ಹಸಿರು ಕ್ರಾಂತಿಯಿಂದಾಗಿ ದೇಶದಲ್ಲಿ ಯಥೇಚ್ಛ ಆಹಾರ ಉತ್ಪಾದನೆ ಸಾಧ್ಯವಾಗಿದೆ-ವೀರಭದ್ರಸ್ವಾಮಿ

KannadaprabhaNewsNetwork |  
Published : Oct 04, 2025, 12:00 AM IST
ಫೋಟೋ : 30ಎಚ್‌ಎನ್‌ಎಲ್1ನಾಡದೇವಿಗೆ ಪೂಜೆ ಸಲ್ಲಿಸುವ ಮೂಲಕ ಕೃಷಿ ಗೋಷ್ಠಿಗೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಹಸಿರು ಕ್ರಾಂತಿಯಿಂದಾಗಿ ದೇಶದಲ್ಲಿ ಆಹಾರಕ್ಕಾಗಿ ಪರ ರಾಷ್ಟ್ರಗಳ ಅವಲಂಬನೆ ಇಲ್ಲದೆ ಯಥೇಚ್ಛ ಆಹಾರ ಉತ್ಪಾದನೆ ಸಾಧ್ಯವಾಗಿದೆ. ಬಹು ಬೆಳೆ ಪದ್ಧತಿಯ ಕೃಷಿ ಹಾಗೂ ತೋಟಗಾರಿಕೆಗೆ ಯಾಂತ್ರೀಕರಣ ಅಳವಡಿಸಿಕೊಂಡು ಲಾಭದಾಯಕ ಕೃಷಿಗೆ ರೈತರು ಮುಂದಾಗಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೀರಭದ್ರಸ್ವಾಮಿ ತಿಳಿಸಿದರು.

ಹಾನಗಲ್ಲ: ಹಸಿರು ಕ್ರಾಂತಿಯಿಂದಾಗಿ ದೇಶದಲ್ಲಿ ಆಹಾರಕ್ಕಾಗಿ ಪರ ರಾಷ್ಟ್ರಗಳ ಅವಲಂಬನೆ ಇಲ್ಲದೆ ಯಥೇಚ್ಛ ಆಹಾರ ಉತ್ಪಾದನೆ ಸಾಧ್ಯವಾಗಿದೆ. ಬಹು ಬೆಳೆ ಪದ್ಧತಿಯ ಕೃಷಿ ಹಾಗೂ ತೋಟಗಾರಿಕೆಗೆ ಯಾಂತ್ರೀಕರಣ ಅಳವಡಿಸಿಕೊಂಡು ಲಾಭದಾಯಕ ಕೃಷಿಗೆ ರೈತರು ಮುಂದಾಗಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ವೀರಭದ್ರಸ್ವಾಮಿ ತಿಳಿಸಿದರು.ಮಂಗಳವಾರ ಇಲ್ಲಿನ 88ನೇ ನಾಡಹಬ್ಬ ಉತ್ಸವದಲ್ಲಿ ನಡೆದ ಕೃಷಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರು ಕ್ರಾಂತಿ ದೇಶದ ಆಹಾರ ಭದ್ರತೆ ವಿಷಯದಲ್ಲಿ ಅತ್ಯಂತ ಮಹತ್ವಪೂರ್ಣ ಹಾಗೂ ಪರಿಣಾಮಕಾರಿಯಾದುದು. ಹಾನಗಲ್ಲ ತಾಲೂಕು ತೋಟಗಾರಿಕೆ ಬೆಳೆಗಳಿಗೆ ಉತ್ತಮ ವಾತಾವರಣದ ಹೊಂದಿದೆ. ಹಣ್ಣಿನ ಬೆಳೆಗಳು ಹಾಗೂ ಅಡಕೆ ಬೆಳೆಗೆ ಉತ್ತಮ ಫಸಲು ಮತ್ತು ಬೆಲೆ ಇದೆ. ಈ ತಾಲೂಕಿನಲ್ಲಿ 12 ಸಾವಿರ ಹೆಕ್ಟೇರ್ ಅಡಕೆ ಬೆಳೆ ಇದೆ. ಇನ್ನೂ ಇದು ಹೆಚ್ಚಾಗುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿ ಮತ್ತು ತೋಟಗಾರಿಕೆ ಅಭಿವೃದ್ಧಿಗಾಗಿ ಹಲವು ಸಹಾಯಧನ ಯೋಜನೆಗಳನ್ನು ರೂಪಿಸಿದೆ. ಇವುಗಳ ಸದ್ಬಳಕೆಗೆ ರೈತರು ಮುಂದಾಗಬೇಕು ಎಂದರು.ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಎಚ್.ಎಂ.ಸಂತೋಷ ಮಾತನಾಡಿ, ಕೃಷಿಯೊಂದಿಗೆ ಕೃಷಿಕರ ಉಪ ಕಸಬುಗಳಾದ ಕೋಳಿ, ಕುರಿ ಸಾಕಣೆಯೂ ರೈತರಿಗೆ ಲಾಭದಾಯಕ ಉದ್ಯಮ. ಇದರಿಂದ ಹೆಚ್ಚು ಆರ್ಥಿಕ ಲಾಭವೂ ಇದೆ. ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದಿಂದ ನಿರಂತರವಾಗಿ ಕೃಷಿಕರಿಗಾಗಿ ಹಲವು ಕೃಷಿ ಉಪಯೋಗಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದ್ದು ಇದರ ಉಪಯೋಗ ರೈತರಿಂದಾಗಬೇಕು. ಹನುಮನಮಟ್ಟಿ ಕೃಷಿ ಕೇಂದ್ರದಿಂದ ರೈತರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ರೋಗ, ಕೀಟ ಬಾಧೆಗೆ ಪರಿಹಾರವನ್ನು ಸೂಚಿಸಲಾಗುತ್ತಿದೆ ಎಂದರು.ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಎಲ್.ದೇಶಪಾಂಡೆ ಮಾತನಾಡಿ, ಹಾನಗಲ್ಲ ನಾಡಹಬ್ಬ ಸಾಹಿತ್ಯ ಸಂಸ್ಕೃತಿ ಸಂಗೀತದ ಜೊತೆಗೆ ಕೃಷಿ ಗೊಷ್ಠಿ, ಮಕ್ಕಳ ಗೋಷ್ಠಿ, ಮಹಿಳಾ ಗೋಷ್ಠಿಗಳ ಮೂಲಕವೂ ವಿಶೇಷವೆನಿಸಿದೆ. ಹಾನಗಲ್ಲ ನಾಡಹಬ್ಬ ಇಡೀ ರಾಜ್ಯದಲ್ಲಿ ಅತ್ಯುತ್ತಮ ಹೆಸರು ಮಾಡಿದೆ ಎಂದರು.ನಾಡಹಬ್ಬ ಉತ್ಸವ ಸಮತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆವಹಿಸಿದ್ದರು. ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ವೇದಿಕೆಯಲ್ಲಿದ್ದರು. ರುದ್ರಪ್ಪ ಹಣ್ಣಿ ಸ್ವಾಗತಿಸಿದರು. ಗಿರಿಶ ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ