ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರವು ನರೇಗಾ ಯೋಜನೆಯಲ್ಲಿ ಜಾನುವಾರುಗಳ ಮೇವು ಬೆಳೆಯಲು ಪ್ರತಿ ಎಕರೆಯೊಂದಕ್ಕೆ ೨೦ ಸಾವಿರ ರು. ಸಹಾಯಧನ ನೀಡಲಿದೆ. ಜೊತೆಗೆ ಮೇವು ಉತ್ಪಾದನೆಗೆ ಅಗತ್ಯವಾದ ಬಿತ್ತನೆ ಬೀಜ ಮತ್ತು ಕೃಷಿ ಉಪಕರಣಗಳನ್ನು ನೀಡಲಿದೆ ಎಂದು ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಬಿ. ತಿಳಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾನುವಾರುಗಳಿಗೆ ಹಸಿರು ಮೇವು ಒದಗಿಸಲು ಹುಲ್ಲು, ಜೋಳದ ಕಡ್ಡಿ, ಜೊತೆಗೆ ಕೆಲವು ಗಿಡ ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ವರ್ಷಪೂರ್ತಿ ಜಾನುವಾರುಗಳಿಗೆ ಮೇವಿನ ಸಮಸ್ಯೆ ಇಲ್ಲದಂತೆ ನಿರ್ವಹಣೆ ಮಾಡಬಹುದಾಗಿದೆ. ಹಸಿರು ಮೇವು ನೀಡುವುದರಿಂದ ಹಾಲಿನ ಇಳುವರಿ ಹೆಚ್ಚಾಗಲಿದೆ ಎಂದು ಹೇಳಿದರು.ಜಾನುವಾರು ಸಾಕಾಣಿಕೆಗೆ ಶೆಡ್ಹಸು, ಎಮ್ಮೆ, ಕುರಿ, ಮೇಕೆಗಳ ಸಾಕಾಣಿಕೆಗೆ ಅಗತ್ಯವಾದ ಶೆಡ್ ನಿರ್ಮಾಣಕ್ಕೂ ಸಹ ಸರ್ಕಾರ ಸಂಜೀವಿನಿ ಶೆಡ್ ಯೋಜನೆಯ ನೆರವು ಪಡೆಯಬಹುದಾಗಿದೆ. ಸರ್ಕಾರವು ನೀಡುವಂತ ಸೌಲಭ್ಯಗಳನ್ನು ಸದ್ಬಳಿಸಿಕೊಂಡಲ್ಲಿ ಕೃಷಿಗೆ ಉಪ ಕಸಬಾಗಿ ಹೈನುಗಾರಿಕೆ ಜೊತೆಗೆ ರೇಷ್ಮೆ ಕೃಷಿ ಸಹ ಕೋಲಾರ ಜಿಲ್ಲೆ ಖ್ಯಾತಿ ಪಡೆದಿದೆ. ಎಂತಹ ಬರಗಾಲ ಬಂದರೂ ಕೃಷಿಯ ಉಪ ಕಸುಬುಗಳು ರೈತನ ಜೀವನ ನಿರ್ವಹಣೆಗೆ ಆಧಾರ ಸ್ತಂಭಗಳಾಗಿವೆ, ಇವುಗಳ ಜೊತೆಗೆ ತರಕಾರಿ, ಮಾವು ಸಪೋಟ, ಹಲಸು, ದ್ರಾಕ್ಷಿ ಕೃಷಿಗೂ ರೈತರು ಗಮನ ಹರಿಸುತ್ತಿರುವುದು ತೋಟಗಾರಿಕೆಯ ಅಭಿವೃದ್ಧಿಗೆ ಪೂರಕ ಎಂದು ಅಭಿಪ್ರಾಯಪಟ್ಟರು.ನರೇಗಾದಲ್ಲಿ ನೂರಾರು ಯೋಜನೆಗಳಿಂದ ಮಾನವ ಉದ್ಯೋಗ ದಿನಗಳು 8 ರಿಂದ 9 ಲಕ್ಷಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ರಾಜ್ಯದಲ್ಲಿಯೇ ಕೋಲಾರವು ಪ್ರಥಮ ಸ್ಥಾನ ಪಡೆದಿತ್ತು. ಪ್ರಸಕ್ತ ಸಾಲಿನಲ್ಲಿ ಹಿಂಗಾರು ಮಳೆ ಇಲ್ಲದೆ. ಬರದಿಂದಾಗಿ ರಾಜ್ಯದಲ್ಲಿ ಕೋಲಾರವು ೫ ಸ್ಥಾನದೊಳಗೆ ಇರುತ್ತದೆ ಎಂದು ನಿರೀಕ್ಷಿಸಬಹುದಾಗಿದೆ ಎಂದು ಹೇಳಿದರು.
ಕೆರೆಗಳ ಅಭಿವೃದ್ಧಿಗೆ ಒತ್ತುಕೆರೆ, ಕಲ್ಯಾಣಿ, ಗೊಕುಂಟೆ, ಮುಂತಾದವುಗಳ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನರೇಗಾದಲ್ಲಿ ೫೫೦ ಕಾಮಗಾರಿಗಳ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಕೆರೆಗಳ ಅಣೆಕಟ್ಟು, ಚೆಕ್ ಡ್ಯಾಂ ಅಭಿವೃದ್ದಿ, ಊಳು ಎತ್ತುವಿಕೆ, ನೀರು ಶುದ್ಧೀಕರಣ, ಸ್ವಚ್ಛತೆ, ದುರಸ್ತಿ ಕಾರ್ಯಗಳು ಸೇರಿದಂತೆ ಹಲವಾರು ರೀತಿಯಲ್ಲಿ ಅಭಿವೃದ್ಧಿಗಳನ್ನು ಮಾಡುವುದರ ಜೊತೆಗೆ ಸಾರ್ವಜನಿಕರ ಸರ್ಕಾರದ ಆಸ್ತಿಗಳನ್ನು ಸಂರಕ್ಷಣೆಗೆ ಸರ್ವೇ ಕಾರ್ಯಗಳ ಮೂಲಕ ಜಾಗಗಳನ್ನು ಗುರುತಿಸಿ ಫೆನ್ಸಿಂಗ್, ಕಲ್ಲಿನ ಬೌಂಡರಿಗಳನ್ನು ಹಾಕುವ ಮೂಲಕ ಭದ್ರಪಡಿಸಿ ಗಿಡ ಮರಗಳನ್ನು ಬೆಳೆಸುವ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.ಈಗಾಗಲೇ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆಯಲ್ಲಿ ೨೫೦ ಕೆರೆಗಳ ಹೂಳು ತೆಗೆದು, ಸರ್ವೆ ಮೂಲಕ ಬೌಂಡರಿಗಳನ್ನು ಗುರುತಿಸಿ ಕೆರೆಕಟ್ಟೆಗಳ ಕಾಮಗಾರಿಗಳು, ಚೆಕ್ ಡ್ಯಾಂಗಳ ಮೂಲಕ ನೀರು ಇಂಗುವಿಕೆ, ಕೊಳಚೆ ನೀರು ವಿಭಜಿಸಿ ಶುದ್ಧೀಕರಣ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವಿಕೆ, ಕೊಳವೆಬಾವಿಗಳ ಮರು ಪೂರ್ಣ, ಇತ್ಯಾದಿಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.ಕೆರೆ ಹೂಳೆತ್ತಲು ಕಾಮಗಾರಿಇದರ ಜೊತೆಗೆ ಕೆನರಾ ಬ್ಯಾಂಕ್, ಎಸ್.ಬಿ.ಐ. ಸ್ಟೀಲ್ ಆರ್ಚರಿ, ಇತರೆ ಕೈಗಾರಿಕೆಗಳ ಸಿ.ಎಸ್.ಆರ್. ಅನುದಾನದಿಂದ ೧೩ ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ಕೈಗೆತ್ತಿಕೊಂಡಿದೆ. ನರೇಗಾದಲ್ಲಿ ೧೫೦ ಕೆರೆಗಳ ಹೂಳು ತೆಗೆಯುವ ಕಾಮಗಾರಿ ಆಗಿದೆ. ಇದರೊಂದಿಗೆ ನರೇಗಾದಲ್ಲಿ ವೈಯಕ್ತಿಕ ಕಾಮಗಾರಿಗಳು, ಜನ ಜೀವನ್ ಮೀಷನ್ ಟೆಂಡರ್ ಪ್ರಕ್ರಿಯೆ ಮುಂದುವರೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆಯು ಹಲವು ಕೆರೆಗಳ ಅಭಿವೃದ್ಧಿ ಕೈಗೆತ್ತಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಹೇಳಿದರು.ತೆರಿಗೆ ವಸೂಲಿ ಚುರುಕುಗೊಳಿಸಿ
ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಚುರುಕುಗೊಳಿಸಿ ಆರ್ಥಿಕವಾಗಿ ಸದೃಢಪಡಿಸಲು ಒತ್ತು ನೀಡಲಾಗಿದೆ. ಪಂಚಾಯತ್ ಮಟ್ಟದಲ್ಲಿ ಗ್ರಂಥಾಲಯಗಳ ಅಭಿವೃದ್ಧಿಯ ಕಡೆಗೂ ಗಮನಹರಿಸಿದೆ, ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಹಲವು ವಿಶೇಷ ಯೋಜನೆಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.