ಇಂದು ಮಲೇಬೆನ್ನೂರಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ: ಡಿಸಿ

KannadaprabhaNewsNetwork |  
Published : Sep 18, 2025, 02:00 AM IST
ಕ್ಯಾಪ್ಷನ17ಕೆಡಿವಿಜಿ39 ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ | Kannada Prabha

ಸಾರಾಂಶ

ಮಲೇಬೆನ್ನೂರು ಪಟ್ಟಣದ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸೆ.18ರಂದು ನಡೆಯಲಿದೆ. ಈ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗ್ಗೆ 11ರಿಂದ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ.

- ಹಿಂದೂ ಮಹಾಗಣಪತಿ ಮೆರವಣಿಗೆ ಹಿನ್ನೆಲೆ ಕ್ರಮ

- - -

ದಾವಣಗೆರೆ: ಮಲೇಬೆನ್ನೂರು ಪಟ್ಟಣದ ಪಿಡಬ್ಲ್ಯೂಡಿ ಕಚೇರಿ ಆವರಣದಲ್ಲಿ ಪ್ರತಿಷ್ಟಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸೆ.18ರಂದು ನಡೆಯಲಿದೆ. ಈ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬೆಳಗ್ಗೆ 11ರಿಂದ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ.

ಮೆರವಣಿಗೆಯು ಮಲೇಬೆನ್ನೂರು ಪಟ್ಟಣದ ಪಿಡಬ್ಲ್ಯೂಡಿ ಇಲಾಖೆ ಮೈದಾನದಿಂದ ಪ್ರಾರಂಭವಾಗಿ ಎಸ್.ಎಚ್. ರಸ್ತೆ, ಹಳೇ ಗ್ರಾಪಂ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಸಂತೆ ರಸ್ತೆ, ಬನ್ನಿಮಂಟಪ ಕ್ರಾಸ್, ಬನ್ನಿಮಂಟಪ, ಜಿಗಳಿ ಸರ್ಕಲ್-ಎಸ್‌ಎಚ್ ರಸ್ತೆ, ಹಳೇ ಗ್ರಾಪಂ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಕಲೇಶ್ವರ ದೇವಸ್ಥಾನ, ಕಾಲಭೈರವ ದೇವಸ್ಥಾನ, ಜಾಮೀಯ ಮಸೀದಿ, ಹಳೇ ಗ್ರಾಪಂ ಸರ್ಕಲ್, ಎಸ್‌ಎಚ್ ರಸ್ತೆ, ಪೊಲೀಸ್ ಠಾಣೆ ಕ್ರಾಸ್, ಜ್ಯೋತಿ ಟಾಕೀಸ್ ರಸ್ತೆಯ ಮೂಲಕ ಸಾಗಲಿದೆ ಎಂದಿದ್ದಾರೆ.

ಹರಿಹರ ಹಾಗೂ ದಾವಣಗೆರೆ ಕಡೆಯಿಂದ ಬರುವ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಪ್ರಯಾಣಿಕರನ್ನು ಹಾಗೂ ಕಾರುಗಳು, ಬೈಕ್‌ಗಳು ಕುಂಬಳೂರು ಗ್ರಾಮದಿಂದ ನಿಟ್ಟೂರು ಮೂಲಕ ಹರಳಹಳ್ಳಿ ರಸ್ತೆಯ ಮೂಲಕ ಮಲೇಬೆನ್ನೂರಿಗೆ ತಲುಪುವುದು. ಹರಿಹರ ಕಡೆಯಿಂದ ಹೊನ್ನಾಳಿಗೆ ಹಾಗೂ ಶಿವಮೊಗ್ಗಕ್ಕೆ ಹೋಗಲಿರುವ ವಾಹನಗಳು (ಟ್ರಕ್ ಲಾರಿಗಳು) ಎಕ್ಕೆಗೊಂದಿ ಕ್ರಾಸ್‌ನಿಂದ ನಂದಿಗುಡಿ ಮಾರ್ಗವಾಗಿ ತುಮ್ಮಿನಕಟ್ಟೆ ತಲುಪಿ ಹೊನ್ನಾಳಿ ತಲುಪುವುದು.

ಹೊನ್ನಾಳಿ ಕಡೆಯಿಂದ ಬರುವ ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಮತ್ತು ಕಾರುಗಳು ಹಾಗೂ ಬೈಕ್ ಚಾಲಕರು ಕೊಮಾರನಹಳ್ಳಿಯಿಂದ ಚಾನಲ್ ಪಕ್ಕದ ರಸ್ತೆಯ ಮೂಲಕ ಮಲೇಬೆನ್ನೂರು ಶಾದಿ ಮಹಲ್ ಬಳಿಯಿಂದ ಜಿಗಳ ಸರ್ಕಲ್ ಮೂಲಕ ಎಸ್‌ಎಚ್ ರಸ್ತೆ ತಲುಪಿ, ಹರಿಹರದ ಕಡೆಗೆ ಸಂಚರಿಸಬೇಕು ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.

- - -

-17ಕೆಡಿವಿಜಿ39: ಜಿ.ಎಂ.ಗಂಗಾಧರ ಸ್ವಾಮಿ

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ