ಕನ್ನಡಪ್ರಭ ವಾರ್ತೆ ವಿಜಯಪುರ
ಪ್ರಶ್ನೆ ಪತ್ರಿಕೆಯನ್ನು ಎಷ್ಟೊತ್ತಿಗೆ ತೆಗೆದುಕೊಂಡು ಬರ್ತಾರೆ, ನಾನು ವಿಡಿಯೋ ಸಮೇತ ಟ್ವೀಟ್ ಮಾಡಿದ್ದೇನೆ. ಉದ್ದೇಶಪೂರ್ವಕವಾಗಿ ತಮಗೆ ಬೇಕಾದವರನ್ನು ನೇಮಕಾತಿ ಮಾಡಲು ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದ್ದಾರೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.ಪಿಡಿಒ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ವಿಳಂಬ, ಪ್ರತಿಭಟನಾನಿರತರ ಮೇಲೆ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಿಎಸ್ಐ ನೇಮಕಾತಿ ಹಗರಣ ಎಲ್ಲಿ ಹೋಯ್ತು?. ಪ್ರಿಯಾಂಕ ಖರ್ಗೆ ಎಷ್ಟು ಜಿಗದಾಡುತ್ತಿದ್ದರು. ಈಗೇಕೆ ಪಿಎಸ್ಐ ಹಗರಣದ ಬಗ್ಗೆ ಪ್ರಿಯಾಂಕ ಖರ್ಗೆ ಮಾತನಾಡುತ್ತಿಲ್ಲ?. ಇದರಲ್ಲಿ ಪ್ರಿಯಾಂಕ ಖರ್ಗೆ ಕೈ ಇರಬೇಕು ಅಂತ ನನಗೆ ಅನ್ನಿಸುತ್ತಿದೆ. ಪ್ರಿಯಾಂಕ ಖರ್ಗೆ ಅವರಿಗೆ ಸೇರಿದವರು ನೇಮಕಾತಿ ಆಗಿದ್ದಾರೆ ಅಂತ ನಮಗೂ ಗೊತ್ತಿದೆ. ಅದಕ್ಕೆ ಈಗ ಪ್ರಿಯಾಂಕ ಖರ್ಗೆ ಸುಮ್ಮನಿದ್ದಾರೆ. ₹150ಕೋಟಿಯದ್ದು ಈಗ ಎಬ್ಬಿಸಿಕೊಂಡಿದ್ದಾರೆ. ಇದನ್ನು ತನಿಖೆ ಮಾಡಲ್ಲ, ತನಿಖೆಗೆ ಕೊಡಲ್ಲ ಸುಮ್ಮನೆ ಸಬ್ ಗೋಲ್ಮಾಲ್ ಹೈ ಎಂದರು.ಒಂದು ಸೂತ್ರ ಕಂಡು ಹಿಡಿದಿದ್ದೀವಿ:ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಲು ಅಹಿಂದ ಮುಖಂಡರು ಕೈ ಕಡಿಯುತ್ತೇವೆ ಎಂದು ವಿರೋಧ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ನಾವು 2ಎ ಮೀಸಲಾತಿ ಕೇಳಿಯೇ ಇಲ್ಲ. 2ಎ ಪ್ರಸ್ತಾವನೆ ಮಾಡಿದ್ದು ಆಗ ಕಾಂಗ್ರೆಸ್‌ನ ಮಾಜಿ ಶಾಸಕ, ಈಗ ಹಾಲಿ ಶಾಸಕ. ನಾವು ಮೊದಲಿನಿಂದಲೂ 2ಎ ಬೇಡ ಅದರಲ್ಲಿ 104 ಜಾತಿಗಳಿವೆ, ಅವರ ಹಕ್ಕನ್ನು ಕಸಿದುಕೊಳ್ಳಲು ನಾವು ತಯಾರಿಲ್ಲ. ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ, ಶೋಭಾ ಕರಂದ್ಲಾಜೆ, ಬೊಮ್ಮಾಯಿ ಸೇರಿ ಒಂದು ಸೂತ್ರ ಕಂಡು ಹಿಡಿದಿವಿ. ಸಿಎಂ ಹೇಳ್ತಾರೆ ಮೀಸಲಾತಿ ಸಂವಿಧಾನ ವಿರೋಧಿ ಅಂತಾರೆ. ಆ ಪುಣ್ಯಾತ್ಮರು ಮುಸ್ಲಿಂರಿಗೆ ಶೇ. 4 ಮೀಸಲಾತಿ ಕೊಟ್ಟಿರೋದೆ ಸಂವಿಧಾನ ವಿರೋಧಿ. ಸಿಎಂ, ವಕೀಲರಾದವರಿಗೆ ಸಂವಿಧಾನ ಗೊತ್ತಿಲ್ಲ. ನೀವು ಮುಸ್ಲಿಂರಿಗೆ ಶೇ. 4ರಷ್ಟು ಯಾಕೆ ಕೊಟ್ಟಿದ್ದೀರಿ?. ಆಂಧ್ರ , ಪಶ್ಚಿಮ ಬಂಗಾಳ ಹೈಕೋರ್ಟ್‌ನಲ್ಲಿ ಮುಸ್ಲಿಂರಿಗೆ ಮೀಸಲಾತಿ ಅಸಂವಿಧಾನಿಕವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಜಸ್ಟಿಸ್ ಗವಾಯಿ ಪೀಠ ಸ್ಪಷ್ಟಪಡಿಸಿದೆ. ಮುಸ್ಲಿಂರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಬರಲ್ಲ, ನೀವು ಹೇಗೆ ಕೊಟ್ಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.ಮುಸ್ಲಿಂರಿಗೆ ಕೊಟ್ಟ ಮೀಸಲಾತಿ ರದ್ದು ಮಾಡಲೇಬೇಕು. ದೇವೇಗೌಡರು ಒಕ್ಕಲಿಗರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ನಮ್ಮ ಲಿಂಗಾಯತರು 3ಬಿ ಯಲ್ಲಿತ್ತು, ಲಿಂಗಾಯತರು ಕೆಲವೊಂದು 2ಎ ನಲ್ಲಿದ್ದರು. ಮೋದಿ, ಅಮಿತ್ ಷಾ ನಾವೆಲ್ಲರೂ ಸೇರಿ ಮುಸ್ಲಿಮರಿಗೆ ಕೊಟ್ಟ ಮೀಸಲಾತಿ ತೆಗೆದು ಹಾಕಿ. ಒಕ್ಕಲಿಗರ ಇಡೀ ಸಮುದಾಯಕ್ಕೆ ಶೇ.6 ಮೀಸಲಾತಿ ಮಾಡಿದರು. ಲಿಂಗಾಯತರು, ವೀರಶೈವ ಲಿಂಗಾಯತರು, ಮರಾಠರು, ಜೈನರು, ಕುರುಬ, ವೈಷ್ಣವರು ಕ್ರಿಶ್ಚಿಯನ್‌ರು ಸೇರಿ ಶೇ.7ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಕೇವಲ ಪಂಚಮಸಾಲಿಯವರಿಗೆ ಕೊಟ್ಟಿಲ್ಲ. ಶೇ.7ರ ಮೀಸಲಾತಿಯಲ್ಲಿ 40 ಜಾತಿಗಳಿವೆ. 2ಡಿಯಲ್ಲಿ ನಾಲ್ಕು ಜಾತಿ ಬರುತ್ತವೆ, 2ಸಿಯಲ್ಲಿ ಒಕ್ಕಲಿಗರು ಸೇರಿ 67ಜಾತಿಗೆ ಮೀಸಲಾತಿ. 2ಎ ಮೀಸಲಾತಿಯಲ್ಲಿರೋ 104ಸಮಾಜಕ್ಕೆ ಅನ್ಯಾಯ ಮಾಡಲು ನಾವು ತಯಾರಿಲ್ಲ. ನಮ್ಮದೆ ಒಂದು ಬಕೆಟ್ ಬೇರೆ ಮಾಡಿದ್ದೀವಿ. ಶೇ.7ರಷ್ಟು ಮೀಸಲಾತಿ 2ಡಿ ಕೇವಲ ಪಂಚಮಸಾಲಿಯವರಿಗಲ್ಲ. ಶೇ.7ರ ಮೀಸಲಾತಿಯಲ್ಲಿ ನಾವೆಲ್ಲ ಹಂಚಿಕೊಂಡು ತಿಂತಿವಿ. ಕೈ ಕಾಲು ಕಡಿಯುವ ಹೇಳಿಕೆಗೆ ಸಿದ್ದರಾಮಯ್ಯರು ಪ್ರಚೋದಿಸುವುದು ಸರಿಯಲ್ಲ ಎಂದರು.ಸಿದ್ದರಾಮಯ್ಯ ಮೀಸಲಾತಿ ಕೊಡುವುದಿಲ್ಲ, ಇನ್ಮುಂದೆ ಸಿದ್ದರಾಮಯ್ಯ ಬಳಿ ಮೀಸಲಾತಿ ಬೇಡಲು ನಾವು ಹೋಗಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಂರ ಮೀಸಲಾತಿ ಚರ್ಚೆ ನಡೆದಿದೆ. ಮುಸ್ಲಿಂ ಮೀಸಲಾತಿ ರದ್ದಾದರೆ ಆ ಮೀಸಲಾತಿ 2ಸಿ, 2ಡಿಗೆ ಬರುತ್ತೆ. ಯಾವ ಕಾಲಕ್ಕೂ ನಾವು 2ಎ ಮೀಸಲಾತಿಗೆ ಹೋಗಲ್ಲ ಬೇಡಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನಮ್ಮ ಸರ್ಕಾರ ಬಂದರೆ ಹದಿನೈದು ನಿಮಿಷಕ್ಕೆ ಕೊಡಿಸ್ತೀನಿ ಅಂತ ಕಾಂಗ್ರೆಸ್ ಶಾಸಕ ಹೇಳಿದ್ದ. ಅವಾ ಇನ್ನು ಬಹಳ ಆಶ್ವಾಸನೆ ಕೊಟ್ಟಿದ್ದಾನೆ. ಪೂರ್ತಿ ಶೇ.15 ಮೀಸಲಾತಿ ಪಂಚಮಸಾಲಿ ಸಮಾಜಕ್ಕೆ ಕೊಡಿಸ್ತೀನಿ ಅಂದಿದ್ದಾನೆ ಎಂದು ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೇ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮೊದಲಿನ ಕ್ಲಿಪ್ಪಿಂಗ್ ನೋಡಿ. ಪ್ರಾಣ ಹೋಗಲಿ ಎಂದು ಭಾಷಣ ಮಾಡಿದ್ದಾರೆ, ಪ್ರಾಣ ಯಾರಿಗೆ ಬೇಕು ಎಂದು ಯತ್ನಾಳ ಟೀಕಿಸಿದರು.
ಕೋಟ್‌ಬಿಜೆಪಿಯವರದ್ದು 40 ಪರ್ಸೆಂಟ್ ಅಂದ್ರಿ ಎಲ್ಲಿ ಹೋಯಿತು?. ನಿಮ್ಮದು 90 ಪರ್ಸೆಂಟ್ ಆಗಿದೆ. ಬೆಂಗಳೂರಿನಲ್ಲಿ ಕಸ ವಿಲೇವಾರಿಯದ್ದು ಇನ್ನೊಂದು ಹಗರಣವಿದೆ. ಕಸವಿಲೇವಾರಿಯದು ₹ 30 ಸಾವಿರ ಕೋಟಿ ಹಗರಣವಿದೆ, ಎಲ್ಲಾ ದಾಖಲೆಗಳಿವೆ. ಇನ್ನೊಂದು ವಾರ ತಡೆಯಿರಿ ಕಾಂಗ್ರೆಸ್ ಸರ್ಕಾರದ ಹಗರಣ ಬಯಲು ಮಾಡುತ್ತೇನೆ.ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕಬಾಕ್ಸ್ಹಗರಣದ ಬಗ್ಗೆ ಕ್ಯಾಬಿನೆಟ್‌ನಲ್ಲಿ ನಿರ್ಣಯಿಸಿಅನ್ವರ್ ಮಾಣಿಪ್ಪಾಡಿಗೆ ವಕ್ಫ್ ಆಸ್ತಿ ಕಬಳಿಕೆ ವಿಚಾರವಾಗಿ ವಿಜಯೇಂದ್ರ ₹ 150ಕೋಟಿ ಆಮಿಷ ಸಿಬಿಐಗೆ ವಹಿಸುವಂತೆ ಸಿದ್ದರಾಮಯ್ಯ ಪತ್ರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ, ಇಡಿ ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತದೆ ಎಂದು ಸಿದ್ದರಾಮಯ್ಯ ಬೊಬ್ಬೆ ಹಾಕುತ್ತಾರೆ. ಸಿಬಿಐಗೆ ಕೊಡಿ ಅಂತ ಓರ್ವ ಮುಖ್ಯಮಂತ್ರಿಯಾಗಿ ಪ್ರಧಾನಿಗಳಿಗೆ ಪತ್ರ ಬರೆಯುತ್ತಾರೆ. ಸಿಎಂಗೆ ಅಧಿಕಾರ ಇದೆಯಲ್ವಾ?, ಸಿದ್ದರಾಮಯ್ಯ ಸಿಬಿಐಗೆ ಪತ್ರ ಬರೆಯಲಿ. ಹಗರಣ ಹೇಗೆ ಆಗಿದೆ ಅಂತ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡಲಿ. ರಾಜ್ಯ ಸರ್ಕಾರ ರೆಕ್ಮೆಂಡೇಷನ್ ಮಾಡಿದರೂ ಸಿಬಿಐ ಬರ್ತಾರೆ. ಸಿಬಿಐ, ಇಡಿ, ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳ ಮೇಲೆ ನಿಮಗೆ ವಿಶ್ವಾಸ ಇಲ್ಲ. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಅಪವಾದ ಮಾಡುತ್ತೀರಿ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಖರ್ಗೆ ಅಪವಾದ ಮಾಡುತ್ತಾರೆ. ಇಷ್ಟು ದಿನ ಸಿಬಿಐ ಬಿಜೆಪಿ ಕೈಗೊಂಬೆ ಅಂತಿದ್ರಿ. ₹ 150 ಕೋಟಿ ಬಗ್ಗೆ ಏನು ದಾಖಲೆಗಳಿವೆ ಕೊಡಲಿ. ಬಿಜೆಪಿಯವರು ಏನೇನು ಅವ್ಯವಹಾರ ಮಾಡಿದ್ದಾರೆ ತನಿಖೆ ಮಾಡಿ ಎಂದು ಒತ್ತಾಯಿಸಿದರು.