ಮರಿಯಮ್ಮನಹಳ್ಳಿಯಲ್ಲಿ 21ರಿಂದ ಮೂರು ದಿನ ನಾಣಿಕೇರಿ ಉತ್ಸವ

KannadaprabhaNewsNetwork |  
Published : Nov 21, 2025, 02:30 AM IST
-ಫೋಟೋವಿವರ- (19ಎಂಎಂಎಚ್‌1)  ಮರಿಯಮ್ಮನಹಳ್ಳಿಯಲ್ಲಿ ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ 2ನೇ ವರ್ಷದ ನಾಣಿಕೇರಿ ಉತ್ಸವ ಸ್ಥಳೀಯ ಮಾದರಿ ಶಾಲಾ ಆವರಣದಲ್ಲಿ ನ. 21,22 ಮತ್ತು 23 ರಂದು ಮೂರು ದಿನಗಳ ನಡೆಯಲಿರುವ ಕಲೋತ್ಸವದ ಆಹ್ವಾನ ಪತ್ರಿಕೆಗಳನ್ನು ಟ್ರಸ್ಟ್‌ನ ಮುಖಂಡರು ಪ್ರದರ್ಶಿಸಿದರು.  | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿಯಿಂದ ಶಾಲಾ ಆವರಣದರೆಗೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಮರಿಯಮ್ಮನಹಳ್ಳಿ: ಇಲ್ಲಿನ ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ 2ನೇ ವರ್ಷದ ನಾಣಿಕೇರಿ ಉತ್ಸವ ಸ್ಥಳೀಯ ಮಾದರಿ ಶಾಲಾ ಆವರಣದಲ್ಲಿ ನ. 21, 22 ಮತ್ತು 23 ರಂದು ಮೂರು ದಿನಗಳ ಕಲೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ ಎಂದು ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ. ರಹೆಮಾನ್‌ ತಿಳಿಸಿದರು.ಇಲ್ಲಿನ ಶಾಲಾ ಆವರಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನ.21ರಂದು ಮಧ್ಯಾಹ್ನ 2 ಗಂಟೆಗೆ ಮೊದಲ ದಿನ ಕಲೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ತಂಡಗಳ ಮೆರವಣಿಗೆಯು ಪಟ್ಟಣ ಪಂಚಾಯಿತಿಯಿಂದ ಶಾಲಾ ಆವರಣದರೆಗೆ ನಡೆಯಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಕಾರ್ಯಕ್ರಮ ಉದ್ಘಾಟಿಸುವರು. ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎ. ರೆಹಮಾನ್‌ ಸಮಾರಂಭದ ಅಧ್ಯಕ್ಷತೆ ವಹಿಸುವರು.

ವಿಶೇಷ ಆಹ್ವಾನಿತರಾಗಿ ಸಂಸದ ಈ.ತುಕಾರಾಂ, ಶಾಸಕ ಕೆ. ನೇಮರಾಜ್‌ ನಾಯ್ಕ, ಮಾಜಿ ಶಾಸಕ ಎಸ್‌. ಭೀಮಾನಾಯ್ಕ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಬಾಷಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಜಯನಗರ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಸಮಾಜ ಸೇವಕರಾದ ಶ್ಯಾಮ್ ರಾಜ್ ಸಿಂಗ್‌, ಜೈರಾಜ್‌ ಸಿಂಗ್‌, ಪಪಂ ಉಪಾಧ್ಯಕ್ಷ ಲಕ್ಷ್ಮೀ ರೋಗಾಣಿ ಮಂಜುನಾಥ ಸಭೆಯಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.

ನ.22ರಂದು ಶನಿವಾರ ಸಂಜೆ 6 ಗಂಟೆಗೆ ವಿವಿಧ ಶಾಲಾ ಮಕ್ಕಳ ನೃತ್ಯ ಕಾರ್ಯಕ್ರಮದಲ್ಲಿ ಚಿಣ್ಣರೋತ್ಸವ ನಡೆಯಲಿದೆ. ನಾಣಿಕೇರಿ ಯುವ ಸೋವಾ ಟ್ರಸ್ಟ್‌ನ ಗೌರವಾಧ್ಯಕ್ಷ ಕಾಸ್ಲಿ ಅಂಕ್ಲೇಶ್‌ ಸಮಾರಂಭದ ಅಧ್ಯಕ್ಷತೆ ವಹಿಸುವರು.

ಮುಖ್ಯಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಸಿಪಿಐ ವಿಕಾಸ ಲಮಾಣಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಬಿ. ಅಂಬಣ್ಣ, ಸ್ಥಳೀಯ ವೈದ್ಯೆ ಡಾ. ಮಂಜುಳಾ ಸೇರಿದಂತೆ ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಭಾಗವಹಿಸುವರು ಎಂದು ವಿವರಿಸಿದರು.

ನ.23ರಂದು ಸಂಜೆ 6 ಗಂಟೆಗೆ ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟ ಜೈದ್ ಖಾನ್‌ ಮತ್ತು ಕನ್ನಡ ಕೋಗಿಲೆ 2 ರ ವಿಚೇತ ಕಾಸಿಂ ಅಲಿ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮುಖ್ಯಅತಿಥಿಗಳಾಗಿ ಸ್ಥಳೀಯ ವೈದ್ಯರಾದ ಡಾ. ಪಿ. ವಿಜಯವೆಂಕಟೇಶ್‌, ಡಾ.ಸೋಮೇಶ್ವರ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತೆ ಡಾ. ಕೆ. ನಾಗರತ್ನಮ್ಮ , ರಂಗಭೂಮಿ ಕಲಾವಿದರಾದ ಎಸ್‌. ರೇಣುಕಮ್ಮ, ಎಚ್‌. ಮಂಜುನಾಥ, ಪಿಎಸ್‌ಐ ತಾರಾಬಾಯಿ, ರಾಮಕೃಷ್ಣ, ನಾಯ್ಕ ಸೇರಿದಂತೆ ಇತರರು ಭಾಗವಹಿಸುವರು.

ನಾಣಿಕೇರಿ ಯುವ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ ಕಾಸ್ಲಿ ಅಂಕ್ಲೇಶ್‌, ಟ್ರಸ್ಟ್‌ನ ಮುಖಂಡರಾದ ಆಕಾಶ್‌ ಪೂಜಾರ್‌, ಬಿ. ಅಂಜಿನಪ್ಪ, ಬಿ. ರಾಘವೇಂದ್ರ, ಪ್ರಹ್ಲಾದ್‌ ರಾವ್‌ ಎಲ್‌. ಪಿ. ತಿಮ್ಮರಾಜು, ಜಿ. ರಾಘವೇಂದ್ರ, ಮಾಳಗಿ ಪ್ರಕಾಶ್‌, ಟಿ. ಸದ್ದಂ ಹುಸೇನ್‌, ಬಿ. ಹುಲುಗಪ್ಪ, ಸೈಯದ್‌ ಮಸ್ಸೂರ್, ಬಿ. ಯರ್ರಿಸ್ವಾಮಿ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ