಳಲು ಗ್ರಾಮ್ಯ ಜೀವನದ ವಾಸ್ತವಿಕ ಸ್ಥಿತಿಯನ್ನು, ತಿಳಿದುಕೊಳ್ಳಲು, ಶಿಬಿರಗಳು ಅಗತ್ಯವಿದೆ, ಗ್ರಾಮದ ನಾಗರಿಕರು, ತಮ್ಮ ಮಡಿಲಿಗೆ ಹಾಕಿರುವ ಮಕ್ಕಳ ಸೇವೆಯನ್ನು ಪಡೆಯಲು ಮುಂದಾಗಬೇಕು ಎಂದರು.ಲಿಂಗದಹಳ್ಳಿ ಶ್ರೀಮಠದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಆಧುನಿಕ ಬದುಕಿನಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳದೆ ಭಾರತೀಯ ಸಂಸ್ಕಾರ ಮತ್ತು ಪರಂಪರೆಯನ್ನು ಅಳವಡಿಸಿಕೊಂಡು ಬದುಕನ್ನು ಪರಿಪೂರ್ಣ ಭದ್ರತೆಯನ್ನು ಹೊಂದಬೇಕಾಗಿದೆ ಎಂದರು. ಬ್ಯಾಡಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾ. ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಸಮಾಜ ಸೇವಾ ಸಂಕಲ್ಪವನ್ನು ಹೊತ್ತು ಬಂದಿರುವ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಗೆ ಗ್ರಾಮಸ್ಥರ ಸಹಕಾರ ಬಹು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಶಿಬಿರದಲ್ಲಿ ಸೇವೆಯ ಮೂಲ ಉದ್ದೇಶವನ್ನು ತಿಳಿದುಕೊಂಡು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ಮುಂದಾಗಬೇಕು ಎಂದರು. ಅಭಿರುಚಿ ಜನಪದ ಕಲಾಸಂಸ್ಥೆಯ ಕೆ.ಎಸ್. ನಾಗರಾಜ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಕಮಲಮ್ಮ ಎಮ್ಮೇರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಸಿದ್ದಲಿಂಗಪ್ಪ ಕೋಳೇರ, ಎನ್ನೆಸ್ಸೆಸ್ ಯೋಜನಾಧಿಕಾರಿ ಕೆ. ಶಿವರಾಜಕುಮಾರ, ತಿಪ್ಪಮ್ಮ ಕೆಂಚಳ್ಳೇರ, ಜಮಾಲಸಾಬ ಸವಣೂರ, ಶಂಭುಲಿಂಗಪ್ಪ ದೊಡ್ಡಗೌಡ್ರು, ಬಸವಣ್ಣಪ್ಪ ಚೆನ್ನಗೌಡ್ರ, ಶಿವನಗೌಡ ಲಕ್ಷೇಟ್ಟಿ, ಸತೀಶ್ ಮಾಗನೂರ, ಬಿ.ಆರ್. ಡಮ್ಮಳ್ಳಿ, ವಿ.ಎಂ. ಪಾಟೀಲ, ಡಾ.ಎಂ. ರಾಜಶೇಖರಪ್ಪ, ಸಿ. ತಿಪ್ಪೇಸ್ವಾಮಿ, ಪ್ರವೀಣ ಕುರುವತ್ತೇರ ಬಸವರಾಜ ದೊಡ್ಮನಿ, ಶ್ರೀಕಾಂತ ಸುತಾರ ನಾಗರತ್ನ ಪುಗಟಿ, ಗಂಗಮ್ಮ ಅಗಸನಹಳ್ಳಿ, ಪೂರ್ಣಿಮಾ ಸಂಘದ, ಸೌಂದರ್ಯ ಬಗಾಡೆ, ರಾಜಶ್ರೀ ಭಂಡಾರಿ, ಗಂಗಮ್ಮ ಅಗಸನಹಳ್ಳಿ ಹಾಗೂ ಕಾಲೇಜಿನ ಸಿಬ್ಬಂದಿ, ಗ್ರಾಮದ ಮುಖಂಡರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article