ಅಂಜುಮನ್‌ ಚುನಾವಣೆಯಲ್ಲಿ ಟ್ರ್ಯಾಕ್ಟರ್‌ ಕಮಾಲ್‌

KannadaprabhaNewsNetwork | Published : Feb 20, 2024 1:48 AM

ಸಾರಾಂಶ

ಟ್ರ್ಯಾಕ್ಟರ್‌ ಚಿಹ್ನೆಯ ಅಡಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಎದುರಾಳಿಗಳಿಗಿಂತ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು

ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಅಂಜುಮನ್ ಎ ಇಸ್ಲಾಂ ಸಂಸ್ಥೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದ ಬಣ ಗೆಲುವಿನ ನಗೆ ಬೀರಿದೆ. ಎಲ್ಲ 52 ಸ್ಥಾನಗಳನ್ನು ಹಿಂಡಸಗೇರಿ ಬಣದವರೆ ಗೆಲ್ಲುವ ಮೂಲಕ ಹಿಂದೆ ಅಧ್ಯಕ್ಷರಾಗಿದ್ದ ಯೂಸೂಫ್‌ ಸವಣೂರ ಬಣಕ್ಕೆ ಭಾರಿ ಮುಖಭಂಗವಾಗಿದೆ.

ಭಾನುವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುರುಸಿನ ಮತದಾನ ನಡೆಯಿತು. ಸಂಜೆ 7 ಗಂಟೆಯಿಂದ ಆರಂಭವಾದ ಮತ ಎಣಿಕೆಯು ತಡರಾತ್ರಿಯವರೆಗೂ ನಡೆಯಿತು. ಈ ವೇಳೆ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಗೆಲುವು ಖಚಿತವಾಗುತ್ತಿದ್ದಂತೆ ಇತ್ತ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

121 ವರ್ಷಇತಿಹಾಸ ಹೊಂದಿರುವ ಅಂಜುಮನ್ ಇ ಇಸ್ಲಾಂ ಸಂಸ್ಥೆಯ ಒಟ್ಟು 52 ಸ್ಥಾನಗಳಿಗೆ 215 ಜನರು ಸ್ಪರ್ಧಿಸಿದ್ದರು. ಒಟ್ಟು 11903 ಮತದಾರರಲ್ಲಿ 8491 ಜನ ಮತ ಚಲಾಯಿಸಿದ್ದರು. ಓರ್ವ ಮತದಾರ 52 ಅಭ್ಯರ್ಥಿಗಳಿಗೆ ಮತದಾನ ಮಾಡುವ ಅವಕಾಶವಿತ್ತು.

ಎರಡು ವರ್ಷಗಳ ಹಿಂದೆಯೇ ಚುನಾವಣೆ ನಡೆಯಬೇಕಾಗಿತ್ತಾದರೂ ಸಂಸ್ಥೆಯಲ್ಲಿರುವ ಕೆಲವರು ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಚುನಾವಣೆ ವಿಳಂಬವಾಗಿತ್ತು. ಇತ್ತೀಚೆಗೆ ಕೋರ್ಟ್ ಅನುಮತಿ ನೀಡುತ್ತಿದ್ದಂತೆ ವಕ್ಫ್ ಬೋರ್ಡ್ ಭಾನುವಾರ ಚುನಾವಣೆ ನಡೆಸಿ ಅಂದೇ ಮತಎಣಿಕಾ ಕಾರ್ಯ ಪೂರ್ಣಗೊಳಿಸಿತು.

ಟ್ರ್ಯಾಕ್ಟರ್‌ ಕಮಾಲ್: ಟ್ರ್ಯಾಕ್ಟರ್‌ ಚಿಹ್ನೆಯ ಅಡಿ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಎದುರಾಳಿಗಳಿಗಿಂತ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಅಂಜುಮನ್‌ ಎ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು.

ಎ.ಎಂ.ಹಿಂಡಸಗೇರಿ 3789 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಇವರ ಪ್ರತಿಸ್ಪರ್ಧಿ ಅಟೋ ಚಿಹ್ನೆಯಡಿ ಸ್ಪರ್ಧಿಸಿದ್ದ ನಜೀರಅಹ್ಮದ ಗದಗಕರ್‌ 1899 ಮತಗಳನ್ನು ಪಡೆದು ಸೋಲು ಕಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಬ್ದುಲ್ ಅತ್ತಾರ ಖಾದರ 3602 ಮತ ಪಡೆದು ಗೆಲುವು ಸಾಧಿಸಿದರೆ, ಇವರ ಪ್ರತಿಸ್ಪರ್ಧಿ ಅಬ್ದುಲ್‌ ವಹಾಬ್‌ ಮುಲ್ಲಾ 2068 ಮತ ಪಡೆದು ಸೋಲನುಭವಿಸಿದರು.

ಕಾರ್ಯದರ್ಶಿ ಸ್ಥಾನಕ್ಕೆ ಬಸೀರ ಅಹ್ಮದ ಹಳ್ಳೂರ 3544 ಮತ ಪಡೆದು ಗೆಲುವು ಕಂಡರೆ, (ಮೊಹಮ್ಮದ ಆರಿಫ್‌ ಮುಜಾವರ- 2139), ಖಜಾಂಚಿ ಸ್ಥಾನಕ್ಕೆ ದಾದಾಹಯಾತ್ ಖೈರಾತಿ 3609 ಮತ ಪಡೆದು ಗೆಲುವು ಕಂಡರೆ (ನಾಸೀರ್‌ ಅಸುಂಡಿ- 2206), ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಮಹ್ಮದರಫೀಕ ಬಂಕಾಪುರ 3636 ಮತಗಳನ್ನು ಪಡೆದು ಗೆಲುವು ಕಂಡರೆ (ಗೈಬುಸಾಬ ಹೊನ್ಯಾಳ -2066), ಆಸ್ಪತ್ರೆ ಕಾರ್ಯದರ್ಶಿ ಸ್ಥಾನಕ್ಕೆ ಇರ್ಶಾದಅಹ್ಮದ ಬಳ್ಳಾರಿ 3604 ಮತ ಪಡೆದು ಗೆಲುವು ( ಆಸೀಪ್‌ ಬಳ್ಳಾರಿ-1919) ಕಂಡರು.

ಶಿಕ್ಷಣ ಮಂಡಳಿಯ 7ಸದಸ್ಯ ಸ್ಥಾನಗಳ ಚುನಾವಣೆಯಲ್ಲಿ ಮಹ್ಮದಸಾಬ ಕೋಳೂರ, ಮಹ್ಮದ ಇಲಿಯಾಸ ಮನಿಯಾರ, ಶಮಷೇರ ನಾಯಿಕವಾಡಿ, ಮಹ್ಮದ ಸಲೀಂ ಸುಂಡಕೆ, ರಿಯಾಜಅಹ್ಮದ ಖತಿಬ್, ಬಸೀರಅಹ್ಮದ ಗುಡಮಾಲ, ನವೀದ್ ಮುಲ್ಲಾ ಆಯ್ಕೆಯಾದರೆ, ಆಸ್ಪತ್ರೆ ಮಂಡಳಿಯ 4 ಸದಸ್ಯ ಸ್ಥಾನಗಳಿಗೆ ಫಾರೂಕ್‌ ಅಹ್ಮದ ಅಬ್ಬುನವರ, ದಾವುದ್‌ ನದಾಫ, ಜಹೀರ್‌ ಅಬ್ಬಾಸ ಯರಗಟ್ಟಿ, ಸಿರಾಜ್‌ ಕುಡಚಿವಾಲೆ ಆಯ್ಕೆಯಾದರು.

ಪೋಷಕ ಸದಸ್ಯರ 10 ಸ್ಥಾನಗಳಿಗೆ ಮಹ್ಮದ ಇಕ್ಬಾಲ್‌ ಕೊನಗಾರ, ಮಹ್ಮದ ಅಕ್ತರ್‌ ಲಗಧಕ, ನಸೀರುದ್ದೀನ ಚುಲಬುಲ, ರಿಯಾಜಅಹ್ಮದ ಸೌದಾಗರ, ನಿಸ್ಸಾರಅಹ್ಮದ ಪಲ್ಲಾಂ, ಮೆಹಬೂಬಸಾಬ ಕಾಠೇವಾಡಿ, ಜಾವೇದಅಹ್ಮದ ಕಿತ್ತೂರ, ಮುಶ್ತಾಕಅಹ್ಮದ ಮುನಶಿ, ಅಬ್ದುಲ್‌ ಖರೀಮ್‌ ಮಿಶ್ರಿಕೋಟಿ, ಫಾರೂಖಅಹ್ಮದ ಕಾಲೆಬುಡ್ಡೆ ಆಯ್ಕೆಯಾದರು.

ಅಜೀವ ಸದಸ್ಯರ 25 ಸ್ಥಾನಗಳಿಗೆ ಇಮಾಮಹುಸೇನ ಐನಾಪುರಿ,ರಾಜೇಸಾಬ ಬೀಳಗಿ, ಹಜರತ್‌ ಬಿಲಾಲ ಬೇಪಾರಿ, ದಾದಾಹಯಾತ್‌ ಬೇಪಾರಿ, ಮಹ್ಮದಗೌಸ ಮಂಚಿನಕೊಪ್ಪ, ನಿಸಾರಅಹ್ಮದ ಧಾರವಾಡ, ಅಸ್ಗರಅಲಿ ಹೆಬ್ಬಳ್ಳಿ, ಮುಶತಾಖಅಹ್ಮದ ಬ್ಯಾಳಿ, ಮೊಹಮ್ಮದ ಖಾದರಸಾಬ ಅಧೋನಿ, ದಾವಲಸಾಬ ನದಾಫ, ಜಹೀರಅಬ್ಬಾಸ ಹಕೀಮ್, ಮಹ್ಮದಗೌಸ್‌ ಚೌಧರಿ, ನಾಸೀರ ಮಾಣಿಕ, ಮೋದಿನಸಾಬ ಬೆಟಗೇರಿ, ನೂರಅಹ್ಮದ ಬಿಜಾಪುರ, ಅಬ್ದುಲ್‌ ಜಮಖಾನೆ, ಮೊಹಮ್ಮದ ಸಾಜಿದ ಗುಬ್ಬಿ, ಅಸೀಫ ಲೋಕಾಪಲ್ಲಿ, ಅಬ್ದುಲ್‌ ಶೂಕುರ ಸರ್ಗೀರೊ, ಮಹ್ಮದ ರಫೀಕ ನದಾಫ, ನಿಸಾರಅಹ್ಮದ ನೀಲಗಾರ, ಇಮ್ತಿಯಾಜ ನಾಯಕವಾಡಿ, ಶೋಯೇಬ್‌ ಮುದ್ದೇಬಿಹಾಳ, ಮೊಹಮ್ಮದಗೌಸ ಕಟ್ಟಿಮನಿ, ಮೊಹಮ್ಮದ ಸಾದಿಕ ಬ್ಯಾಹಟ್ಟಿ ಆಯ್ಕೆಯಾದರು.

Share this article