ಸರ್ಕಾರಿ ಶಾಲೆಗಳ ಉಳಿಸಿ, ಬೆಳೆಸಿ ಅಭಿಯಾನದಡಿ ಶಾಲೆಗಳಿಗೆ ಬಣ್ಣ ಸುಣ್ಣ ಹಚ್ಚಿ, ಹೊಸ ಬೆಳಕು ನೀಡಿದ್ದಾರೆ: ನೀಲಮ್ಮ ಮಲ್ಲೆ ಕನ್ನಡಪ್ರಭ ವಾರ್ತೆ ಯಾದಗಿರಿ
ಸಹೃದಯಿ ಕನ್ನಡಿಗರು ತಂಡದ ನಾಯಕ ಭಾಸ್ಕರ್ ಕೆ. ಮಾತನಾಡಿ, ಸರ್ವರು ಸಾರ್ವಜನಿಕ ಶಿಕ್ಷಣವನ್ನು ಪಡೆಯಬೇಕು. ಕನ್ನಡ ಶಾಲೆ ಮರೆಮಾಚಿ ಹೋಗುತ್ತಿವೆ. ಆ ಸರಕಾರಿ ಶಾಲೆಯಲ್ಲಿ ಶ್ರಮಿಕರ ಮಕ್ಕಳು, ಮಧ್ಯಮ ವರ್ಗದ ಮಕ್ಕಳು, ಕೃಷಿಕರ ಮಕ್ಕಳು ಓದುತ್ತಿದ್ದರು. ನಮ್ಮ ಸಹೃದಯಿ ಕನ್ನಡಿಗರು ತಂಡದಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಸರ್ಕಾರಿ ಶಾಲೆ, ಉಳಿಸಿ ಅಭಿಯಾನ ಮತ್ತು ಸಂಕಲ್ಪ ಸೇವೆ ಸಂತೃಪ್ತಿ ಪಡಿಸುವ ನಿಟ್ಟಿನಲ್ಲಿ ಸೇವೆ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಹೃದಯಿ ಕನ್ನಡಿಗರು ತಂಡದ ಮೆಟ್ರೋ ರೈಲ್ವೆ ವಿಭಾಗ ಅಭಿಯಂತರಾದ ಹರೀಶ ಜಿ., ರಘುಕುಮಾರ, ರಾಜೇಶ ಎಂ., ಸರ್ಕಾರಿ ಶಾಲೆಯ ಮುಖ್ಯ ಗುರುಗಳಾದ ಸುವರ್ಣ ರಾಥೋಡ್, ಬಸವರಾಜ್ ಮಲ್ಲೆ, ರಮೇಶ ಮತ್ತು ಹಳೆ ವಿದ್ಯಾರ್ಥಿಗಳು ಹಾಗೂ ಯುವಕರು ಪಾಲ್ಗೊಂಡಿದ್ದರು.
ಮೂಲಭೂತ ಸೌಕರ್ಯಗಳು ಸಿಗದ, ಕೂಲಿ ಕಾರ್ಮಿಕರು ಓದುತ್ತಿರುವ ಸರ್ಕಾರಿ ಶಾಲೆಗಳಿಗೆ ನಮ್ಮ ತಂಡದಿಂದ ಸುಣ್ಣ ಬಣ್ಣ ಮಾಡಿಕೊಡುತ್ತೇವೆ. ಸರ್ಕಾರ ತನ್ನಷ್ಟಕ್ಕೆ ತಾನು ಮಾಡುತ್ತಾ ಹೋಗುತ್ತಿದೆ. ಆದರೂ ಕೆಲವೊಂದು ಕಡೆ ಮಕ್ಕಳಿಗೆ ಶಿಕ್ಷಣದ ತೊಂದರೆ ಆಗಬಾರದು ಎಂದು ನಾವೆಲ್ಲ ಸರ್ಕಾರಿ ನೌಕರರು ಸೇರಿ ಸಮಾಜ ಸೇವೆ ಮಾಡಲು ಪ್ರಾರಂಭಿಸಿದ್ದೇವೆ.ಚರಣ್ ಕುಮಾರ್, ವಿಭಾಗ ಅಭಿಯಂತರರು, ಮೆಟ್ರೋ ರೈಲ್ವೆ, ಬೆಂಗಳೂರು.
ಸಹೃದಯಿ ಕನ್ನಡಿಗರು ತಂಡದಿಂದ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದೇ, ಉತ್ತರ ಕರ್ನಾಟಕಕ್ಕೂ ಸಹಿತ ಸೇವೆಯನ್ನು ಸಲ್ಲಿಸುತ್ತೇವೆ. ದಕ್ಷಿಣ ಕರ್ನಾಟಕದಲ್ಲಿ ಒಂದು ಸರ್ಕಾರಿ ಶಾಲೆಯಲ್ಲಿ 18 ರಿಂದ 20 ಮಕ್ಕಳಿದ್ದರೆ , ಉತ್ತರ ಕರ್ನಾಟಕ ಸರ್ಕಾರಿ ಶಾಲೆಯಲ್ಲಿ 50 ರಿಂದ 60 ಮಕ್ಕಳಿರುತ್ತಾರೆ. ಆದರೆ ಮೂಲಭೂತ ಸೌಕರ್ಯಗಳಿಲ್ಲದೆ ವಂಚಿತರಾದ ವಿದ್ಯಾರ್ಥಿಗಳು, ಶ್ರಮಿಕ ಕೂಲಿ ಕಾರ್ಮಿಕ ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರೆಯಬೇಕು ಎಂದು ಮೆಟ್ರೋ ರೈಲ್ವೆ ಬೆಂಗಳೂರು ಕಿರಿಯ ಅಭಿಯಂತರರಾದ ಶಿವಪ್ರಕಾಶ್ ಆರ್. ಹೇಳಿದರು.