ಕಳೆದ ಕೆಲ ವರ್ಷಗಳಿಂದ ರಾಮನಗರ ರಾಕ್ಷಕರ ಕೈಗೆ ಸಿಲುಕಿ ನಲುಗಿಹೋಗಿದೆ. ರಾವಣರಾಜ್ಯ ಕೊನೆಗಾಣಿಸಿ ರಾಮರಾಜ್ಯ ಸ್ಥಾಪಿಸಲು ಜನ ಇಂದು ಎಲ್ಲ ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಬಂದಿದ್ದಾರೆ ಎಂದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ರಾಮನಗರ: ಕಳೆದ ಕೆಲ ವರ್ಷಗಳಿಂದ ರಾಮನಗರ ರಾಕ್ಷಕರ ಕೈಗೆ ಸಿಲುಕಿ ನಲುಗಿಹೋಗಿದೆ. ರಾವಣರಾಜ್ಯ ಕೊನೆಗಾಣಿಸಿ ರಾಮರಾಜ್ಯ ಸ್ಥಾಪಿಸಲು ಜನ ಇಂದು ಎಲ್ಲ ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಿಂದ ಬಂದಿದ್ದಾರೆ ಎಂದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇವತ್ತು ಜಿಲ್ಲೆಯ ಜನರು ಬಹಳ ದುಸ್ಥಿತಿಯಲ್ಲಿದ್ದಾರೆ. ಕೆರೆಕಟ್ಟೆಗಳು ಬತ್ತಿಹೋಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಮಾವಿನ ತೋಟ ಒಣಗಿದ್ದು, ರೇಷ್ಮೆ ಬೆಳೆಗೆ ಬೆಲೆ ಸಿಗುತ್ತಿಲ್ಲ. ಬೋರ್‌ವೆಲ್‌ಗಳ ಸಹ ಬತ್ತಿಹೋಗಿವೆ. ಇದಕ್ಕೆಲ್ಲ ಯಾರು ಕಾರಣ?. ಅಧಿಕಾರಕ್ಕಾಗಿ ಮೇಕುದಾಟು ಪಾದಯಾತ್ರೆ ಮಾಡಿದ ಡಿ.ಕೆ.ಶಿವಕುಮಾರ್ ಎಲ್ಲಿದ್ದೀರಾ ಎಂದು ಪ್ರಶ್ನಿಸಿದರು.
ಈ ಜಿಲ್ಲೆಯಿಂದ ಗೆದ್ದ ಅವರು, ಇಲ್ಲಿನ ಜನರ ಕಷ್ಟ ಕೇಳುತ್ತಿಲ್ಲ. ಈ ಜಿಲ್ಲೆ ಬರುದಾಡಾಗಿದ್ದು, ಇಲ್ಲಿ ಏನು ಸಿಗುವುದಿಲ್ಲ ಎಂದು ಜೆಸಿಬಿ, ಹಿಟಾಚಿ ತೆಗೆದುಕೊಂಡು ಬೆಂಗಳೂರು ಬಗೆಯಲು ಹೋಗಿದ್ದಾರೆ. ಚುನಾವಣಾ ಪೂರ್ವದಲ್ಲಿ ಪೆನ್ನು,ಪೇಪರ್ ನೀಡಿದರೆ, ಜಿಲ್ಲೆಯನ್ನು ಬಂಗಾರ ಮಾಡುತ್ತೇನೆ ಎಂದಿದ್ದು, ಅವರ ಆಶ್ವಾಸನೆ ಎಲ್ಲಿ ಹೋಯಿತು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಇಂದು ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿದೆ. ಒಂದು ಕಡೆ ವಿದ್ಯುತ್ ಕ್ಷಾಮ, ನಮ್ಮ ಜಿಲ್ಲೆಯಲ್ಲಿ ಆನೆಗಳ ಹಾವಳಿ ಇದೆ. ಆದರೆ, ಯಾರೂ ಹೇಳುವವರು ಕೇಳುವವರ ಇಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಜಿಲ್ಲೆ ಬೇಡ, ಲೂಟಿ ಹೊಡೆಯಲು ಒಳ್ಳೆ ಪೊಗದಸ್ತಾಗಿರುವ ಬೆಂಗಳೂರು ನಗರ ಬೇಕು ಎಂದು ವಾಗ್ದಾಳಿ ನಡೆಸಿದರು.
ಇಂದು ಡಿ.ಕೆ.ಸುರೇಶ್ ಸಿಕ್ಕಿದ್ದರು. ಏಕಯ್ಯ ಇಷ್ಟು ಕಪ್ಪಗಾಗಿದ್ದೇಯಾ, ಈ ಬಾರಿ ಜನ ನಿನ್ನ ಗೆಲ್ಲಿಸಲ್ಲ, ಮತ್ತೆ ಏಕೆ ಇಂದು ಡಿ.ಸಿ.ಆಫೀಸ್‌ಗೆ ಬಂದಿದ್ದೀಯ ಎಂದು ಕೇಳಿದೆ. ಅದಕ್ಕವರು ಸುಮ್ಮನೆ ಜನರನ್ನು ನೋಡಲು ಬಂದಿದ್ದೇನೆ ಎಂದರು. ಆದರೆ, ಜನ ಈಗಾಗಲೇ ಏನು ಮಾಡಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು.
ಡಿ.ಕೆ.ಸುರೇಶ್ ಅವರೇ ನಾಮಪತ್ರ ಸಲ್ಲಿಕೆ ವೇಳೆ ೬೦೦ ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ನ್ಯಾಯಯುತವಾಗಿ ಸೇವೆ ಮಾಡಿದ ಮಂಜುನಾಥ್ ಒಂದು ಕಡೆ, ಅಧರ್ಮ, ಅಕ್ರಮವಾಗಿ ಸಾವಿರಾರು ಕೋಟಿ ಸಂಪಾಧನೆ ಮಾಡಿದ ಡಿ.ಕೆ.ಸಹೋದರರು ಒಂದು ಕಡೆ. ಧರ್ಮಕ್ಕೆ ಮತಹಾಕುತ್ತೀರಾ ಅಧರ್ಮಕ್ಕೆ ಮತ ಹಾಕುತ್ತೀರಾ ಎಂದು ಜನರು ನಿರ್ಧರಿಸಬೇಕು ಎಂದರು.
ಅವರು ಹಣಬಲದಿಂದ ಚುನಾವಣೆ ಗೆಲ್ಲುತ್ತೇವೆ ಎಂದುಕೊಂಡಿದ್ದಾರೆ. ಡಿಕೆಶಿ ನೋಟು, ಡಾ. ಮಂಜುನಾಥ್‌ಗೆ ವೋಟ್ ಎಂಬುದು ಇವತ್ತಿನ ಅನಿವಾರ್ಯ. ಸರ್ಕಾರದ ಗ್ಯಾರೆಂಟಿ ಯೋಜನೆಗಳ ಹೆಸರನಲ್ಲಿ ದಿವಾಳಿಯಾಗಿದೆ. ಜನರ ಬದುಕು ಹೈರಾಣವಾಗಿದೆ. ಇದು ಬದಲಾವಣೆಯ ಕಾಲ ಎಂದರು.
ನನ್ನ ಹಾಗೂ ಜೆಡಿಎಸ್ ಬೆಂಬಲದಿಂದ ಮೂರು ಬಾರಿ ಸುರೇಶ್ ಸಂಸದರಾಗಿದ್ದಾರೆ. ಈಗ ಜನರು ಡಿಕೆ ಸಹೋದರರನ್ನು ಒಪ್ಪುತ್ತಿಲ್ಲ. ಇದು ಪರಿವರ್ತನೆಯ ಕಾಲ. ಈ ಬಾರಿ ನಮ್ಮ ನಡುವೆ ಸಾಮಾನ್ಯರಂತೆ ಬದುಕುತ್ತಿರುವ ಮಂಜುನಾಥ್ ಅವರನ್ನು ಈಬಾರಿ ಗೆಲ್ಲಿಸೋಣ ಎಂದು ಮನವಿ ಮಾಡಿದರು.
ಜೆಡಿಎಸ್-ಬಿಜೆಪಿ ಒಂದೇ ಮರದ ಎರಡು ಕೊಂಬೆಗಳು ಇದ್ದಂತೆ. ಕಾಂಗ್ರೆಸ್ ವಿರುದ್ಧವಾಗಿ ಬೆಳೆದಂತೆ ಪಕ್ಷಗಳು. ಇಂದು ಕಾಂಗ್ರೆಸ್‌ನ ರಾಕ್ಷಸ ಸಂಸ್ಕೃತಿಯನ್ನು ಕಡೆಗಾಣಿಸಲು ನಾವು ಒಂದಾಗುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪಿಎಂ ದೇವೇಗೌಡರು ಸೇರಿ ಒಂದಾಗುವ ನಿರ್ಧಾರ ಮಾಡಿದರು ಎಂದರು.(ಫೋಟೋ ಬರಲಿದೆ)
ರಾಮನಗರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಮಂಜುನಾಥ್ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬಹಿರಂಗ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ ಮಾತನಾಡಿದರು.