ಗಡಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳ ದುಸ್ಥಿತಿ

KannadaprabhaNewsNetwork | Published : Jan 31, 2025 12:47 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಪ್ರಾಥಮಿಕ ಶಾಲೆಯ ಕಟ್ಟಡಗಳು ಸುರಕ್ಷಿತವಾಗಿಲ್ಲ. ಶಾಲೆಯಲ್ಲಿ ಕುಳಿತು ಪಾಠ ಕೇಳುವ ಮಕ್ಕಳಿಗೂ ಆತಂಕ ಶುರುವಾಗಿದೆ. ಯಾವಾಗ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಮೈಮೇಲೆ ಬೀಳುತ್ತದೆಯೋ ಎಂಬ ಭಯವಿದೆ. ಯಾಕಂದ್ರೆ, ತಾಲೂಕಿನ ಚಿಕ್ಕಮಣೂರ ಗ್ರಾಮದ ಭೀಮ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಯಾವುದೇ ಸಂಭವಿಸಿಲ್ಲ. ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಅಪಾಯ ತಪ್ಪಿದೆ. ಶಾಲಾ ಅವಧಿಯಲ್ಲಿ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದ್ದರೆ, ಅಪಾಯವಿತ್ತು. ಸುಮಾರು 45 ಅಡಿ ಅಗಲವಾದ ಮೇಲ್ಚಾವಣಿ ರಾತ್ರಿ ವೇಳೆಯಲ್ಲಿ ಬಿದ್ದಿದ್ದರಿಂದ ಅಪಾಯ ತಪ್ಪಿದ್ದು, ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿ

ಪ್ರಾಥಮಿಕ ಶಾಲೆಯ ಕಟ್ಟಡಗಳು ಸುರಕ್ಷಿತವಾಗಿಲ್ಲ. ಶಾಲೆಯಲ್ಲಿ ಕುಳಿತು ಪಾಠ ಕೇಳುವ ಮಕ್ಕಳಿಗೂ ಆತಂಕ ಶುರುವಾಗಿದೆ. ಯಾವಾಗ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಮೈಮೇಲೆ ಬೀಳುತ್ತದೆಯೋ ಎಂಬ ಭಯವಿದೆ. ಯಾಕಂದ್ರೆ, ತಾಲೂಕಿನ ಚಿಕ್ಕಮಣೂರ ಗ್ರಾಮದ ಭೀಮ ನಗರದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು, ಯಾವುದೇ ಸಂಭವಿಸಿಲ್ಲ. ರಾತ್ರಿ ವೇಳೆ ಘಟನೆ ಸಂಭವಿಸಿದ್ದರಿಂದ ಅಪಾಯ ತಪ್ಪಿದೆ. ಶಾಲಾ ಅವಧಿಯಲ್ಲಿ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳ ಮೇಲೆ ಬಿದ್ದಿದ್ದರೆ, ಅಪಾಯವಿತ್ತು. ಸುಮಾರು 45 ಅಡಿ ಅಗಲವಾದ ಮೇಲ್ಚಾವಣಿ ರಾತ್ರಿ ವೇಳೆಯಲ್ಲಿ ಬಿದ್ದಿದ್ದರಿಂದ ಅಪಾಯ ತಪ್ಪಿದ್ದು, ಮಕ್ಕಳ ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ.ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಇಂಡಿ ತಾಲೂಕಿನ ಕನ್ನಡ ಶಾಲಗಳ ಸ್ಥಿತಿ ಅಯೋಮಯವಾಗಿದೆ. ಮಕ್ಕಳು ಜೀವ ಕೈಯಲ್ಲಿ ಹಿಡಿದು ಶಾಲೆಯಲ್ಲಿ ಕೂರುವಂತಾಗಿದೆ. ಕನ್ನಡ ಶಾಲೆಗಳ ಕೋಣೆಗಳು ಭಾಗಶಃ ಶಿಥಿಲಗೊಂಡಿವೆ. ದುರಸ್ತಿ ಮಾಡಬೇಕಾದ ಸರ್ಕಾರ ಗ್ಯಾರಂಟಿ ಯೋಜನೆಯಲ್ಲಿ ಕನ್ನಡ ಶಾಲೆಗಳನ್ನು ಮರೆತಿದೆ ಮರೆತಂತೆ ಕಾಣುತ್ತಿದ್ದು, ಈ ಭಾಗದ ಕನ್ನಡ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೇ ಕನ್ನಡ ಶಾಲೆಗಳು ಎಂದರೆ ತಾತ್ಸಾರರಿಂದ ನೋಡುವುದರಿಂದಲೇ ಅವಸಾನದತ್ತ ಸಾಗಿವೆ. ಇದರ ಮಧ್ಯೆ ಮಹಾ ಗಡಿಗೆ ಹೊಂದಿರುವ ಇಂಡಿ ತಾಲೂಕಿನ ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಶೋಚನೀಯ ಎನ್ನುವಂತಿವೆ.ಸೌಲಭ್ಯಗಳು ಸರಿಯಿಲ್ಲ

ಖಾಸಗಿ ಶಾಲೆಗಳ ಪೈಪೋಟಿ ಮಧ್ಯ ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳು ಅಭಿವೃದ್ಧಿಯಲ್ಲಿ ನೆಲಕಚ್ಚುತ್ತಿವೆ. ಸರ್ಕಾರಿ ಶಾಲೆಯಲ್ಲಿ ಉತ್ತಮ ಬೋಧನೆ ಇದೆ. ಆದರೂ, ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೋಣೆಗಳ ಕೊರತೆ, ಶೈಕ್ಷಣಿಕ ವಾತಾವರಣ ಕಲ್ಪಿಸದಿರುವುದರಿಂದ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದೆ. ನಂಜುಂಡಪ್ಪ ವರದಿ ಪ್ರಕಾರ ಗಡಿ ತಾಲೂಕುಗಳು ಅಭಿವೃದ್ಧಿಯಾಗಬೇಕು ಎಂದಿದೆ. ಆದರೆ, ಆಯೋಗ ನೀಡಿದ ವರದಿ ಮೇಲೆ ಎಷ್ಟೋ ಸರ್ಕಾರಗಳು ಬಂದು ಹೋದರೂ ನಂಜುಂಡಪ್ಪ ವರದಿ ಯಥಾವತ್ ಜಾರಿಯಾಗಿಲ್ಲ. ನ.1ಕ್ಕೆ ಕನ್ನಡ ಉಳಿಯಬೇಕು. ಕನ್ನಡ ಬೆಳೆಸಬೇಕು ಎಂಬುದು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾದಂತೆ ಕಾಣುತ್ತಿದೆ. ಅಪಾಯದಲ್ಲಿ ಭೀಮನಗರ ಶಾಲೆ:

ತಾಲೂಕಿನ ಭೀಮನಗರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 120 ವಿದ್ಯಾರ್ಥಿಗಳಿದ್ದಾರೆ. 1 ರಿಂದ 7ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. 6 ಕೋಣೆಗಳಿದ್ದು, ಒಂದು ಕೋಣೆ ಮಾತ್ರ ಬೋಧನೆಗೆ ಅನುಕೂಲವಿದೆ. ಉಳಿದ 5 ಕೋಣೆಗಳು ಸಂಪೂರ್ಣ ಶಿಥಿಲಗೊಂಡು ಮೇಲ್ಚಾವಣಿ ಕಿತ್ತು ಬೀಳುತ್ತಿವೆ. ಈ ಶಾಲೆಗೆ ಮಕ್ಕಳ ಅನುಪಾತಕ್ಕೆ ತಕ್ಕಂತೆ ಒಟ್ಟು 5 ಜನ ಶಿಕ್ಷಕರು ಬೇಕು. ಆದರೆ, ಇಬ್ಬರು ಸರ್ಕಾರಿ ಖಾಯಂ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಕೋಣೆಗಳು ಶಿಥಿಲಗೊಂಡು, ಛಾವಣಿಯ ಸಿಮೆಂಟ್ ಕಿತ್ತು ಬಿದ್ದಿವೆ. ಶಿಥಿಲಗೊಂಡ ಕೋಣೆಯಲ್ಲಿಯೇ 1 ರಿಂದ 7ನೇ ತರಗತಿಯವರೆಗೆ 120 ಮಕ್ಕಳು ಪಾಠಕಲಿಯಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಭೀಮನಗರದ ಮಠವೊಂದರಲ್ಲಿ ಮಕ್ಕಳಿಗೆ ಪಾಠ ಮಾಡಲಾಗಿದೆ. ಮಳೆ ಇಲ್ಲವಾದ್ದರಿಂದ ಮಕ್ಕಳು ಕಿರಿಕಿರಿ ಮಾಡುತ್ತಾರೆ, ನಿಮ್ಮ ಶಾಲಾ ಕಟ್ಟಡಕ್ಕೆ ಹೋಗುವಂತೆ ಮಠದವರು ಹೇಳಿದ್ದರಿಂದ ಅನಿವಾರ್ಯವಾಗಿ ಶಿಥಿಲಗೊಂಡ ಕಟ್ಟಡಕ್ಕೆ ಮರಳಿ ಮಕ್ಕಳನ್ನು ಕರೆದುಕೊಂಡು ಬರಲಾಗಿದೆ. ಸಧ್ಯ, ಮಳೆ ಬಂದರೆ ಶಾಲೆಗೆ ರಜೆ ನೀಡುವುದು ಅನಿವಾರ್ಯ ಎನ್ನುತ್ತಾರೆ ಮುಖ್ಯಶಿಕ್ಷಕ ಪಿ.ಎಂ.ಬಡಿಗೇರ. ಅಲ್ಲದೇ,

ಮಳೆ ಬಂದರೆ ಶಾಲಾ ಕೋಣೆಯಲ್ಲಿ ಮಳೆ ನೀರೇ ಅವರಿಸುತ್ತದೆ. ಮೇಲ್ಚಾವಣಿ ಕಡಿದು ಬಿದ್ದು ಮಕ್ಕಳಿಗೆ ತೊಂದರೆಯಾಗುತ್ತದೆಯೊ ಎಂಬ ಭಯ ಶಿಕ್ಷಕರನ್ನು ಕಾಡುತ್ತಿದೆ. ತಾಲೂಕಿನಲ್ಲಿನ ಶಾಲೆಗಳ ಪೈಕಿ ದುರಸ್ತಿಗೆ ಕಾದಿರುವ 80 ಪ್ರಾಥಮಿಕ ಶಾಲೆಗಳ 133 ಕೋಣೆಗಳು, 6 ಪ್ರೌಢ ಶಾಲೆಗಳ 19 ಕೋಣೆಗಳ ಪಟ್ಟಿಯನ್ನು ಬಿಇಒ ಕಚೇರಿಯಲ್ಲಿ ಪಟ್ಟಿ ಮಾಡಿ ಸಿದ್ಧಪಡಿಸಿಟ್ಟುಕೊಂಡಿದ್ದು, ಮಕ್ಕಳಿಗೆ ಅಪಾಯವಾಗುವುದಕ್ಕಿಂತ ಮುಂಚೆ ದುರಸ್ತಿಗೊಳಿಸಬೇಕು ಎಂಬುದು ಕನ್ನಡ ಶಿಕ್ಷಣ ಪ್ರೇಮಿಗಳ ಆಗ್ರಹ.

ಕೋಟ್‌ಭೀಮನಗರ ಸರ್ಕಾರಿ ಪ್ರಾಥಮಿಕ ಶಾಲೆಯ ಒಂದು ಕೋಣೆ ಹೊರತುಪಡಿಸಿ ಎಲ್ಲ ಕೊಣೆಗಳು ಶಿಥಿಲಗೊಂಡಿವೆ. ಕಳೆದ ಎರಡು ದಿನದ ಹಿಂದೆ ರಾತ್ರಿ ಕೊಠಡಿ ಮೇಲ್ಚಾವಣಿ ಕತ್ತರಿಸಿ ಬಿದ್ದಿದೆ. ಶಾಲಾ ಅವಧಿಯಲ್ಲಾಗಿದ್ದರೆ ಬಹಳಷ್ಟು ಮಕ್ಕಳಿಗೆ ತೊಂದರೆಯಾಗುತ್ತಿತ್ತು. ದೇವರು ಕಾಪಾಡಿದ್ದಾನೆ. ಕೋಣೆಗಳ ದುರಸ್ತಿ ಕುರಿತು ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅನುದಾನ ಬಂದ ಕೂಡಲೇ ಕೋಣೆಗಳು ದುರಸ್ತಿಗೊಳಿಸಲಾಗುತ್ತದೆ ಎಂದಿದ್ದಾರೆ. ಎಲ್ಲಾ ಕೋಣೆಗಳ ಮೇಲ್ಚಾವಣಿ ಬಿಳಿಸಿ, ಪತ್ರಾಸ್‌ ಹಾಕಿಕೊಟ್ಟರೆ ಅನುಕೂಲವಾಗುತ್ತದೆ.ಪಿ.ಎಂ.ಬಡಿಗೇರ, ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ ಭೀಮನಗರ

ಕೋಟ್‌ಭೀಮನಗರ ಶಾಲೆ ಶಿಥಿಲಗೊಂಡಿದ್ದು ಗಮನಕ್ಕೆ ಬಂದಿದೆ. ಇಂತಹ ಹಲವು ಶಾಲೆಗಳ ಕೋಣೆಗಳು ಶಿಥಿಲಗೊಂಡಿದ್ದು, ಶಾಲಾ ಕೋಣೆಗಳ ದುರಸ್ತಿಗಾಗಿಯೇ ಶಾಲೆಗಳ ಪಟ್ಟಿ ತಯಾರಿಸಲಾಗಿದೆ. ಅನುದಾನ ಬಂದಕೂಡಲೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ಟಿ.ಎಸ್‌.ಆಲಗೂರ, ಬಿಇಒ, ಇಂಡಿಕೋಟ್‌

ಇಂಡಿ ತಾಲೂಕಿನಲ್ಲಿ ಕನ್ನಡ ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದು, ಸರ್ಕಾರ ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬರುವ ಬಜೆಟ್‌ನಲ್ಲಿ ಕಾಯ್ದಿರಿಸಿ, ಗಡಿಭಾಗದಲ್ಲಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು.ಬಾಳು ಮುಳಜಿ, ಕರವೇ, ಅಧ್ಯಕ್ಷ, ಇಂಡಿ

Share this article