ಶಿಗ್ಗಾಂವಿ:ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರ ವೃತ್ತಿ, ಶಿಕ್ಷಕರು ಮಕ್ಕಳ ಜೀವನ ರೂಪಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ- ೨ ರಲ್ಲಿ ಹಮ್ಮಿಕೊಂಡ ಶಾಲೆಯ ನಿವೃತ್ತ ಶಿಕ್ಷಕ ಎಂ.ಎಂ. ದೇವಕ್ಕಿಗೌಡ್ರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದ ನಿಜವಾದ ಗುರಿ ಚಾರಿತ್ರ‍್ಯ ನಿರ್ಮಾಣ ಮಕ್ಕಳ ಕಲಿಕೆಯಲ್ಲಿ ಅಡಗಿದೆ, ಶಿಕ್ಷಣ ಎಂದರೆ ಕೇವಲ ಪಠ್ಯ ವಿಷಯಗಳ ಕಲಿಕೆಯಲ್ಲ. ಜೀವನದ ಮೌಲ್ಯಗಳ, ಶಿಸ್ತು ಮತ್ತು ಸಂಸ್ಕಾರವನ್ನು ತುಂಬುವ ಕೆಲಸ ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವೆನಿಸುತ್ತದೆ. ಅಂತಹ ಶಿಕ್ಷಣ ನೀಡುವ ಶಿಕ್ಷಕರ ಸಾಲಿನಲ್ಲಿ ನಿಂತಿರುವ ದೇವಕ್ಕಿಗೌಡ್ರ ಅವರ ಸಾಧನೆ ಮಕ್ಕಳ ಸಾಧನೆಯಲ್ಲಿ ಅಡಗಿದೆ, ಶಿಕ್ಷಣದಲ್ಲಿ ಮಕ್ಕಳ ಜೀವನ ರೂಪಿಸುವ ಶಿಕ್ಷಕರು ದೇವರು ಎನಿಸಿಕೊಳ್ಳುತ್ತಾರೆ. ಮಕ್ಕಳಿಗೆ ಕೊಡುವ ಶಿಕ್ಷಣಕ್ಕೆ ಗೌರವ ಬರುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವ ಶಿಕ್ಷಕರಾಗಬೇಕು ಅವರು ಸೇವೆ ಸಲ್ಲಿಸಿದ ಪ್ರತಿ ಶಾಲೆಗಳಲ್ಲಿಯ ಮಕ್ಕಳ ಮತ್ತು ಶಾಲೆಯ ದಾಖಲಾತಿ ಸಂರಕ್ಷಣೆ, ಉತ್ತಮ ಸೇವೆಯ ಸ್ಮರಣೆ ಮಾಡಿಕೊಳ್ಳುವ ರೀತಿಯಲ್ಲಿ ಮಾಡಿದ್ದಾರೆ. ವೈಯಕ್ತಿಕ ರೀತಿಯಲ್ಲಿ ನನಗೂ ಮಾರ್ಗದರ್ಶನ ಮಾಡುವ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.ತಾಲೂಕು ನೌಕರರ ಸಂಘದ ಅಧ್ಯಕ್ಷ ಅರುಣ್ ಹುಡೇದಗೌಡ್ರ ಮಾತನಾಡಿ, ದೇಶದ ನಿಜವಾದ ಭವಿಷ್ಯ ಅಡಗಿರುವುದು ವಿದ್ಯಾರ್ಥಿಗಳ ಕೈಯಲ್ಲಿ, ಅಂತಹ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಅಂತಹ ಶ್ರೇಷ್ಠ ಶಿಕ್ಷಕರಾಗಿ ದೇವಕ್ಕಿಗೌಡ್ರ ಅವರ ಹೊರ ಹೊಮ್ಮಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ವತಿಯಿಂದ ತಾಲೂಕಿನ ವಿವಿಧ ಶಿಕ್ಷಕರ ಸಂಘದಿಂದ ಹಾಗೂ ಅವರ ಶಿಷ್ಯ ಬಳಗದಿಂದ ನಿವೃತ್ತ ಶಿಕ್ಷಕ ಎಂ.ಎಂ. ದೇವಕ್ಕಿಗೌಡ್ರ ಅವರನ್ನು ಸನ್ಮಾನಿಸಲಾಯಿತು.ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಡಿ. ಯತ್ನಳ್ಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರು ಕೊಡ್ಲಿವಾಡ, ಹಿರಿಯ ಶಿಕ್ಷಕ ಬಿ.ಬಿ. ಕಟ್ಟಿಮನಿ, ಬಿ.ವಾಯ್. ಉಪ್ಪಾರ, ಎಂ.ಜಿ. ತಂಗೋಡ, ಎಫ್.ಸಿ. ಕಾಡಪ್ಪಗೌಡ್ರ, ಶಬ್ಬೀರ ಮನಿಯಾರ್, ಆರ್.ಆರ್. ಓಣಿಮನಿ, ನಾಗರಾಜ ಲಮಾಣಿ ಸೇರಿದಂತೆ ನಿವೃತ್ತ ನೌಕರರು, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಶಿಕ್ಷಕ, ಶಿಕ್ಷಕಿಯರು, ತಾಲೂಕಿನ ಶಿಕ್ಷಕರು, ನೌಕರರ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.