ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಸ್ಥಳೀಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 55 ಸೂಕ್ಷ್ಮ, 2 ಅತಿ ಸೂಕ್ಷ್ಮ ಸೇರಿದಂತೆ ಒಟ್ಟು 266 ಮತಗಟ್ಟೆಗಳಿವೆ. ಆ ಪೈಕಿ 183 ಮತಗಟ್ಟೆಗಳಿಗೆ ಕ್ಯಾಮೆರಾ ಅಳವಡಿಸಲಾಗಿದೆ. 1 ಯುವ ಮತದಾರರ ಮತಗಟ್ಟೆ, 5 ಸಖಿ ಮತಗಟ್ಟೆಗಳು, 1 ವಿಶೇಷ ಚೇತನರ ಮತಗಟ್ಟೆ, 1 ಥೀಮ್ ಬೂತ್ (ಗಂಗಾಜಲ ತಾಂಡಾ) ಹಾಗೂ ಕರೂರಿನಲ್ಲಿ ಒಂದೇ ಕಡೆ 7 ಮತಗಟ್ಟೆಗಳಿರುವುದು ಸೇರಿದಂತೆ 8 ವಿಶೇಷ ಮತಗಟ್ಟೆಗಳಿವೆ. 266 ಮತಗಟ್ಟೆಗಳಲ್ಲಿ ಪ್ರತಿಯೊಂದರಲ್ಲಿಯೂ ತಲಾ ಒಬ್ಬರು ಪಿಆರ್‌ಒ, ಒಬ್ಬರು ಎಪಿಆರ್‌ಒ ಹಾಗೂ ಇಬ್ಬರು ಪಿಒ ಸೇರಿದಂತೆ ಒಟ್ಟು 1152 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
2 ಡಿವೈಎಸ್‌ಪಿ, 5 ಸಿಪಿಐ, 8 ಪಿಎಸ್‌ಐ, 15 ಎಎಸ್‌ಐ, 65 ಎಚ್‌ಸಿ, 172 ಪೇದೆ, 174 ಹೋಮಗಾರ್ಡ್ಸ್, ಸೆಂಟ್ರಲ್ ಪ್ಯಾರಾಮಿಲಿಟರಿ ಫೋರ್ಸ್, ಒಂದು ಕೆಎಸ್‌ಆರ್‌ಪಿ ಹಾಗೂ 3 ಡಿಆರ್ ವ್ಯಾನ್ ಸೇರಿ 66 ಜನರನ್ನು ನಿಯೋಜನೆ ಮಾಡಲಾಗಿದೆ.ಚುನಾವಣಾ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಿಬರುವ ಸಲುವಾಗಿ 37 ಬಸ್, 11 ಕ್ರುಷರ್ ನಿಯೋಜಿಸಲಾಗಿದೆ. 23 ಸೆಕ್ಟರ್ ಅಧಿಕಾರಿಗಳ ಸಂಚಾರಿ ದಳ ಎಲ್ಲ ಮತಗಟ್ಟೆಗಳಿಗೂ ಸಂಚರಿಸಿ ಚುನಾವಣೆ ಉಸ್ತುವಾರಿ ನೋಡಿಕೊಳ್ಳಲಿದೆ.
ಈ ಬಾರಿ ಬಿಸಿಲಿನ ಪ್ರಮಾಣ ಅಧಿಕವಿರುವ ಕಾರಣ ಪ್ರತಿಯೊಂದು ಮತಗಟ್ಟೆಗೂ 20 ಲೀ. ನೀರಿನ ಖಾಲಿ ಕ್ಯಾನ್ ಕೂಡ ಮತಗಟ್ಟೆ ಪರಿಕರಗಳ ಜತೆ ವಿತರಣೆ ಮಾಡಿದ್ದು ವಿಶೇಷವಾಗಿತ್ತು.