ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ನಕಲಿ ಅಬ್ದುಲ್ ಕಲಾಂ ಸಂಸ್ಥೆಗೆ ಡಿಡಿಪಿಐ ನೀಡಿದ ಆದೇಶ ನಂಬಿ ಕೆಲಸ ಸಿಗುತ್ತೆ ಎಂದು ಲಕ್ಷಾಂತರ ರು. ನೀಡಿ ಮೋಸ ಹೋದವರು ನ್ಯಾಯಕ್ಕಾಗಿ ಆಗ್ರಹಿಸಿ ಇಲ್ಲಿನ ಪೊಲೀಸ್ ಠಾಣೆಗೆ ಶನಿವಾರ ಜಮಾಯಿಸಿದದರು.ಅಗರದ ಕೃಷ್ಣ, ಬಸ್ತಿಪುರದ ಶ್ರೀಕಂಠು, ಸುಂದರ್ ಅವರಿಗೆ ಹಣ ನೀಡುವಂತೆ ಒತ್ತಾಯಿಸಲಾಯಿತು. ಈ ವೇಳೆ ಪೊಲೀಸ್ ಠಾಣೆಯಲ್ಲಿ ಸತೀಶ್ ಪಟಗಾರ್ ಪ್ರತಿಯೊಬ್ಬರಿಗೂ ₹1 ಲಕ್ಷ ನೀಡುತ್ತಾರೆ, ಉಳಿದ ಹೆಚ್ಚುವರಿ ಹಣವನ್ನು ನೀಡುತ್ತೇವೆ ಎಂದು ಒಪ್ಪಿಕೊಂಡಿದ್ದರು. ಎಎಸ್‌ಐ ಮಹದೇವಸ್ವಾಮಿ ಮಾತನಾಡಿ, ನೀವು ಒಪ್ಪಿಕೊಂಡಂತೆ ಹಣ ನೀಡಿ ಇಲ್ಲದಿದ್ದರೆ ಮುಂದಿನ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.4 ಮಂದಿಗೆ ಹಣ ಸಂದಾಯ:
ಅಂಜಲಿ, ದೀಪಾ, ಐಶ್ವರ್ಯ ಸೇರಿ 4 ಮಂದಿಗೂ ಎಎಸ್‌ಐ ಸಮ್ಮುಖದಲ್ಲಿ ಒಂದು ಲಕ್ಷದ ನಲವತ್ತು ಸಾವಿರ ರು. ಕೊಡಿಸಿ ನಾಲ್ಕು ದಿನದಲ್ಲಿ ಸತೀಶ್ ಕರೆ ತಂದು ಅವರಿಂದ ಮೋಸ ಹೋದವರಿಗೆಲ್ಲಾ ತಲಾ ಒಂದೊಂದು ಲಕ್ಷ ಕೊಡಿಸುವ ಭರವಸೆ ನೀಡಲಾಯಿತು.ರೈತ ಹೋರಾಟಗಾರ ಅಣಗಳ್ಳಿ ಬಸವರಾಜು ಮಾತನಾಡಿ, ಸದನದಲ್ಲಿ ಶಾಸಕ ಕೃಷ್ಣಮೂರ್ತಿ ನಕಲಿ ಕಲಾಂ ಸಂಸ್ಥೆ ಬಗ್ಗೆ ಮಾತನಾಡಿದ್ದಾರೆ. ನೊಂದವರು ಠಾಣೆಗೆ ಬಂದಿದ್ದಾರೆ. ಸಚಿವರು ಕ್ರಮ ಕೈಗೊಂಡು ನ್ಯಾಯ ನೀಡುವ ಭರವಸೆ ನೀಡಿದ್ದಾರೆ. ಆಗಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ, ಮಂಗಳವಾರ ನೊಂದವರ ಜೊತೆ ನಾವೆಲ್ಲರೂ ಡಿವೈಎಸ್ಪಿ ಕಚೇರಿಗೆ ನ್ಯಾಯಕ್ಕಾಗಿ ಬರುತ್ತೆವೆ, ಅಲ್ಲಿ ನ್ಯಾಯ ಸಿಗದಿದ್ದರೆ ನ್ಯಾಯಾಧೀಶರ ಮುಂದೆ ಹೋಗಿ ನ್ಯಾಯ ಕೇಳುತ್ತೇವೆ ಎಂದರು.ಪುಷ್ಪಾಪುರ ದೀಪ ಮಾತನಾಡಿ, ₹1,70,000 ನನ್ನಿಂದ ಕಲಾಂ ಸಂಸ್ಥೆಯವರು ಎಂದು ಹೇಳಿ ಡಿಡಿಪಿಐ ಆದೇಶ ಪಡೆದು
ನನಗೆ ಮೋಸ ಮಾಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬಂದಿದ್ದೇನೆ. ನಮಗೆ ಕೆಲಸ ಹಾಗೂಸಂಬಳ ಎರಡು ಬೇಕು, ಡಿಡಿಪಿಐ ಆದೇಶ ನಂಬಿ ಲಕ್ಷಾಂತರ ರು. ನೀಡಿ ಮೋಸ ಹೋಗಿದ್ದೇವೆ ಎಂದರು.. ಮೈಸೂರಿನ ದೀಪಿಕಾ ಮಾತನಾಡಿ, ಈ ದಿನವೂ ನನಗೆ ಸಂಬಳ ನೀಡುತ್ತೇನೆ ಎಂದು ಕೃಷ್ಣ ಎಂಬಾತ ನನ್ನಿಂದ
ಹಾಜರಾತಿ ಪುಸ್ತಕದ ದಾಖಲೆಯನ್ನು ಮೊಬೈಲ್ ನಲ್ಲಿ ಹಾಕಿಸಿಕೊಂಡರು. ₹1.50 ಲಕ್ಷ ಪಡೆಯುವಾಗ ಉತ್ಸಾಹದಿಂದಿದ್ದ ಈತ ಈಗ ನಮ್ಮ ಮೇಲೆ ಪ್ರಹಾರ ಮೂಲಕ ಭಯಪಡಿಸುತ್ತಿದ್ದಾನೆ. ಸಂಬಳ ಕೇಳಿದರೆ ಧಮಕಿ ಹಾಕುತ್ತಾರೆ. ಮಾಂಗಲ್ಯ ಸರ, ಓಲೆ ಇಟ್ಟು ಹಣ ನೀಡಿದ್ದೇವೆ ಎಂದರು.ರಾಮಾಪುರದ ಭಾನುಮತಿ ಮಾತನಾಡಿ, ನಮ್ಮ ಸಂಸ್ಥೆಗೆ ಡಿಡಿಪಿಐ ಆದೇಶ ನೀಡಿದ್ದಾರೆ. ನಿಮಗೆ ಸರ್ಕಾರಿ ಶಾಲೆಗಳಲ್ಲಿ ಕೆಲಸ ಕೊಡಿಸುತ್ತೆವೆ ಎಂದು ಆದೇಶ ತೋರಿಸಿ ನಂಬಿಸಿ ಒಂದೂವರೆ ಲಕ್ಷ ಪಡೆದು ಮೋಸ ಮಾಡಿದ್ದಾರೆ.ಹಾಗಾಗಿ ನಮಗೆ ಡಿಡಿಪಿಐ ಅವರ ಮದ್ಯ ಪ್ರವೇಶಿಸಿ ಹಣ, ಕೆಲಸ ಎರಡನ್ನೂ ಕೊಡಿಸಬೇಕು ಎಂದರು.