ಸಹಕಾರಿ ಕ್ಷೇತ್ರದ ಸೌಲಭ್ಯ ಶೋಷಿತರಿಗೆ ಇನ್ನೂ ಮರೀಚಿಕೆ

KannadaprabhaNewsNetwork |  
Published : Aug 20, 2024, 12:45 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡಿರುವ ಸಹಕಾರಿ ಕ್ಷೇತ್ರವನ್ನು ದಲಿತರು ಇನ್ನು ಪ್ರವೇಶಿಸಿಯೇ ಇಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿನ ಸೌಲಭ್ಯ, ಆರ್ಥಿಕ ಅವಕಾಶಗಳು ಶೋಷಿತ ಸಮುದಾಯಗಳಿಗೆ ಇನ್ನೂ ಮರಿಚಿಕೆಯಾಗಿವೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ತಾತ್ವಿಕ ನೆಲೆಯಲ್ಲಿ ರೂಪುಗೊಂಡಿರುವ ಸಹಕಾರಿ ಕ್ಷೇತ್ರವನ್ನು ದಲಿತರು ಇನ್ನು ಪ್ರವೇಶಿಸಿಯೇ ಇಲ್ಲ. ಹಾಗಾಗಿ ಆ ಕ್ಷೇತ್ರದಲ್ಲಿನ ಸೌಲಭ್ಯ, ಆರ್ಥಿಕ ಅವಕಾಶಗಳು ಶೋಷಿತ ಸಮುದಾಯಗಳಿಗೆ ಇನ್ನೂ ಮರಿಚಿಕೆಯಾಗಿವೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ ಬಿ.ಪಿ. ತಿಪ್ಪೇಸ್ವಾಮಿ ಹೇಳಿದರು.ಚಿತ್ರದುರ್ಗ ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ಚಿತ್ರದುರ್ಗ ಜಿಲ್ಲಾ ಪರಿಶಿಷ್ಟ ಜಾತಿ, ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಸ್ಥಾಪನೆ ಕುರಿತ ಚರ್ಚಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ದಲಿತ ಚಳುವಳಿ ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರಗಳಿಗೆ ಹೊತ್ತು ಕೊಟ್ಟಂತೆ ದಲಿತರ ಆರ್ಥಿಕ ಸ್ವಾವಲಂಬನೆ ಕಡೆ ಹೆಚ್ಚು ಗಮನಿಸಲಿಲ್ಲ. ಇಂದು ಕ್ರಿಯೆಗೆ ಪ್ರತಿಕ್ರಿಯೆ ಹೋರಾಟಗಳಿಗಿಂತ ದಲಿತ ಸಮಾಜ ಆರ್ಥಿಕ ಚಟುವಟಿಕೆಗಳ ನೆಲೆಗಳಲ್ಲಿ ಸಕ್ರಿಯಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಮತ್ತು ಕೌಶಲ್ಯದ ಕೊರತೆಯಿಂದ ದಲಿತ ಸಮಾಜ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳಲಾಗುತ್ತಿಲ್ಲ. ಸರ್ಕಾರದಲ್ಲಿನ ಕೆಲವೊಂದು ಅವಕಾಶಗಳು ಸ್ಥಿತಿವಂತರ ಪಾಲಾಗುತ್ತಿವೆ. ಪರಿಶಿಷ್ಟ ಜಾತಿ ವರ್ಗದ ವಿದ್ಯಾವಂತರೇನಾದರೂ ಹಠಕ್ಕೆ ಬಿದ್ದು ದೊಡ್ಡ ದೊಡ್ಡ ಉದ್ಯಮ ಆರಂಭಿಸಿ ನೆಲಕಚ್ಚಿದರೆ ಪರಿಸ್ಥಿತಿ ಭಯಾನಕವಾಗಿರುತ್ತದೆ. ಅದಕ್ಕಾಗಿ ಸಹಕಾರಿ ಕ್ಷೇತ್ರದಲ್ಲಿ ಎಲ್ಲರಿಗೂ ನಾನು, ನನಗಾಗಿ ಎಲ್ಲರೂ ಎಂಬ ತತ್ವದಡಿ ಕಡಿಮೆ ಬಂಡವಾಳದಲ್ಲಿ ಒಟ್ಟಾಗಿ ದುಡಿಯುವ ಮೂಲಕ ಆರ್ಥಿಕ ಸ್ಥಿತಿ ಸುಧಾರಿಕೊಳ್ಳಬೇಕು ಎಂದರು.ಕರ್ನಾಟಕದಲ್ಲಿ ಪ್ರಥಮ ಬಾರಿಗೆ ದಲಿತರು ಸಹಕಾರಿ ಕ್ಷೇತ್ರದಲ್ಲಿ ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟವನ್ನು ರಚಿಸಿಕೊಳ್ಳುತ್ತಿರುವುದು ಐತಿಹಾಸಿಕ ಕ್ಷಣ. ಈ ಒಕ್ಕೂಟದಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಹಳ್ಳಿಗಳ ಪರಿಶಿಷ್ಟ ಜಾತಿ, ವರ್ಗದ ಅರ್ಹ ನಿರುದ್ಯೋಗಿಗಳು ಸದಸ್ಯತ್ವ ಪಡೆಯಲು ಅರ್ಹರಾಗಿರುತ್ತಾರೆ.ಅಂಬೇಡ್ಕರ್ ಅನುಯಾಯಿಗಳಾದ ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಹಾಗೂ ಪ್ರಿನ್ಸಿಪಲ್ ಸೆಕ್ರೆಟರಿ ಮಣಿವಣ್ಣನ್ ಅವರು ಚಿತ್ರದುರ್ಗ ಜಿಲ್ಲೆಯ ಈ ಒಕ್ಕೂಟವನ್ನು ಒಂದು ಪೈಲೆಟ್ ಪ್ರಾಜೆಕ್ಟ್ ಆಗಿ ಪರಿಗಣಿಸಿ ಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ ಅರ್ಹ ಸದಸ್ಯರುಗಳಿಗೆ ಹಸುಗಳನ್ನು ಕೊಡಿಸಿ, ಸಾಕಾಣಿಕೆಗೆ ಸಹಾಯ ಮಾಡುವ ಮೂಲಕ ರಾಜ್ಯಕ್ಕೆ ಒಂದು ಮಾದರಿ ಕಾರ್ಯಕ್ರಮವಾಗಿಸಿ ದಲಿತರ ಆರ್ಥಿಕ ಪುನಶ್ಚೇತನ ಮಾಡಬೇಕೆಂದು ಮನವಿ ಮಾಡಲಾಗಿದೆ ಎಂದರು.ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್, ಬಿಮಾ ಆರ್ಮಿ ಅಧ್ಯಕ್ಷ ಅವಿನಾಶ್ , ಬಿಎಸ್‍ಐ ಚೆನ್ನಗಿರಿ ಅಧ್ಯಕ್ಷ ನೀತಿಗೆರೆ ಮಂಜಪ್ಪ, ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಚಳ್ಳಕೆರೆ ಅಧ್ಯಕ್ಷ ನನ್ನಿವಾಳ ರವಿ, ಉಪನ್ಯಾಸಕ ಎಲ್ ನಾಗೇಂದ್ರಪ್ಪ, ಬುರುಜನರೊಪ್ಪ ಹನುಮಂತಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ತಣಿಗೆಹಳ್ಳಿ ರುದ್ರಪ್ಪ, ಶಿಕ್ಷಕಿ ಗಿರಿಜಾ ಮಾನಸ, ಉಷಾ ಶಾಂತಮ್ಮ, ಬನ್ನಿಕೊಡು ರಮೇಶ್ ಮುಂತಾದವರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...