ಮಕ್ಕಳಲ್ಲಿ ಕಡಿಮೆಯಾಗುತ್ತಿದೆ ಪುಸ್ತಕ ಓದುವ ಹವ್ಯಾಸ: ಶಾಸಕ ಜಗದೀಶ ಗುಡಗುಂಟಿ

KannadaprabhaNewsNetwork |  
Published : Aug 31, 2025, 02:00 AM IST
ಜಮಖಂಡಿ ನಗರದ ರಾನಡೆ ಸಾಂಸ್ಕೃತಿಕ ಭವನದಲ್ಲಿ ಕತೆಗಳ ಸಂಪುಟ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.  | Kannada Prabha

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಮಕ್ಕಳು ಪುಸ್ತಕಗಳನ್ನು ಓದುವುದು ತೀರಾ ವಿರಳವಾಗಿದೆ. ಮೊಬೈಲ್, ಆಧುನಿಕ ತಂತ್ರಜ್ಞಾನ, ಡಿಜಿಟಲ್ ಬಳಕೆಯಲ್ಲಿ ತೊಡಗಿ, ಮಕ್ಕಳು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರಸ್ತುತ ದಿನಗಳಲ್ಲಿ ಮಕ್ಕಳು ಪುಸ್ತಕಗಳನ್ನು ಓದುವುದು ತೀರಾ ವಿರಳವಾಗಿದೆ. ಮೊಬೈಲ್, ಆಧುನಿಕ ತಂತ್ರಜ್ಞಾನ, ಡಿಜಿಟಲ್ ಬಳಕೆಯಲ್ಲಿ ತೊಡಗಿ, ಮಕ್ಕಳು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು. ನಗರದ ಪಿ.ಬಿ. ಪದವಿ ಪೂರ್ವ ಕಾಲೇಜಿನ ಶ್ರೀ ಗುರುದೇವ ರಾನಡೆ ಭವನದಲ್ಲಿ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ, ಪುಷ್ಪಾತಾಯಿ ಪದವಿ ಪೂರ್ವ ಕಾಲೇಜು,ಶಾಲಾ ಶಿಕ್ಷಣ ಇಲಾಖೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ವಿಭಾಗ,ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಅಗ್ರಹಾರ ದಾಸರಹಳ್ಳಿ ಬೆಂಗಳೂರು ಇವರ ಸಹಯೋಗದಲ್ಲಿ ಶನಿವರ ಜರುಗಿದ ನಮ್ಮ ನಡೆ ಪುಸ್ತಕಗಳ ಕಡೆ ಎಂಬ ಧ್ಯೇಯದೊಂದಿಗೆ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಸಂಪಾದಕತ್ವದಲ್ಲಿ ದೇವುಡು ಹೇಳಿದ ಮಕ್ಕಳ ಕಥೆಗಳು ಸಂಪುಟಗಳ ಲೋಕಾರ್ಪಣೆ ಮತ್ತು ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಲಬುರ್ಗಿಯ ಮಕ್ಕಳ ಸಾಹಿತಿ ಎ.ಕೆ ರಾಮೇಶ್ವರ ಮಾತನಾಡಿ, ಕನ್ನಡ ಸಾಹಿತ್ಯ, ಸಾಹಿತ್ಯಗಾರರು, ಕನ್ನಡಿಗರು, ಶಾಲೆಗಳು, ಮಕ್ಕಳು ಇವತ್ತು ಕಸವಾಗುತ್ತಿದ್ದಾರೆ.ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಲು ದೇವುಡು ಅಂತಹ ಮಹಾನ್ ಸಾಹಿತಿಗಳ ಶ್ರಮ ಅತ್ತಿಮೂಲ್ಯವಾಗಿದೆ. ಇಂದಿನ ಆಧುನಿಕ ಸಾಹಿತಿಗಳು ಸಾವಿರಾರು ಪುಸ್ತಕಗಳನ್ನು ಬಿಡುಗಡೆಗೊಳಿಸುತ್ತಿದ್ದರೂ ಓದುವರ ಸಂಖ್ಯೆ ತೀರ ಕಡಿಮೆಯಾಗಿದೆ.ಅಂತವರಲ್ಲಿ ದೇವರು ತಮ್ಮ ವಿಶೇಷ ಬರವಣಿಗೆ ಸಾಹಿತ್ಯ ಶ್ರೀಮಂತಿಕೆಯಿಂದ ಜನಪ್ರಸಿದ್ಧಿ ಪಡೆದಿದ್ದಾರೆ ಎಂದರು.

ಮುತ್ತಿನ ಕಂತಿ ಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣಮಠದ ಗೌರಿಶಂಕರ ಸ್ವಾಮಿಗಳು, ನಿವೃತ್ತ ಕುಲಪತಿ ಮಲ್ಲೇಶಪುರಂ ಜಿ, ವೆಂಕಟೇಶ, ತಹಸೀಲ್ದಾರ ಅನೀಲ ಬಡಗೇರ, ಪ್ರಭು ಲಿಂಗೇಶ್ವರ ಶಿಕ್ಷಣ ಸಂಸ್ಥೇಯ ಕಾರ್ಯದರ್ಶಿ ಧರ್ಮಲಿಂಗಯ್ಯ ಗುಡಗುಂಟಿ, ಲೇಖಕ ಸಿದ್ದಣ್ಣ ಉತನಾಳ, ನಾಗಪ್ಪ ಸನದಿ, ಸಂಗಮೇಶ ವಿಜಾಪೂರ, ನರಸಿಂಹ ಕಲ್ಲೊಳಿ, ಶ್ರೀಧರ ಕಂಬಿ, ಇದ್ದರು. ಭೂಷಣ ಪತ್ತಾರ ಸ್ವಾಗತಿಸಿದರು. ಮಾಂತೇಶ ಆನಾಪೂರ ನಿರೂಪಿಸಿದರು. ಸರ್ವೋತ್ತಮ ಗಲಗಲಿ ವಂದಿಸಿದರು.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ