ಏಡ್ಸ್‌ ಬಗ್ಗೆ ಭಯಕ್ಕಿಂತ ಮುಂಗಾಗ್ರತೆ ಇರಬೇಕು

KannadaprabhaNewsNetwork | Published : Dec 4, 2023 1:30 AM

ಸಾರಾಂಶ

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ್ ಜಿ.ಎಸ್ ಮಾತನಾಡಿ,ಏಡ್ಸ್ನಂತಹ ಮಾರಕ ರೋಗವನ್ನು ನಿರ್ಮೂಲನೆ ಮಾಡಲು ರೋಗದ ಕುರಿತು ಅರಿವು,ವಿಚಾರ ಮಂಥನಗಳನ್ನು ನಿಯಮಿತವಾಗಿ ಏರ್ಪಡಿಸಬೇಕು.ಜನತೆಗೆ ಎಚ್ಚರಿಕೆ,ಮುಂಜಾಗ್ರತೆ,ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕಾಗಿದೆ.ಇಂದಿನ ಯುವ ಜನತೆಯಲ್ಲಿ ರೋಗ ಹೆಚ್ಚು ಕಂಡುಬರುತ್ತಿರುವುದು ವಿಷಾನೀಯ.ಶೇ 1.5 ಮಿಲಿಯನ್ ಜನತೆಯಲ್ಲಿ 14 ವರ್ಷದೊಳಗಿನ ಮಕ್ಕಳು ರೋಗಕ್ಕೆ ತುತ್ತಾಗುತ್ತಿರುವು ತೀವ್ರ ಆತಂಕದ ಸಂಗತಿಯಾಗಿದೆ.ಆದ್ದರಿಂದ ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಭಯಮುಕ್ತರನ್ನಾಗಿಸುವುದು ತುರ್ತು ಅಗತ್ಯವಾಗಿದೆ.ಆಧುನಿಕತೆಯ ನೆಪದಲ್ಲಿ ನಡೆಯುವ ರೇವಾ ಪಾರ್ಟಿ ಆಚರಣೆಗಳಿಂದ ಏಡ್ಸ್ ಕಾಯಿಲೆ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಏಡ್ಸ್ ಸಾಂಕ್ರಾಮಿಕ ಕಾಯಿಲೆ ಅಲ್ಲ. ಈ ಬಗ್ಗೆ ಭಯ ಬೇಡ. ಆದರೆ ಮುಂಜಾಗ್ರತೆ ವಹಿಸುವಲ್ಲಿ ನಿರ್ಲಕ್ಷಿಸಿದಲ್ಲಿ ಸಮಾಜದಲ್ಲಿ ವ್ಯಾಪಕವಾಗಿ ಹರಡಲಿದೆ ಎಂದು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಸಂದರ್ಶಕ ಚಂದ್ರಶೇಖರ ಬಿ.ಕೆ. ಎಚ್ಚರಿಸಿದರು.

ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ,ಐಕ್ಯೂಎಸಿ ಸಹಯೋಗದಲ್ಲಿ ಯುವ ರೆಡ್‌ಕ್ರಾಸ್, ವಿಜ್ಞಾನ ಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಡಿ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಏಡ್ಸ್ ಮಾರಣಾಂತಿಕ ರೋಗವಾಗಿದ್ದು, ಅಂಟುರೋಗವಲ್ಲ. ಭಯಪಡುವ ಅವಶ್ಯಕತೆ ಇಲ್ಲ. ಆದರೆ ಇದರ ಬಗೆಗೆ ಮುಂಜಾಗ್ರತೆ ವಹಿಸುವುದು ಅತ್ಯಂತ ಅಗತ್ಯ. 1981ರಲ್ಲಿ ಅಮೆರಿಕಾದಲ್ಲಿ ಪ್ರಥಮ ಬಾರಿಗೆ ಪತ್ತೆಯಾದ ಏಡ್ಸ್ 1986ರಲ್ಲಿ ಭಾರತಕ್ಕೆ,1987ರಲ್ಲಿ ಕರ್ನಾಟಕದಲ್ಲಿ ಪತ್ತೆಯಾಗಿದ್ದು, ಇದೀಗ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡಿರುವುದು ಅತ್ಯಂತ ವಿಷಾದನೀಯ. ರಾಜ್ಯದಲ್ಲಿ ಬೆಳಗಾವಿಯಲ್ಲಿ ಏಡ್ಸ್ ರೋಗಿಯನ್ನು ಪ್ರಥಮವಾಗಿ ಗುರುತಿಸಲಾಗಿದ್ದು, ಅಸುರಕ್ಷತೆಯ ಲೈಂಗಿಕತೆ, ರಕ್ತಸ್ರಾವ, ಸಂಸ್ಕರಿಸದ ಸೂಜಿ, ಸಿರಿಂಜ್‌ಗಳನ್ನು ಪದೇಪದೇ ಬಳಸುವುದರಿಂದ ರೋಗವು ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಶಿವಕುಮಾರ್ ಜಿ.ಎಸ್ ಮಾತನಾಡಿ,ಏಡ್ಸ್ನಂತಹ ಮಾರಕ ರೋಗವನ್ನು ನಿರ್ಮೂಲನೆ ಮಾಡಲು ರೋಗದ ಕುರಿತು ಅರಿವು,ವಿಚಾರ ಮಂಥನಗಳನ್ನು ನಿಯಮಿತವಾಗಿ ಏರ್ಪಡಿಸಬೇಕು.ಜನತೆಗೆ ಎಚ್ಚರಿಕೆ,ಮುಂಜಾಗ್ರತೆ,ಚಿಕಿತ್ಸೆ ಬಗ್ಗೆ ಸೂಕ್ತ ಮಾಹಿತಿ ನೀಡಬೇಕಾಗಿದೆ.ಇಂದಿನ ಯುವ ಜನತೆಯಲ್ಲಿ ರೋಗ ಹೆಚ್ಚು ಕಂಡುಬರುತ್ತಿರುವುದು ವಿಷಾನೀಯ.ಶೇ 1.5 ಮಿಲಿಯನ್ ಜನತೆಯಲ್ಲಿ 14 ವರ್ಷದೊಳಗಿನ ಮಕ್ಕಳು ರೋಗಕ್ಕೆ ತುತ್ತಾಗುತ್ತಿರುವು ತೀವ್ರ ಆತಂಕದ ಸಂಗತಿಯಾಗಿದೆ.ಆದ್ದರಿಂದ ಸಮುದಾಯದಲ್ಲಿ ಹೆಚ್ಚು ಜಾಗೃತಿ ಮೂಡಿಸಿ ಭಯಮುಕ್ತರನ್ನಾಗಿಸುವುದು ತುರ್ತು ಅಗತ್ಯವಾಗಿದೆ.ಆಧುನಿಕತೆಯ ನೆಪದಲ್ಲಿ ನಡೆಯುವ ರೇವಾ ಪಾರ್ಟಿ ಆಚರಣೆಗಳಿಂದ ಏಡ್ಸ್ ಕಾಯಿಲೆ ಹೆಚ್ಚಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಗೂ ದ್ವಿತೀಯ ಸೆಮಿಸ್ಟರ್ರ್‌ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಅಮೃತ ಪ್ರಾರ್ಥಿಸಿ,ಸ್ವಾತಿ ಸ್ವಾಗತಿಸಿ,ನಾಗಶ್ರೀ ನಿರೂಪಿಸಿ,ನಿಶಾ ವಂದಿಸಿದರು.

- - -

ಕೋಟ್‌ಹೆರಿಗೆಯ ಸಮಯದಲ್ಲಿ ಮಗುವಿಗೆ ರೋಗ ಕಂಡುಬಂದಲ್ಲಿ 45 ದಿನಗಳವರೆಗೆ ನೆರೋವಿನ್ ಸಿರಪ್ಪನ್ನು ಸತತ 6 ತಿಂಗಳು, 1 ವರ್ಷ, 1 ವರ್ಷ 6ತಿಂಗಳವರೆಗೆ ರೋಗನಿರೋಧಕ ಔಷಧಗಳನ್ನು ನೀಡಬೇಕು. ಜಗತ್ತಿನಲ್ಲಿ ಭಾರತ 23ನೇ, ಕರ್ನಾಟಕ 9 ನೇ, ಜಿಲ್ಲೆ 27ನೇ, ತಾಲೂಕು 3ನೇ ಸ್ಥಾನ ಪಡೆದಿರುವುದು ಶೋಚನೀಯ

- ಚಂದ್ರಶೇಖರ ಬಿ.ಕೆ., ಐಸಿಟಿಸಿ ಸಂದರ್ಶಕ

- - - -2ಕೆಎಸ್.ಕೆಪಿ2:

ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಸಂದರ್ಶಕ ಚಂದ್ರಶೇಖರ ಬಿ.ಕೆ ಉದ್ಘಾಟಿಸಿದರು.

Share this article