ಎರಡನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ

KannadaprabhaNewsNetwork | Published : Dec 8, 2024 1:15 AM

ಸಾರಾಂಶ

ಚನ್ನಮ್ಮನ ಕಿತ್ತೂರು ಪಟ್ಟಣದ ಬೆಲ್ಲದ ಓಣಿಯಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿ ಸ್ಥಳಾಂತರಿಸುವಂತೆ ನಡೆದಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಪಟ್ಟಣದ ಬೆಲ್ಲದ ಓಣಿಯಲ್ಲಿರುವ ಎಂಎಸ್ಐಎಲ್ ಮದ್ಯದಂಗಡಿ ಸ್ಥಳಾಂತರಿಸುವಂತೆ ನಡೆದಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿಲ್ಲವೆಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಮದ್ಯದಂಗಡಿ ಪಕ್ಕದಲ್ಲಿಯೇ ಮನೆಗಳಿವೆ. ಓಣಿಯಲ್ಲಿ ಈ ಮದ್ಯದಂಗಡಿಯಿಂದ ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು, ಮಕ್ಕಳು ಮುಜುಗರ ಪಡುವ ಸ್ಥಿತಿ ಇದೆ. ಮದ್ಯಸೇವಿಸಿದ ವ್ಯಸನಿಗಳು ಅಸಭ್ಯ ವರ್ತನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಸಮುಜಾಯಿಸಿ ನೀಡಲು ಮುಂದಾಗಿದ್ದು, ಇದಕ್ಕೆ ನಮ್ಮ ಸಹಮತವಿಲ್ಲ. ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳದ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ. ಮದ್ಯದಂಗಡಿ ಸ್ಥಳಾಂತರಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅಬಂಧಿಸಿದ ಅಧಿಕಾರಿಗಳಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ, ಸೋಮವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚಳಿಗಾಲದ ಅಧಿವೇಶನಕ್ಕೆ ಕಪ್ಪುಚುಕ್ಕೆ ಆಗಬಾರದಂತೆ ಶಾಂತಿಯುತ ಧರಣಿ ನಡೆಸುತ್ತಿದ್ದೇವೆ. ಇದಕ್ಕೆ ಬೆಲೆ ನೀಡದಿದ್ದಲ್ಲಿ ತೀವ್ರ ಬೆಲೆ ತೆರಬೇಕಾಗುತ್ತದೆ. ಅಧಿವೇಶನಕ್ಕೆ ಹಾಜರಾಗಲು ಆಗಮಿಸುವ ಸಚಿವರಿಗೂ ರಸ್ತೆ ತಡೆಯ ಬಿಸಿ ಮುಟ್ಟಿಸಲಾಗುವುದು. ಅಲ್ಲದೆ ಈ ಧರಣಿ ನಿರತ ಸ್ಥಳಕ್ಕೆ ಶಾಸಕರಾದಿಯಾಗಿ ಯಾರೊಬ್ಬ ಜನಪ್ರತಿನಿಧಿಗಳು ಭೇಟಿ ನೀಡಿಲ್ಲ ನಮ್ಮ ತೊಂದರೆ ಆಲಿಸಿಲ್ಲ ಎಂದು ಆರೋಪಿಸಿದರು.

ಸ್ಥಳೀಯ ನಿವಾಸಿಗಳಾದ ಪ್ರವೀಣ ಸರದಾರ, ಚನ್ನಯ್ಯ ಹಾಲಮಠ, ಜಾವಿದ ಅತ್ತಾರ, ರಾಜುಗೌಡ ಪಾಟೀಲ, ರುದ್ರಪ್ಪ ಸರದಾರ. ಮಲ್ಲನಗೌಡ ಪಾಟೀಲ, ಅನೀಲ ಹೊಸೂರ, ಉಮೇಶ ಕೊಟಗಿ, ಸುನೀಲ ಹೊಸೂರ, ಈಶ್ವರ ಹಾಲಮಠ, ಅಜ್ಜಯ್ಯ ಹಿರೇಮಠ, ಮಹಾದೇವಿ ಹಿರೇಮಠ, ಶಾಂತವ್ವ ಪಾಟೀಲ, ಇಂದುಮತಿ ಸಂಪಗಾವಿ, ಭಾಗ್ಯಶ್ರಿ ತಿಮ್ಮಾಪೂರ ಇತರರು ಉಪಸ್ಥಿತರಿದ್ದರು.

Share this article