ಸಮಾಜ ಒಳಿತಿಗೆ ಶ್ರಮಿಸಿದವರ ಗೌರವಿಸಬೇಕು

KannadaprabhaNewsNetwork | Published : Dec 4, 2023 1:30 AM

ಸಾರಾಂಶ

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾಗೋಡು ತಿಮ್ಮಪ್ಪ ಮತ್ತು ಹರನಾಥ ರಾವ್ ಸಮಾಜದ ಅವಶ್ಯಕತೆ, ಆದ್ಯತೆ, ಭವಿಷ್ಯದ ಆಗುಹೋಗುಗಳ ಬಗ್ಗೆ ಚಿಂತಿಸಿ ಹೋರಾಟ ಸೇರಿದಂತೆ ವಿವಿಧ ಸ್ತರದ ಮೂಲಕ ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಮಾಡಿದ್ದಾರೆ. ಇಂತಹ ಹಿರಿಯರನ್ನು ಪಕ್ಷ ಜಾತಿ ಬೇಧವಿಲ್ಲದೆ ಗೌರವಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಸಾಗರ ಸಮಾಜದ ಒಳಿತಿಗಾಗಿ ಅವಿರತ ತೊಡಗಿಸಿಕೊಂಡು ಹೋರಾಟದ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ ಹಿರಿಯರ ಸಾಧನೆಯನ್ನು ಪಕ್ಷಬೇಧವಿಲ್ಲದೇ ಗುರುತಿಸಿ, ಗೌರವಿಸುವುದು ಆಡಳಿತದ ಕರ್ತವ್ಯ ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹೇಳಿದರು.

ತಾಲೂಕಿನ ಮತ್ತಿಕೊಪ್ಪದಲ್ಲಿ ಶುಕ್ರವಾರ ಮತ್ತಿಕೊಪ್ಪ, ಬ್ರಾಹ್ಮಣ ಚಿತ್ರಟ್ಟೆ, ದೊಂಬೆಸರ, ಕಲ್ಕೊಪ್ಪ, ಕೇಡಲಸರ ಸುತ್ತಮುತ್ತಲಿನ ಗ್ರಾಮಸ್ಥರು ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹರನಾಥ ರಾವ್ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಎಂ.ಹರನಾಥ ರಾವ್ ಕ್ಯಾಮ್ಕೋ, ಆಫ್‌ಕೋಸ್‌ನಂಥ ಸಹಕಾರಿ ಸಂಸ್ಥೆ ಪ್ರಾರಂಭಿಸಿ ಬೆಳೆಗಾರರು ಸಂಕಷ್ಟದಲ್ಲಿದ್ದಾಗ ಅವರ ನೆರವಿಗೆ ಧಾವಿಸಿದ್ದಾರೆ. ಭೂಹೀನರಿಗೆ ಭೂಮಿಹಕ್ಕು ಕೊಡಿಸುವ ಹೋರಾಟದಲ್ಲಿ ಕಾಗೋಡು ತಿಮ್ಮಪ್ಪ ಅವರು ಮಾಡಿದ ಕೆಲಸ ಸಮಾಜ ಯಾವತ್ತೂ ಮರೆಯಬಾರದು. ಕಾಗೋಡು ತಿಮ್ಮಪ್ಪ ಮತ್ತು ಎಂ.ಹರನಾಥ ರಾವ್ ಸೇವೆ ಯುವಸಮೂಹಕ್ಕೆ ಆದರ್ಶವಾಗಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕಾಗೋಡು ತಿಮ್ಮಪ್ಪ ಮತ್ತು ಹರನಾಥ ರಾವ್ ಸಮಾಜದ ಅವಶ್ಯಕತೆ, ಆದ್ಯತೆ, ಭವಿಷ್ಯದ ಆಗುಹೋಗುಗಳ ಬಗ್ಗೆ ಚಿಂತಿಸಿ ಹೋರಾಟ ಸೇರಿದಂತೆ ವಿವಿಧ ಸ್ತರದ ಮೂಲಕ ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಮಾಡಿದ್ದಾರೆ. ಇಂತಹ ಹಿರಿಯರನ್ನು ಪಕ್ಷ ಜಾತಿ ಬೇಧವಿಲ್ಲದೆ ಗೌರವಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅಭಿನಂದನಾ ಭಾಷಣ ಮಾಡಿದರು. ಸಿ.ಎಸ್. ಲಿಂಗರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್. ಜಯಂತ್, ಕಾಂತ್ರಿ ಗೋವಿಂದರಾವ್, ಎಂ.ವೆಂಕಟಗಿರಿ ರಾವ್, ರಾಧಾಕೃಷ್ಣ, ಪ್ರಭಾಕರ್, ಡಾ. ಎಚ್.ಎಂ. ಶಿವಕುಮಾರ್, ಎಸ್.ಬಿ. ಮಹಾದೇವ್, ವೆಂಕಟೇಶ್ ಕವಲಕೋಡು, ಪ್ರಭು ಚಿತ್ರಟ್ಟೆಮಠ ಇನ್ನಿತರರು ಹಾಜರಿದ್ದರು.

- - - -2ಕೆ.ಎಸ್.ಎ.ಜಿ.2:

ಮತ್ತಿಕೊಪ್ಪದಲ್ಲಿ ಅಭಿನಂದನಾ ಸಮಾರಂಭದಲ್ಲಿ ಹಲವು ಗಣ್ಯರನ್ನು ಗೌರವಿಸಲಾಯಿತು.

Share this article