ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ ಮೀಸಲು

KannadaprabhaNewsNetwork |  
Published : Aug 07, 2024, 01:02 AM IST
ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮೀಸಲು ಪ್ರಕಟ.... | Kannada Prabha

ಸಾರಾಂಶ

ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌ನ ಐವರು ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆಯ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ) ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್‌ನ ಐವರು ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಇದೇ ಮೊದಲ ಬಾರಿಗೆ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ)ಗೆ ಮೀಸಲಾದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮಾಜದ ಬಿಜೆಪಿಯ ಪುರಸಭೆ ಸದಸ್ಯರಾದ ಜಿ.ಎಸ್.ಕಿರಣ್‌ಗೌಡ, ನಾಗೇಶ್, ವೀರಶೈವ ಸಮಾಜದ ವೀಣಾ ಮಂಜುನಾಥ್‌, ಕಾಂಗ್ರೆಸ್‌ನ ಮಧುಸೂದನ್, ದಾಸ ಬಣಜಿಗ ಸಮಾಜದ ಪಕೇತರ ಸದಸ್ಯ ಪಿ.ಶಶಿಧರ್ (ದೀಪು) ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪುರಸಭೆಯ ಒಟ್ಟು 23 ಸದಸ್ಯರು ಆಯ್ಕೆಯಾಗಿದ್ದಾರೆ ಜೊತೆಗೆ ಕ್ಷೇತ್ರದ ಶಾಸಕ, ಸಂಸದರ ಮತ ಸೇರಿದರೆ 25 ಮತಗಳಾಗುತ್ತದೆ. 13 ಸದಸ್ಯರ ಬೆಂಬಲ ಪಡೆದರೆ ಅಧ್ಯಕ್ಷ ಸ್ಥಾನಕ್ಕೇರಲು ಸಾಧ್ಯವಾಗಲಿದೆ.

ಬಲಾ ಬಲ:

ಪುರಸಭೆ 23 ಸದಸ್ಯರಲ್ಲಿ 14 ಮಂದಿ ಬಿಜೆಪಿ ಸದಸ್ಯರು, 8 ಮಂದಿ ಕಾಂಗ್ರೆಸ್‌ ಸದಸ್ಯರು, ಓರ್ವ ಎಸ್‌ಡಿಪಿಐ, ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು. ಮೊದಲ ಅವಧಿಯಲ್ಲಿ ಬಿಜೆಪಿ ಅಧಿಕಾರ ನಡೆಸಿದೆ. 14 ಬಿಜೆಪಿ ಸದಸ್ಯರಲ್ಲಿ ಬಿಜೆಪಿ ಸದಸ್ಯರೂ ಆದ ಮಾಜಿ ಪುರಸಭೆ ಅಧ್ಯಕ್ಷ ರಮೇಶ್‌ ಬಿಜೆಪಿಯಿಂದ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಆದರೀಗ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಎದುರಾಗಿದ್ದು, ಒಂದು ವೇಳೆ ಬಿಜೆಪಿ ವಿರುದ್ಧವಾಗಿ ಮತ ಚಲಾಯಿಸಿದರೆ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಆಗಲಿದೆ.

ಬಿಜೆಪೀಲಿ ಮೂವರು:

ಬಿಜೆಪಿ ಸದಸ್ಯರಾದ ಜಿ.ಎಸ್.ಕಿರಣ್‌ ಗೌಡ, ನಾಗೇಶ್‌, ವೀಣಾ ಮಂಜುನಾಥ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯ ಪಿ.ಶಶಿಧರ್ (ದೀಪು) ಬಿಜೆಪಿಯಿಂದ ಕಳೆದ ವಿಧಾನಸಭೆ ಚುನಾವಣೆ ಬಳಿಕ ಅಂತರ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್‌ ಸದಸ್ಯ ಮಧುಸೂದನ್‌ ಒಬ್ಬರೇ ಆಕಾಂಕ್ಷಿಯಾಗಿದ್ದು, ಪುರಸಭೆ ಅಧ್ಯಕ್ಷರಾಗಲು 13 ಸದಸ್ಯರ ಬೆಂಬಲ ಬೇಕು ಆದರೆ ಕಾಂಗ್ರೆಸ್‌ ನಲ್ಲಿ 8 ಸದಸ್ಯರ ಜೊತೆಗೆ ಶಾಸಕ, ಸಂಸದರ ಮತ ಸೇರಿದರೆ 10 ಮತಗಳಾಗುತ್ತದೆ. ಎಸ್‌ಡಿಪಿಐ ಸದಸ್ಯ ಕಾಂಗ್ರೆಸ್‌ ಜೊತೆ ನಿಂತರೂ ಇನ್ನೂ ಎರಡು ಮತಗಳ ಕೊರತೆ ಎದುರಾಗುತ್ತದೆ. ಇತ್ತ ಪಕ್ಷೇತರ ಸದಸ್ಯ ಪಿ.ಶಶಿಧರ್‌ (ದೀಪು) ಮೊದಲು ಬಿಜೆಪಿಗೆ ಬೆಂಬಲಿಸಿದ್ದರು. ಈಗ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಈಗ ಕಾಂಗ್ರೆಸ್‌ ಅಥವಾ ಬಿಜೆಪಿ ಜೊತೆ ಹೋದರೆ ಅಧ್ಯಕ್ಷ ಸ್ಥಾನ ಕೊಟ್ಟವರ ಜೊತೆ ಹೋಗುತ್ತಾರೋ ಕಾದು ನೋಡಬೇಕಿದೆ.

ರಮೇಶ್‌ ಕಥೆ?

ಬಿಜೆಪಿಯಿಂದ ಆಯ್ಕೆಯಾಗಿದ್ದ ರಮೇಶ್‌ ಈಗ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ ಹಾಕಿದರೆ ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿದರೆ ಪುರಸಭೆ ಸದಸ್ಯತ್ವ ಹೋಗಲಿದೆ ಎಂಬ ಆತಂಕವೂ ಇದೆ. ಬಿಜೆಪಿ ವೀಣಾ ಮಂಜುನಾಥ್‌ಗೂ ಅಧ್ಯಕ್ಷರಾಗಲು ಅವಕಾಶ ಬಂದಿದೆ. ಆದರೆ ವೀಣಾ ಮಂಜುನಾಥ್‌ ಪತಿ ವಿದ್ಯುತ್‌ ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ಕಾರಣ ಬಿಸಿಎಂ(ಬಿ) ಸರ್ಟಿಫಿಕೇಟ್‌ ಸಿಗುವುದಿಲ್ಲ ಎಂದು ಹೇಳಲಾಗುತ್ತಿದ್ದು, ಬಿಸಿಎಂ(ಬಿ) ಸರ್ಟೀಫಿಕೇಟ್‌ ಸಿಕ್ಕರೆ ಅವರು ಸ್ಪರ್ಧೆ ಒಡ್ಡಲಿದ್ದಾರೆ.6ಜಿಪಿಟಿ1

ಪಿ.ಶಶಿಧರ್‌

6ಜಿಪಿಟಿ2

ಮಧುಸೂದನ್‌6ಜಿಪಿಟಿ3

ಜಿ.ಎಸ್.ಕಿರಣ್‌ ಗೌಡ

6ಜಿಪಿಟಿ4

ನಾಗೇಶ್‌6ಜಿಪಿಟಿ5

ವೀಣಾ ಮಂಜುನಾಥ್‌

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ