ಮಯೂರವಾಹನದಲ್ಲಿ ಕೌಮಾರಿಯಾಗಿ ಕಣ್ತುಂಬಿದ ಅಧಿದೇವತೆ

KannadaprabhaNewsNetwork |  
Published : Sep 26, 2025, 01:00 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ರಾಜ್ಯ,ದೇಶದ ನಾನಾ ಕಡೆಗಳ ಜನರನ್ನು ಆಕರ್ಷಿಸುತ್ತಿದ್ದು ಶ್ರೀ ಶಾರದಾಂಬೆ ದರ್ಶನ, ರಾಜಬೀದಿ ಉತ್ಸವ, ದಸರೆಯ ದರ್ಬಾರ್ ಸೇರಿದಂತೆ ಎಲ್ಲೆಡೆ ಜನಸ್ತೋಮವೇ ಕಂಡು ಬರುತ್ತಿದೆ.

- ಶ್ರೀ ಶಾರದೆಗೆ ಉಭಯಶ್ರೀಗಳಿಂದ ವಿಶೇಷ ಪೂಜೆ.

ಕನ್ನಡಪ್ರಬವರ್ತೆ,ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ಉತ್ಸವ ದಿನದಿಂದ ದಿನಕ್ಕೆ ರಾಜ್ಯ,ದೇಶದ ನಾನಾ ಕಡೆಗಳ ಜನರನ್ನು ಆಕರ್ಷಿಸುತ್ತಿದ್ದು ಶ್ರೀ ಶಾರದಾಂಬೆ ದರ್ಶನ, ರಾಜಬೀದಿ ಉತ್ಸವ, ದಸರೆಯ ದರ್ಬಾರ್ ಸೇರಿದಂತೆ ಎಲ್ಲೆಡೆ ಜನಸ್ತೋಮವೇ ಕಂಡು ಬರುತ್ತಿದೆ.

ನವರಾತ್ರಿ ಆರಂಭದಿಂದ ಬ್ರಾಹ್ಮಿ, ಮಾಹೇಶ್ವರಿಯಾಗಿ ಭಕ್ತರನ್ನು ಅನುಗ್ರಹಿಸಿದ ಶಾರದೆ ನಾಲ್ಕನೆ ದಿನವಾದ ಗುರುವಾರ ಮಯೂರವಾಹನವೇರಿ ಕೌಮಾರಿ ಅಲಂಕಾರದಲ್ಲಿ ಕಂಗೊಳಿಸಿದಳು. ಕೈಯಲ್ಲಿ ಶಸ್ತ್ರ, ಆಯುಧಗಳನ್ನು ಧರಿಸಿ ನವಿಲನ್ನೇರಿ ಕುಮಾರ ಸ್ವಾಮಿಯಾದ ಶಾರದೆಯ ಅಲಂಕಾರ ನಯನ ಮನೋಹರವಾಗಿತ್ತು.

ಬೆಳಿಗ್ಗೆ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಶಾರದೆಗೆ ನವರಾತ್ರಿ ವಿಶೇಷ ಪೂಜೆ ಸಹಿತ ವಿವಿಧ ಧಾರ್ಮಿಕ ಕ್ರಿಯಾ ವಿಧಾನಗಳು,ಮಹಾಮಂಗಳಾರತಿ ನೆರವೇರಿಸಿದರು.ಶ್ರೀ ಮಠದ ಆವರಣದಲ್ಲಿರುವ ಶ್ರೀ ಶಂಕರಭಗವತ್ಪಾದಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ವಿದ್ಯಾಶಂಕರ,ಶ್ರೀ ಸುಬ್ರಮಣ್ಯ ದೇವಾಲಯಗಳಲ್ಲಿ ನವರಾತ್ರಿಯ ವಿಶೇಷ ಪೂಜೆ ನೆರವೇರಿತು.

ನವರಾತ್ರಿಯ ಪ್ರತಿದಿನ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ, ನಾಲ್ಕುವೇದಗಳ ಪಾರಾಯಣ, ಮಂತ್ರಪಠಣ, ಸೂತ ಸಂಹಿತೆ,ಭುವನೇಶ್ವರಿ ಜಪ,ಚಂದ್ರಮೌಳೀಶ್ವರ ಸ್ವಾಮಿ ಶತರುದ್ರಾಭಿಷೇಕ, ಪ್ರತಿದಿನ ದಸರೆಯ ದರ್ಬಾರ್ ನಡೆಯುತ್ತಿದೆ.ಶ್ರೀ ಮಠದ ಸಂಪ್ರದಾಯದಂತೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಶಾರದಾಂಬಾ ದೇವಾಲಯ ಪ್ರವೇಶಿಸಿದ ನಂತರ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶ್ರೀ ಶಾರದಾಂಬೆ ಮೂರ್ತಿಯನ್ನು ಸ್ವರ್ಣರಥದಲ್ಲಿ ಕುಳ್ಳಿರಿಸಿ ದೇಗುಲದ ಒಳಪ್ರಾಂಗಣದಲ್ಲಿ ವೇದ ಘೋಷಗಳೊಂದಿಗೆ ಮೂರುಸುತ್ತು ಪ್ರದಕ್ಷಿಣಿ ತರಲಾಯಿತು.

ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಅಭಿಮುಖವಾಗಿ ಇರಿಸಿದ್ದ ಸಿಂಹಾಸನದಲ್ಲಿ ಯತಿಗಳು ಆಸೀನರಾಗಿ ದರ್ಬಾರ್ ನಡೆಸಿದರು. ಈ ಸಂದರ್ಭದಲ್ಲಿ ವೇದಗಳ ಪಾರಾಯಣ,ಪಂಚಾಂಗ ಶ್ರವಣ,ಸಂಗೀತ,ಸರ್ವವಾದ್ಯ ಸೇವೆ ನೆರವೇರಿತು.ದೇವಿಗೆ ಮಹಾಮಂಗಳಾರತಿ ನೆರವೇರಿತು.

ರಾಜಬೀದಿ ಉತ್ಸವದಲ್ಲಿ ವಿದ್ಯಾರಣ್ಯಪುರ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ವಿವಿಧ ಭಜನಾ ತಂಡಗಳು,ವಾದ್ಯ ಮೇಳ ಪಾಲ್ಗೊಂಡು ಭಜನೆ,ವಿಪ್ರೋತ್ತಮರ ವೇದಘೋಷಗಳು, ಭಕ್ತರ ಜೈಕಾರ,ವಿವಿಧ ಸ್ತಬ್ದಚಿತ್ರಗಳು ರಾಜಬೀದಿ ಉತ್ಸವದ ಮೆರವಣಿಗೆಗೆ ವಿಶೇಷ ಮೆರಗು ನೀಡಿತು. ಶ್ರೀ ಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ನವರಾತ್ರಿ ಸಾಂಸ್ಕೃತಿಕ ಮಹೋತ್ಸವದಲ್ಲಿ ಚೆನೈನ ವಿದುಷಿ ಭುವನೇಶ್ವರಿ ಹಾಗೂ ಕೃತಿಗಾ ತಂಡದವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಿತು.

ಶುಕ್ರವಾರ ಶಾರದೆಗೆ ವೈಷ್ಣವಿಯಲಂಕಾರ ನಡೆಯಲಿದೆ.ರಾಜಬೀದಿ ಉತ್ಸವದಲ್ಲಿ ಧರೆಕೊಪ್ಪ ಪಂಚಾಯಿತಿ ವ್ಯಾಪ್ತಿಯ ಭಕ್ತರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಮಹೋತ್ಸವದಲ್ಲಿ ವಿದ್ವಾನ್ ಆಯಿಕುಡಿ ಕುಮಾರ್ ಮತ್ತು ತಂಡದವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ.

25 ಶ್ರೀ ಚಿತ್ರ 1-

ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದಲ್ಲಿ ಗುರುವಾರ ಶಾರದೆಗೆ ಕೌಮಾರಿ ಅಲಂಕಾರ ಮಾಡಲಾಗಿತ್ತು.

25 ಶ್ರೀ ಚಿತ್ರ 2-ಶೃಂಗೇರಿ ಶ್ರೀ ಮಠದ ಪ್ರವಚನ ಮಂದಿರದಲ್ಲಿ ನವರಾತ್ರಿಯ ಸಾಂಸ್ಕ್ರತಿಕ ಮಹೋತ್ಸವದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ