ಹಣ ಸಂಗ್ರಹಿಸಿ ಶವ ಸಾಗಿಸಲು ನೆರವಾದ ಪೊಲೀಸರು

KannadaprabhaNewsNetwork |  
Published : Aug 24, 2025, 02:00 AM IST
ಇಂಡಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ರಾಜಸ್ಥಾನ ಮೂಲದ 14 ವರ್ಷದ ಮಗನನ್ನು ಕಳೆದುಕೊಂಡು ಶವವನ್ನು ತನ್ನೂರಿಗೆ ತೆಗೆದುಕೊಂದು ಹೋಗಲು ಪರದಾಡುತ್ತಿದ್ದ ತಾಯಿಗೆ ನೆರವಾಗುವ ಮೂಲಕ ಇಂಡಿ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.ರಾಜಸ್ಥಾನ ಮೂಲದ ತೇಜಪಾಲ್‌ ಜಗದೀಶ ಎಂಬ ಬಾಲಕ ಕಾಮಾಲೆ ಕಾಯಿಲೆಯಿಂದ ಮೃತಪಟ್ಟಿದ್ದು, ಬಡಕುಟುಂಬವಾಗಿದ್ದರಿಂದ ಮಗನ ಶವ ಸಾಗಿಸಲು ಹಣವಿಲ್ಲದ್ದರಿಂದ ಬಾಲಕನ ತಾಯಿಗೆ ಡಿವೈಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲಿ ಎಎಸ್ಐ ಎಸ್.ಎಸ್.ತಳವಾರ, ಜಗದೀಶ ನಿಲೂರೆ, ಚಂದ್ರಶೇಖರ ಕಂಬಾರ ಹಾಗೂ ಸ್ಥಳೀಯ ಸುನೀಲಗೌಡ ಬಿರಾದಾರ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಂಬ್ಯುಲೆನ್ಸ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಇಂಡಿ

ರಾಜಸ್ಥಾನ ಮೂಲದ 14 ವರ್ಷದ ಮಗನನ್ನು ಕಳೆದುಕೊಂಡು ಶವವನ್ನು ತನ್ನೂರಿಗೆ ತೆಗೆದುಕೊಂದು ಹೋಗಲು ಪರದಾಡುತ್ತಿದ್ದ ತಾಯಿಗೆ ನೆರವಾಗುವ ಮೂಲಕ ಇಂಡಿ ಪೊಲೀಸರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.ರಾಜಸ್ಥಾನ ಮೂಲದ ತೇಜಪಾಲ್‌ ಜಗದೀಶ ಎಂಬ ಬಾಲಕ ಕಾಮಾಲೆ ಕಾಯಿಲೆಯಿಂದ ಮೃತಪಟ್ಟಿದ್ದು, ಬಡಕುಟುಂಬವಾಗಿದ್ದರಿಂದ ಮಗನ ಶವ ಸಾಗಿಸಲು ಹಣವಿಲ್ಲದ್ದರಿಂದ ಬಾಲಕನ ತಾಯಿಗೆ ಡಿವೈಎಸ್ಪಿ ಜಗದೀಶ್ ಮಾರ್ಗದರ್ಶನದಲ್ಲಿ ಎಎಸ್ಐ ಎಸ್.ಎಸ್.ತಳವಾರ, ಜಗದೀಶ ನಿಲೂರೆ, ಚಂದ್ರಶೇಖರ ಕಂಬಾರ ಹಾಗೂ ಸ್ಥಳೀಯ ಸುನೀಲಗೌಡ ಬಿರಾದಾರ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅಂಬ್ಯುಲೆನ್ಸ್‌ನಲ್ಲಿ ಶವವನ್ನು ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ. ರಾಜಸ್ಥಾನದ ಪಾಳಿ ಗ್ರಾಮದ ತಾಯಿ, ಮಗ ಇಬ್ಬರು ಸುಮಾರು 6 ತಿಂಗಳ ಹಿಂದೆ ಇಂಡಿ ಪಟ್ಟಣಕ್ಕೆ ದುಡಿಯಲು ಬಂದಿದ್ದರು. ಇಲ್ಲಿ ಲಚ್ಯಾಣ ರಸ್ತೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. 14 ವರ್ಷದ ತೇಜಪಾಲ ಮನೆಯಲ್ಲಿ ಪರಸಿ ಹಾಕುವ ಕೆಲಸ ಮಾಡಿಕೊಂಡಿದ್ದ. ಆದರೆ, ಕಳೆದ ಒಂದು ತಿಂಗಳ ಹಿಂದೆ ತೆಜಪಾಲ್‌ಗೆ ಜ್ವರ ಕಾಣಿಸಿಕೊಂಡು ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ತೋರಿಸಿದ ಬಳಿಕ ಕಾಮಾಲೆ ರೋಗ ಇರುವುದಾಗಿ ವೈದ್ಯರು ತಿಳಿಸಿದ್ದರು.ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಹಿನ್ನಲೆಯಲ್ಲಿ ತೇಜಪಾಲ್‌ ಗುರುವಾರ ಕೊನೆಯುಸಿರೆಳೆದಿದ್ದಾನೆ. ಮಗನ ಶವವನ್ನು ಗ್ರಾಮಕ್ಕೆ ತಗೆದುಕೊಂಡು ಹೋಗಲು ಸಾಧ್ಯವಾಗದೇ ತಾಯಿ ಮಗನ ಶವದ ಮುಂದೆ ಕುಳಿತು ಕಣ್ಣಿರ ಹಾಕುತ್ತಿದ್ದಳು. ಈ ವಿಷಯ ಪೊಲೀಸ್‌ ಸಿಬ್ಬಂದಿಯಿಂದ ಡಿವೈಎಸ್ಪಿ ಗಮನಕ್ಕೆ ಬಂದಿದ್ದು, ಆಗ ಡಿವೈಎಸ್ಪಿ ಜಗದೀಶ್‌ ತಾಯಿಯನ್ನು ಭೇಟಿ ಮಾಡಿ ಪರಿಶೀಲಿಸಿದ್ದರು. ಮೃತನ ತಾಯಿ ಮಗನ ಶವವವನ್ನು ನಮ್ಮೂರಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಳು.

ಬಳಿಕ ಪೊಲೀಸ್‌ ಸಿಬ್ಬಂದಿ ಎಎಸ್ಐ ಎಸ್.ಎಸ್‌ ತಳವಾರ, ಚಂದ್ರಶೇಖರ ಕಂಬಾರ, ಜಗದೀಶ ನಿಲೂರೆ ಹಾಗೂ ಸ್ಥಳೀಯ ಸುನೀಲಗೌಡ ಬಿರಾದಾರ ಸಾರ್ವಜನಿಕರಿಂದ ಸುಮಾರು ₹ 95 ಸಾವಿರಸಂಗ್ರಹಿಸಿ ಅದರಲ್ಲಿ ₹ 65 ಸಾವಿರ ಅಂಬ್ಯುಲೆನ್ಸ್‌ ಬಾಡುಗೆ ನೀಡಿ, ಉಳಿದ ಹಣ ತಾಯಿಗೆ ಕೊಟ್ಟು ಗ್ರಾಮಕ್ಕೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.ಇಂಡಿ ಪಟ್ಟಣದ ಜನರ ಸಹಾಯಕ್ಕೆ ರಾಜಸ್ಥಾನ ಜನರು ಕೃತಜ್ಞತೆ ಸಲ್ಲಿಸಿದರು. ಇಂಡಿ ಪೊಲೀಸರು, ಪಟ್ಟಣದ ಸಾರ್ವಜನಿಕರು ಸಹಾಯ ಮಾಡಿರುವ ವಿಷಯ ಇದೀಗ ವಾಟ್ಸಾಪ್, ಫೇಸ್ ಬುಕ್ ಸ್ಟೇಟಸ್‌ನಲ್ಲಿ ರಾರಾಜಿಸುತ್ತಿದ್ದು, ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.ಕೋಟ್‌ನಿತ್ಯ ಸಾರ್ವಜನಿಕ ‌ವಲಯದಲ್ಲಿ ಕೆಲಸ ಮಾಡುವ ನಾವುಗಳು ಕೇವಲ ಕಾನೂನಿನ ಚೌಕಟ್ಟಿನಲ್ಲೇ ಇರದೆ ಇಂತಹ ಘಟನೆಗಳ ಸಂದರ್ಭದಲ್ಲಿ ಮಾನವೀಯತೆ ಮೆರೆಯುವುದು ಅವಶ್ಯಕವಾಗಿದೆ. ನಮ್ಮ ಸ್ಥಾನದಲ್ಲಿ ಯಾರೇ ಇದ್ದರೂ ಇದೇ ಕೆಲಸ ಮಾಡುತ್ತಿದ್ದರು. ಸಮಾಜದಲ್ಲಿ ‌ನಾವು ನಾಗರಿಕರಾಗಿ ನಮ್ಮ ಜವಾಬ್ದಾರಿಯನ್ನು ಮಾಡಿದ್ದೇವೆ ಅಷ್ಟೆ.ಜಗದೀಶ ನಿಲೂರೆ, ಪೊಲೀಸ್ ಸಿಬ್ಬಂದಿ

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!