ತಾಲೂಕು ಕಚೇರಿ ಮುಂದೆ ಶೌಚಾಲಯ: ಜನರ ವಿರೋಧ

KannadaprabhaNewsNetwork | Published : Apr 6, 2024 12:48 AM

ಸಾರಾಂಶ

ಮಾದರಿ ಶೌಚಾಲಯವನ್ನು ಮಿನಿ ವಿಧಾನ ಸೌಧದ ಮುಂದೆಯೇ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಾದರಿ ಶೌಚಾಲಯವನ್ನು ಮಿನಿ ವಿಧಾನ ಸೌಧದ ಮುಂದೆಯೇ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು-ಊಟಿ ಹೆದ್ದಾರಿಯ ಮಿನಿ ವಿಧಾನ ಸೌಧ (ತಾಲೂಕು ಕಚೇರಿ) ಆವರಣದಲ್ಲಿ ತಹಸೀಲ್ದಾರ್‌ ನಿವಾಸದ ಬಳಿಯೇ ಶೌಚಾಲಯ ನಿರ್ಮಿಸುವ ಮೂಲಕ ತಾಲೂಕು ಆಡಳಿತ ಮಿನಿ ವಿಧಾನ ಸೌಧದ ಅಂದ ಕೆಡಿಸಲು ಹೊರಟಿದಂತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲೂಕು ಕಚೇರಿಯ ಆವರಣದಲ್ಲಿ ಶೌಚಾಲಯ ಕಟ್ಟುವುದಕ್ಕೆ ಸಾರ್ವಜನಿಕರಿಂದ ವಿರೋಧವಿಲ್ಲ ಆದರೆ, ಕಟ್ಟುವ ಜಾಗದ ಬಗ್ಗೆ ವಿರೋಧ ಎಂದು ನೂರಾರು ಮಂದಿ ನಾಗರೀಕರು ಕನ್ನಡಪ್ರಭದೊಂದಿಗೆ ದೂರಿದ್ದಾರೆ.

ಈಗಾಗಲೇ ತಾಲೂಕು ಕಚೇರಿಯ ಆವರಣದಲ್ಲಿಯೇ ಶೌಚಾಲಯ ಇದೆ. ನಿರ್ವಹಣೆ ಇಲ್ಲದೆ ದುರ್ನಾತ ಬೀರುತ್ತಿದ್ದು ನಿರ್ವಹಣೆಯ ಕೊರತೆ ಹಿನ್ನಲೆ ಶೌಚಾಲಯ ಇದ್ದು ಇಲ್ಲಂದತಿದೆ. ಆದರೀಗ ೧೫ ಲಕ್ಷ ವೆಚ್ಚದಲ್ಲಿ ಆಸ್ಪರೇಷನಲ್‌ ಟಾಯ್ಲೆಟ್‌ ಕಟ್ಟಲು ವಿಶೇಷ ಅನುದಾನ ಬಂದಿದೆ. ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಪುರಸಭೆಗೆ ಹಸ್ತಾಂತರ ಕೂಡ ಆಗಿದೆ ಎನ್ನಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಮಾದರಿ ಶೌಚಾಲಯ ಕಟ್ಟುವ ಸಂಬಂಧ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ ಮಾದರಿ ಶೌಚಾಲಯ ಕಟ್ಟುವ ಸಂಬಂಧ ಟೆಂಡರ್‌ ಕೂಡ ಆಗಿದೆ. ಕಂದಾಯ ಇಲಾಖೆ ಜಾಗ ಪುರಸಭೆಗೆ ಹಸ್ತಾಂತರಿಸಿದೆ ಎಂದು ಸ್ಪಷ್ಟಪಡಿಸಿದರು. ಶೌಚಾಲಯ ಬೇಕೇ ಬೇಕು ಅದು ಗ್ರಾಮಾಂತರ ಪ್ರದೇಶದ ಜನರು ಹಾಗೂ ಪ್ರವಾಸಿಗರಿಗೆ ಬೇಕು. ಆದರೆ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ನಿರ್ಮಿಸದಿರಲು ತಾಲೂಕು ಆಡಳಿತ ವಿರುದ್ಧ ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್‌ ನಿವಾಸ, ತಾಲೂಕು ಕಚೇರಿಯ ಮುಂದೆ ಶೌಚಾಲಯ ಕಟ್ಟಬಾರದು. ಶಾಸಕರು ಶೌಚಾಲಯ ನಿಲ್ಲಿಸಿ ಬೇರೆಡೆ ಕಟ್ಟಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ವಿಶೇಷ ಅನುದಾನದಲ್ಲಿ ಮಾದರಿ ಶೌಚಾಲಯವನ್ನು ಗುಂಡ್ಲುಪೇಟೆ ಮಿನಿ ವಿಧಾನ ಸೌಧದ ಹಿಂದೆ ಕಟ್ಟಲು ಹೇಳಿದ್ದೇ. ಮುಂದೆ ಕಟ್ಟುವ ಮಾಹಿತಿ ನನಗಿಲ್ಲ. ಮಾದರಿ ಶೌಚಾಲಯ ಸಂಬಂಧ ಪುರಸಭೆ ಮುಖ್ಯಾಧಿಕಾರಿ ಜೊತೆ ಮಾತನಾಡಿ ಚರ್ಚಿಸಿ, ಬದಲಿಸಬೇಕೋ, ಬೇಡವೋ ತಿಳಿಸುತ್ತೇನೆ.-ಎಚ್.ಎಂ.ಗಣೇಶ್‌ ಪ್ರಸಾದ್‌, ಶಾಸಕರು, ಗುಂಡ್ಲುಪೇಟೆತಾಲೂಕು ಕಚೇರಿ ಮುಂದೆ ಶೌಚಾಲಯ ಕಟ್ಟುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಕಚೇರಿಯ ಮುಂದೆ ಕಟ್ಟುವ ಬಗ್ಗೆ ಹಿಂದಿನ ತಹಸೀಲ್ದಾರ್‌ ಆದೇಶ ನೀಡಿದ್ದಾರೆ. ನಾನು ಈ ವಿಚಾರದಲ್ಲಿ ಏನು ಹೇಳಲು ಆಗುತ್ತಿಲ್ಲ. ಸಾರ್ವಜನಿಕರ ದೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ.

-ಮಂಜುನಾಥ್‌, ತಹಸೀಲ್ದಾರ್‌

ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಮಾದರಿ ಶೌಚಾಲಯ ನಿರ್ಮಿಸಲು 15 ಲಕ್ಷ ವಿಶೇಷ ಅನುದಾನದಲ್ಲಿ ಕಟ್ಟಲು ಟೆಂಡರ್‌ ಕೂಡ ಆಗಿದೆ. ಸಾರ್ವಜನಿಕರ ವಿರೋಧದ ಬಗ್ಗೆ ಕನ್ನಡಪ್ರಭ ನನ್ನ ಗಮನಕ್ಕೆ ತಂದಿದೆ. ಈ ಸಂಬಂಧ ಶಾಸಕರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ.-ಕೆ.ಪಿ.ವಸಂತಕುಮಾರಿ,ಮುಖ್ಯಾಧಿಕಾರಿ, ಪುರಸಭೆ

Share this article