ಅಂತರಂಗದ ಮನುಷ್ಯ ಸಂಬಂಧದ ನದಿ ಬತ್ತಿ ಹೋಗಿದೆ

KannadaprabhaNewsNetwork | Published : Jun 29, 2025 1:36 AM
11 | Kannada Prabha

ಸಾರಾಂಶ

ಅಂತರಂಗದಲ್ಲಿನ ಮನುಷತ್ವ ಸಂಬಂಧದ ನದಿ ಬತ್ತಿ ಹೋಗಿದೆ ಎಂದು ಲೇಖಕ ಕೆ.ವೈ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಅಂತರಂಗದಲ್ಲಿನ ಮನುಷತ್ವ ಸಂಬಂಧದ ನದಿ ಬತ್ತಿ ಹೋಗಿದೆ ಎಂದು ಲೇಖಕ ಕೆ.ವೈ. ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಭಾನುವಾರ ನಿರ್ದಿಗಂತ ಆಯೋಜಿಸಿದ್ದ ಎರಡನೇ ವರ್ಷದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಕಾಶ್‌ರಾಜ್‌ಅವರು ನಿರ್ದಿಗಂತದ ಮೂಲಕ ತಮ್ಮ ಒಳಗಿನ ಹಕೀಮನನ್ನು ಕಂಡು ಕೊಂಡಿದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಎಲ್ಲರೂ ತಮ್ಮ ಒಳಗಿನ ಹಕೀಂನನ್ನು ಕಂಡುಕೊಂಡಿಲ್ಲ. ನಮ್ಮ ನಿಲುವು, ಆಯ್ಕೆಯ ಒಳಗೆಯೇ ಕಣ್ಣಗಾಯವಿದೆ. ಆದರೆ ನಮಗೆ ಅರಿವಾಗುತ್ತಿಲ್ಲ. ಸ್ಮಶಾನ ನಿರ್ಮಿಸುತ್ತಿದ್ದರೂ ನಾಳಿನ ಮಕ್ಕಳು ಸುಂದರ ಜಾಗ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಏಕೆಂದರೆ ದೇಶದಲ್ಲಿ ಮೌನವನ್ನೇ ಕದಿಯಲಾಗಿದೆ. ಭಾಷೆ ಮತ್ತು ಸಮಾಜ ಹೊರ ಶತ್ರುಗಳನ್ನು ಗುರುತಿಸುವುದರಲ್ಲಿ ಪ್ರವೀಣರು. ಕುವೆಂಪು ಅವರು ಹೇಳಿದಂತೆ ನಮ್ಮೊಳಗಿನ ಶತ್ರುವಿನ ಸ್ವರೂಪ ಹೇಗಿರಬಹುದು ಎಂಬ ಹುಡುಕಾಟ ನಡೆಸಬೇಕು ಎಂದರು.

ಕಾರಂತರು ರಂಗಾಯಣ ಆರಂಭಿಸುವಾಗ ರಾಜ್ಯದ ಮೂಲೆ ಮೂಲೆಗಳಲ್ಲಿ ಆರಂಭಿಸಿದಂತೆ, ಪ್ರಕಾಶ್‌ಅವರಿಗೂ ದಕ್ಷಿಣ ಕನ್ನಡ ನಿರ್ದಿಂಗತ, ಉತ್ತರ ಕರ್ನಾಟಕ ನಿರ್ದಿಂಗತ, ಬಯಲು ಸೀಮೆ ನಿರ್ದಿಂಗತ ಸ್ಥಾಪಿಸುವ ಹಂಬಲವಿದೆ. ಅವರ ಈ ರಂಗಕಾರ್ಯವನ್ನು ಎಲ್ಲೆಡೆ ವಿಸ್ತರಿಸುತ್ತಿದ್ದಾರೆ. ಇದು ಹೊಸ ಕಾಲಕ್ಕೆ ವಿಶ್ವಾಸವನ್ನಿಡುವ ಹೆಜ್ಜೆಯಾಗಿದೆ. ಅವರ ಸಾಮರ್ಥ್ಯ ಶಕ್ತಿ ಮತ್ತಷ್ಟು ಬಲಗೊಳ್ಳಲಿ ಎಂದು ಅವರು ಹೇಳಿದರು.

ನಿರ್ದಿಗಂತವಾಗಿ ಏರಿ ಸ್ಮರಣಿಕೆ ಬಿಡುಗಡೆಗೊಳಿಸಿದ ಕವಿ ಜಯಂತ್‌ಕಾಯ್ಕಿಣಿ ಮಾತನಾಡಿ, ಮನುಷ್ಯ ಲೋಕದ ಕುರಿತಾದ ನೋವು, ಯಾತನೆ ಎಂಬುದು ನಮ್ಮ ಕಲ್ಪನೆಗೂ ಬರುವುದಿಲ್ಲ ಎಂದರು.

ಆರಂಭದಲ್ಲಿ ನಿರ್ದಿಗಂತ ತಂಡದ ಸದಸ್ಯರು ನಾವು ನಾವು ನಾವು ದೃಢ ಸಂಕಲ್ಪ ಮಾಡುತ್ತೇವೆ ಎಂಬ ಸಂವಿಧಾನದ ಆಶಯ ಗೀತೆಗಳನ್ನು ಹಾಡಿದರು.

ನಟ ಪ್ರಕಾಶ್‌ರಾಜ್‌ಮಾತನಾಡಿ, ನಿರ್ದಿಗಂತದ ಹಿಂದೆ ಒಂದು ಭಾವಜಾಲವಿದೆ. ತೋಟವು ಮಾಲೀಕನದ್ದೇ ಆದರೂ, ಹೂ ಬಳ್ಳಿ? ಎಂದು ಪ್ರಶ್ನಿಸಿದರು.

ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ, ನಿರ್ದೇಶಕ ಎನ್‌.ಎಸ್‌. ನಾಗಭೂಷಣ್, ಬಿ. ಸುರೇಶ್, ಗಾಯಕಿ ಬಿ. ಜಯಶ್ರೀ, ಲೇಖಕರಾದ ದೇವನೂರ ಮಹಾದೇವ, ಜಿ.ಎನ್‌. ಮೋಹನ್‌, ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಮೊದಲಾದವರು ಇದ್ದರು.

PREV