ಹೊಳೆಆಲೂರ: ಸಮೀಪದ ಮೆಣಸಗಿ ಲಿಂಗಬಸವೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆಯ 18 ನೇ ವಾರ್ಷಿಕೋತ್ಸವ 25 ರ ಮಂಗಳವಾರ ಪದವಿ ಪೂರ್ವ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಆವರಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಬದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ನೇತೃತ್ವವನ್ನು ಸಂಸ್ಥೆಯ ಗೌರವ ಅದ್ಯಕ್ಷರು ರತ್ನಮ್ಮತಾಯಿ ಹಿರೇಮಠ ವಹಿಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಶೋಕಜ್ಜಾ ಹಿರೇಮಠ ವಹಿಸುವರು. ಮುಖ್ಯ ಅತಿಥಿಗಳಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ನರಗುಂದ ಮಾಜಿ ಶಾಸಕ ಬಿ.ಆರ್.ಯಾವಗಲ್, ಬಿಜೆಪಿ ಯುವ ಧುರೀಣ ಉಮೇಶಗೌಡ ಪಾಟೀಲ, ನ್ಯಾಯಾಧೀಶೆ ಸುನಂದಾ ಹಿರೇಮಠ, ಸಂಸ್ಥೆಯ ಉಪಾಧ್ಯಕ್ಷ ರವೀಂದ್ರ ಹಿರೇಮಠ, ಕೆ.ಎಂ.ಸಿ ಹುಬ್ಬಳ್ಳಿಯ ಡಾ.ಎಸ್.ವಾಯ್. ಮಲ್ಕಿಪಾಟೀಲ, ಅತಿಥಿಗಳಾಗಿ ಸದಾನಂದ ಭಟ್, ದೀಪಕ್ ಸಿ.ಎಚ್, ಎಸ್.ಎನ್.ಹುಡೇದ, ಈರಣ್ಣ ದೇಸಾಯಿ, ಮಹೇಶ ಹೇರಕಲ್, ನೀಲಪ್ಪ ಹುಡೇದ, ಪುಂಡಲೀಕ ಅಸೂಟಿ, ಶಿವಕುಮಾರ ನೀಲಗುಂದ, ಸುಭಾಷ ಕಪ್ಪಲಿ, ದರಿಯವ್ವ ವಾಘ್ಮೊಡೆ, ವಾಯ್.ಜಿ.ಜಮ್ಮನಕಟ್ಟಿ, ಎಸ್.ಎಸ್. ಜಾಧವ ಸೇರಿದಂತೆ ಇತರರು ಇರುವರು.ಶಿಕ್ಷಣ ಸಂಸ್ಥೆ ಸ್ಥಾಪನೆ: ಸ್ಥಳೀಯ ಪ್ರೌಡ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಹೊಳೆಆಲೂರ, ಶಿರೋಳ, ನರಗುಂದ, ರೋಣ ಹೀಗೆ ಬೇರಡೆ ಹೋಗುವುದನ್ನು ಮನಗಂಡು ಪದವಿ ಪೂರ್ವ ಕಾಲೇಜು ಪ್ರಾರಂಭಿಸುವ ಸದುದ್ದೇಶದಿಂದ ಸ್ನೇಹಿತರು ಸೇರಿಕೊಂಡು ಲಿಂಗಬಸವೇಶ್ವರ ಗ್ರಾಮೀಣ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿದ್ದು, 2007 ರಲ್ಲಿ ಶ್ರೀ ಲಿಂಗಬಸವೇಶ್ವರ ಪದವಿ ಪೂರ್ವ ಕಾಲೇಜು ಪ್ರಾರಂಭ ಮಾಡಿದ್ದರು. ಇಲ್ಲಿಯ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಲಿತ ವಿದ್ಯಾರ್ಥಿಗಳಲ್ಲಿ ಪೋಲಿಸ್ ಇಲಾಖೆ ಸೇರಿ ವಿವಿಧ ಸರಕಾರಿ ಉದ್ಯೋಗಲ್ಲಿದ್ದಾರೆ ಅರೆಸರಕಾರಿ ಹುದ್ದೆಯಲ್ಲಿ ಕೆಲಸಗಳನ್ನು ಮಾಡುತ್ತಾ ಬದುಕು ರೂಪಿಸಿಕೊಂಡಿದ್ದಾರೆ. ಸುಸಜ್ಜಿತ ಕಟ್ಟಡ ಆಟದ ಮೈದಾನ, ಇಲ್ಲಿರುವ ಫೀಟೋಪಕರಣಗಳು ಶೈಕ್ಷಣಿಕ ವಾತಾವರಣಕ್ಕೆ ಸಾಕ್ಷಿಯಾಗಿವೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯೆ ನೀಡುತ್ತಿದ್ದು, 90% ಅಂಕ ಗಳಿಸಿದ್ದಾರೆ. ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ 6-7 ಬಾರಿ ಪ್ರತಿನಿಧಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. 2016 ಮತ್ತು 17 ರಲ್ಲಿ ಪ್ರಾರಂಭವಾದ ಓಂ ಸಾಯಿ ಇಂಗ್ಲೀಷ ಮೀಡಿಯಂ 8 ವರ್ಷಗಳಿಂದ ಶಿಕ್ಷಣ ಗುಣಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು, ಶಿಕ್ಷಣ ಸಂಸ್ಥೆಯ ಮೂಲಕ ಅನೇಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗಳಲ್ಲಿ ಪ್ರೇರಿಪಿಸುವ ಕಾರ್ಯಗಳನ್ನು ಹಮ್ಮಿಕೊಂಡಿದೆ.2025 ರ ಜೂನ್ ನಲ್ಲಿ ವಿಜ್ಞಾನ ವಿಭಾಗ ಪ್ರಾರಂಭವಾಗುತ್ತಿದ್ದು, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರವೇಶ ಪಡೆಯುವ 10 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದು, ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು ಎಂದು ಲಿಂಗಬಸವೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಶೋಕಜ್ಜ ಹಿರೇಮಠ ಹೇಳಿದರು.