ಕನ್ನಡನಾಡಿನ ಹಿತ ಕಾಪಾಡಲು ಸರ್ಕಾರ ಕಂಕಣಬದ್ಧ

KannadaprabhaNewsNetwork |  
Published : Jul 09, 2024, 12:49 AM IST
ಕನ್ನಡ ರಥಯಾತ್ರೆಯು ಚನ್ನಗಿರಿ ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆಯೇ ಪಟ್ಟಣದ ಪ್ರವೇಶ ಧ್ವಾರದಲ್ಲಿರುವ ಭುವನೇಶ್ವರಿ ದೇವಾಲಯದ ಬಳಿ ರಥದಲ್ಲಿದ್ದ ಭುವನೇಶ್ವರಿ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬರಮಾಡಿಕೊಂಡ ಶಾಸಕ ಬಸವರಾಜು ವಿ.ಶಿವಗಂಗಾ, ತಹಶೀಲ್ದಾರ್ ಎರ್ರಿಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದಾರೆ | Kannada Prabha

ಸಾರಾಂಶ

ಈ ಹಿಂದೆ ಕನ್ನಡನಾಡಿಗೆ ಇದ್ದ ಮೈಸೂರು ರಾಜ್ಯ ಎಂಬ ಹೆಸರನ್ನು ತೆಗೆದು ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳು ಪೂರೈಸಿವೆ. ಈ ಹಿನ್ನೆಲೆ ನಮ್ಮ ಸರ್ಕಾರ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ " ಎಂಬ ಘೋಷವಾಕ್ಯ ಒಳಗೊಂಡ ಕನ್ನಡ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಚಾಲನೆ ನೀಡಿದೆ. ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಈ ರಥಯಾತ್ರೆ ಚನ್ನಗಿರಿಗೆ ಬಂದಿರುವುದು ನಮ್ಮಗಳ ಪುಣ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಕರ್ನಾಟಕ ಸಂಭ್ರಮ-50 ರಥಯಾತ್ರೆಗೆ ಸ್ವಾಗತಿಸಿ ಶಾಸಕ ಬಸವರಾಜು - - -

ಕನ್ನಡಪ್ರಭ ವಾರ್ತೆ, ಚನ್ನಗಿರಿ

ಈ ಹಿಂದೆ ಕನ್ನಡನಾಡಿಗೆ ಇದ್ದ ಮೈಸೂರು ರಾಜ್ಯ ಎಂಬ ಹೆಸರನ್ನು ತೆಗೆದು ಕರ್ನಾಟಕ ಎಂದು ನಾಮಕರಣವಾಗಿ ಇಂದಿಗೆ 50 ವರ್ಷಗಳು ಪೂರೈಸಿವೆ. ಈ ಹಿನ್ನೆಲೆ ನಮ್ಮ ಸರ್ಕಾರ "ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ " ಎಂಬ ಘೋಷವಾಕ್ಯ ಒಳಗೊಂಡ ಕನ್ನಡ ರಥಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಲು ಚಾಲನೆ ನೀಡಿದೆ. ಕನ್ನಡ ನಾಡಿನ ಹಿರಿಮೆಯನ್ನು ಸಾರುವ ಈ ರಥಯಾತ್ರೆ ಚನ್ನಗಿರಿಗೆ ಬಂದಿರುವುದು ನಮ್ಮಗಳ ಪುಣ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ಸೋಮವಾರ ಪಟ್ಟಣಕ್ಕೆ ಕರ್ನಾಟಕ ಸಂಭ್ರಮ-50 ಕನ್ನಡ ರಥಯಾತ್ರೆ ಆಗಮಿಸಿದ್ದು, ಪಟ್ಟಣದ ಪ್ರವೇಶ ದ್ವಾರದ ಭುವನೇಶ್ವರಿ ದೇವಾಲಯದ ಬಳಿ ರಥದಲ್ಲಿದ್ದ ಭುವನೇಶ್ವರಿ ದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಾಗತಿಸಲಾಯಿತು. ಈ ಸಂದರ್ಭ ಶಾಸಕರು ಮಾತನಾಡಿದರು.

ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆಯು ಸಮರ್ಪಕವಾಗಿ ಬಳಸದೇ ಕನ್ನಡನಾಡಿನಲ್ಲಿಯೇ ಸೊರಗುತ್ತಿದೆ. ಈ ನಾಡಿನ ಪ್ರತಿಯೊಬ್ಬರಲ್ಲಿಯೋ ಕನ್ನಡ ಪ್ರೇಮವನ್ನು ಬೆಳೆಸುವ ಸಲುವಾಗಿ ನಮ್ಮ ಸರ್ಕಾರ ಕರ್ನಾಟಕ ಸಂಭ್ರಮ-50 ರಥಯಾತ್ರೆ ಕೈಗೊಂಡಿದೆ ಎಂದರು.

ತಹಸೀಲ್ದಾರ್ ಎರ್ರಿಸ್ವಾಮಿ ಮಾತನಾಡಿ, ಕನ್ನಡನಾಡಿಗೆ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿ, ಇಂದಿಗೆ 50 ವರ್ಷಗಳು ಕಳೆದಿವೆ. ಇದರ ಸವಿನೆನಪಿಗಾಗಿ ನಾಡಿನ ಉದ್ದಗಲಕ್ಕೂ ಈ ಕನ್ನಡ ರಥಯಾತ್ರೆಯು ಸಂಚರಿಸುತ್ತಿದೆ. ಈ ರಥಯಾತ್ರೆಯು ಚನ್ನಗಿರಿ ಪಟ್ಟಣಕ್ಕೆ ಬಂದಾಗ ತಾಲೂಕು ಆಡಳಿತ ವತಿಯಿಂದ ವಿಜೃಂಭಣೆಯಿಂದ ಬರಮಾಡಿಕೊಳ್ಳಲಾಗುತ್ತಿದೆ ಎಂದರು.

ರಥಯಾತ್ರೆಗೆ ಕಲಾತಂಡಗಳು ಮೆರಗು ನೀಡಿದವು. ಅನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥಯಾತ್ರೆ ಸಂಚರಿಸಿತು. ಈ ಸಂದರ್ಭ ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ಪ, ಸಮಾಜ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ವಲಯ ಅರಣ್ಯಾಧಿಕಾರಿ ಮಧುಸೂದನ್‌, ಆಹಾರ ಇಲಾಖೆಯ ಶಿರಸ್ತೇದಾರ್ ಜಯರಾಂ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಶೋಕ್, ಡಿವೈಎಸ್‌ಪಿ ರುದ್ರಪ್ಪ ಉಜ್ಜೀನಕೊಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅರುಣ್, ತಾಲೂಕು ಕ.ಸಾ.ಪ. ಅಧ್ಯಕ್ಷ ಎಲ್.ಜಿ. ಮಧುಕುಮಾರ್, ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರಾದ ಜಿ.ಚಿನ್ನಸ್ವಾಮಿ, ಪುರಸಭಾ ಸದಸ್ಯ ಜಿ.ನಿಂಗಪ್ಪ, ಬಾಗಜ್ಜಿ ಮಂಜಣ್ಣ, ಕೆ.ವಿ.ಕೃಷ್ಣಮೂರ್ತಿ, ಎಂ.ಅಣ್ಣೋಜಿ ರಾವ್ ಪವಾರ್, ಧರಣೇಂದ್ರ, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

- - - ಕೋಟ್‌ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕನ್ನಡನಾಡಿನ ಹಿತ ಕಾಪಾಡಲು ಕಂಕಣಬದ್ಧವಾಗಿದೆ. ಕನ್ನಡ ನಾಡಿನ ನೆಲ-ಜಲ-ಭಾಷೆಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡಿಗರಲ್ಲಿ ಮೊದಲು ಈ ನಾಡು ನಮ್ಮದು ಎಂಬ ಅಭಿಮಾನ ಬರಬೇಕಾಗಿದೆ

- ಬಸವರಾಜು ವಿ. ಶಿವಗಂಗಾ, ಶಾಸಕ - - -

-8ಕೆಸಿಎನ್‌ಜಿ1, 2:

ಕರ್ನಾಟಕ ಸಂಭ್ರಮ-50 ರಥಯಾತ್ರೆ ಚನ್ನಗಿರಿ ಪಟ್ಟಣ ಪ್ರವೇಶಿಸಿದ ಸಂದರ್ಭ ಶಾಸಕ ಬಸವರಾಜು ವಿ.ಶಿವಗಂಗಾ, ತಹಸೀಲ್ದಾರ್ ಎರ್ರಿಸ್ವಾಮಿ ರಥದಲ್ಲಿದ್ದ ಭುವನೇಶ್ವರಿ ದೇವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸ್ವಾಗತಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...